ಕೋಲಾರದ ಮಾಲೂರಿನಲ್ಲಿ ಹೈ ಟೆಕ್ ಅಕ್ರಮ ಫಿಲ್ಟರ್ ಮರಳು ದಂಧೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಫಿಲ್ಟರ್ ಮರಳಲ್ಲಿ ಮಣ್ಣಿನ ಬಣ್ಣವು ತೆಳ್ಳಗೆ ಕಾಣುವುದರಿಂದ‌ ಹೆಚ್ಚು ಜನರು ಮರಳು ನೋಡಿ ಮೋಸ ಹೋಗುತ್ತಿದ್ದಾರೆ. ಇದರಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲವಾದ್ದರಿಂದ ಮನೆ ನಿರ್ಮಾಣ ಕಾಮಗಾರಿಗೆ ಮರಳು ಬಳಸೋದರಿಂದ ನಿಧಾನವಾಗಿ ಗೋಡೆಗಳು ಬಿರುಕು ಬಿಡುತ್ತವೆ ಎಂದು ಹೇಳಲಾಗುತ್ತದೆ.

ಫಿಲ್ಟರ್ ಮರಳು ದಂಧೆ.

ಫಿಲ್ಟರ್ ಮರಳು ದಂಧೆ.

  • Share this:
ಕೋಲಾರ: ಕೋಲಾರ ಜಿಲ್ಲೆಯನ್ನು ಅಕ್ರಮ ಮರಳುಗಾರಿಕೆ ಬಿಟ್ಟು ಬಿಡದಂತೆ ಕಾಡುತ್ತಿದೆ. ಅಂತರ್ಜಲ ಮಟ್ಟ ಈಗಾಗಲೇ ಪಾತಾಳಕ್ಕೆ ತಲುಪಿದ್ದು ಕಳೆದ ೧೦ ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೆ ಜಿಲ್ಲೆಯ ಗಡಿಗಳಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಕೋಲಾರ ಜಿಲ್ಲಾಡಳಿತ ಕಣ್ಣಿದ್ದು ಕಾಣದಂತೆ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.

ಮಾಲೂರು ತಾಲೂಕಿನ ಸಂತೆಹಳ್ಳಿ, ನಿಡಘಟ್ಟ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಕೆರೆಗಳಲ್ಲಿ ಮಣ್ಣನ್ನ ತೆಗೆದು ಅಲ್ಲಿಯೇ ಟ್ರ್ಯಾಕ್ಟರ್​ಗಳ ಸಹಾಯದಿಂದ ಫಿಲ್ಟರ್ ಮಾಡಲಾಗುತ್ತಿದೆ.
ಲಾರಿ ಟ್ರ್ಯಾಕ್ಟರ್​ಗಳಿಂದ ಮರಳು ಪ್ರತಿನಿತ್ಯ ಸಾಗಾಟ ನಡೆಯುತ್ತಿದ್ದು, ಒಂದು ಲೋಡ್ ಟ್ರ್ಯಾಕ್ಟರ್ ಮರಳನ್ನು 3 ರಿಂದ 4 ಸಾವಿರಕ್ಕೆ ಮತ್ತು ಲಾರಿ ಲೋಡ್ 20 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರ ಸ್ಥಳೀಯ ಪೊಲೀಸರು, ಪಂಚಾಯ್ತಿ ಅಧಿಕಾರಿಗಳು ಹಾಗು ತಾಲೂಕು ಆಡಳಿತಕ್ಕೆ ಮಾಹಿತಿ ಗೊತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದೂ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೆರೆಯಲ್ಲಿ ಒಡ್ಡು ನಿರ್ಮಿಸಿ ಗುಡ್ಡೆ ಹಾಕಿದ ಮಣ್ಣಿನ ಮೇಲೆ ನೀರನ್ನ ಜೋರಾಗಿ ಹಾಯಿಸಿದರೆ ಮಣ್ಣಲ್ಲಿನ ದೂಳೆಲ್ಲ ಕೆಳಗೆ ಹರಿದು ಹೋಗುವಂತೆ ಮಾಡುವುದು ಮರಳು ಫಿಲ್ಟರ್ ಮಾಡುವ ಹಳೆಯ ಪದ್ದತಿ. ಆದರೆ ಮಾಲೂರು ತಾಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆ ಕೊಂಚ ವಿಭಿನ್ನವಾಗಿದೆ. ಟ್ರ್ಯಾಕ್ಟರ್ ಟ್ರಾಲಿಗಳಲ್ಲೇ ದಂಧೆಕೋರರು ಮರಳು ಫಿಲ್ಟರ್ ಮಾಡುತ್ತಿದ್ದಾರೆ.

ಫಿಲ್ಟರ್ ಮರಳು ಮನೆ ನಿರ್ಮಾಣಕ್ಕೆ ಯೋಗ್ಯವಲ್ಲ

ಫಿಲ್ಟರ್ ಮರಳಿಂದ ಮನೆ ನಿರ್ಮಾಣ ಮಾಡಿದರೆ ಗೋಡೆಗಳು ಬಿರುಕು ಬಿಡುತ್ತವೆ ಎಂಬ ಮಾತುಗಳು ಕೇಳಿಬಂದಿದೆ. ಫಿಲ್ಟರ್ ಮರಳಲ್ಲಿ ಮಣ್ಣಿನ ಬಣ್ಣವು ತೆಳ್ಳಗೆ ಕಾಣುವುದರಿಂದ‌ ಹೆಚ್ಚು ಜನರು ಮರಳು ನೋಡಿ ಮೋಸ ಹೋಗುತ್ತಿದ್ದಾರೆ. ಇದರಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲವಾದ್ದರಿಂದ ಮನೆ ನಿರ್ಮಾಣ ಕಾಮಗಾರಿಗೆ ಮರಳು ಬಳಸೋದರಿಂದ ನಿಧಾನವಾಗಿ ಗೋಡೆಗಳು ಬಿರುಕು ಬಿಡುತ್ತವೆ ಎಂದು ಹೇಳಲಾಗುತ್ತದೆ. ಮರಳಿನ ಅಭಾವ ತಪ್ಪಿಸಲು ಈಗಾಗಲೇ ಜಿಲ್ಲೆಯ ಹಲವೆಡೆ ಫಿಲ್ಟರ್ ಎಂ ಸ್ಯಾಂಡ್ ಘಟಕಗಳನ್ನು ಖಾಸಗಿಯವರ ಮಾಲೀಕತ್ವದಲ್ಲಿ ಸ್ಥಾಪನೆ ಮಾಡಲಾಗಿದ್ದು, ಮನೆ ನಿರ್ಮಾಣಕ್ಕೆ ಎಂ ಸ್ಯಾಂಡ್ ಸೂಕ್ತ ಎಂದು ಕೋಲಾರ ಜಿಲ್ಲಾಡಳಿತ ಈ ಹಿಂದೆಯೆ ಮಾಹಿತಿ ನೀಡಿದೆ.

ಇದನ್ನು ಓದಿ: ರೋಮ್​ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಅರಣ್ಯ ಸಚಿವ ಅನಂದ್ ಸಿಂಗ್ ಮಗಳು; ಪುತ್ರಿ ರಕ್ಷಣೆಗೆ ಮನವಿ

ಒಟ್ಟಿನಲ್ಲಿ ಮಾಲೂರಿನಲ್ಲಿ ನೈಸರ್ಗಿಕ ಸಂಪತ್ತು ಲೂಟಿಕೋರರ ಪಾಲಾಗಿದ್ದು
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮರಳು ಮಾಫಿಯಾಗೆ ಬ್ರೇಕ್ ಹಾಕಬೇಕಿದೆ.

ವರದಿ - ರಘುರಾಜ್ 
First published: