ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆ - ಗಣರಾಜ್ಯೋತ್ಸವಕ್ಕೆ ಎಲ್ಲ ರೀತಿಯ ಭದ್ರತೆ ; ವಿ.ಸೋಮಣ್ಣ

ನಾನೇ ರಾತ್ರಿ 11 ಗಂಟೆ ಸುಮಾರಿಗೆ ಒಬ್ಬನೇ ಕಬ್ಬನ್ ಪಾರ್ಕ್ ಸುತ್ತಾಡಿದ್ದೇನೆ. ನನಗೂ ಕೆಲ ಅಕ್ರಮಗಳು ಕಣ್ಣಿಗೆ ಬಿದ್ದಿವೆ. ಇನ್ಮುಂದೆ ಯಾವ ಅಕ್ರಮ ದರೋಡೆ, ಸುಲಿಗೆ ನಡೆಯದಂತೆ ಕ್ರಮಕೈಗೊಳ್ಳುತ್ತೇನೆ ಎಂದರು.

news18-kannada
Updated:January 22, 2020, 8:55 AM IST
ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆ - ಗಣರಾಜ್ಯೋತ್ಸವಕ್ಕೆ ಎಲ್ಲ ರೀತಿಯ ಭದ್ರತೆ ; ವಿ.ಸೋಮಣ್ಣ
ಸಚಿವ ವಿ. ಸೋಮಣ್ಣ
  • Share this:
ಬೆಂಗಳೂರು(ಜ.22) : ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆ ಗಣರಾಜ್ಯೋತ್ಸವದಂದು ಲಾಲ್ ಬಾಗ್ ನಲ್ಲಿ ಎಲ್ಲಾ ರೀತಿಯಲ್ಲೂ ಭದ್ರತೆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. 10 ಮೆಟಲ್ ಡಿಟೆಕ್ಟರ್, 300 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದರು.

ಲಾಲ್ ಬಾಗ್, ಕಬ್ಬನ್ ಪಾರ್ಕ್ ಪ್ರತಿಷ್ಠಿತ ವಾಯುವಿಹಾರ ಸ್ಥಳಗಳು ಇಲ್ಲಿ ಮೂಲಭೂತ ವ್ಯವಸ್ಥೆ, ನಡಿಗೆದಾರರಿಗೆ ಭದ್ರತೆ ಗೆ ತೋಟಗಾರಿಗೆ ಇಲಾಖೆಯಿಂದ ನೀಡಲಾಗುತ್ತಿದೆ. ನಾನೇ ರಾತ್ರಿ 11 ಗಂಟೆ ಸುಮಾರಿಗೆ ಒಬ್ಬನೇ ಕಬ್ಬನ್ ಪಾರ್ಕ್ ಸುತ್ತಾಡಿದ್ದೇನೆ. ನನಗೂ ಕೆಲ ಅಕ್ರಮಗಳು ಕಣ್ಣಿಗೆ ಬಿದ್ದಿವೆ. ಇನ್ಮುಂದೆ ಯಾವ ಅಕ್ರಮ ದರೋಡೆ, ಸುಲಿಗೆ ನಡೆಯದಂತೆ ಕ್ರಮಕೈಗೊಳ್ಳುತ್ತೇನೆ ಎಂದರು.

ಕಡಿಮೆ ಸೆಕ್ಯೂರಿಟಿ ಹಾಕಿ ನಕಲಿ ಬಿಲ್ ಸೃಷ್ಠಿಸಿ ಬಿಲ್ ಮಾಡಿಸಿಕೊಂಡ ಆರೋಪ ಕಬ್ಬನ್​​​ಪಾರ್ಕ್​​​​ ನಲ್ಲಿ 24 ಸೆಕ್ಯೂರಿಟಿ ನಿಯೋಜನೆ ಮಾಡುವ ಕಡೆ ಕೇವಲ  5 ರಿಂದ 6 ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ. ಚಿ.ನಾ.ರಾಮು ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಾರೆ ಎಂಬುದೇ ಗೊತ್ತಿಲ್ಲ.  ಏನು ಕಂಡಿಷನ್ ನಲ್ಲಿ ಸೆಕ್ಯೂರಿಟಿ ಏಜೆನ್ಸಿ ತೆಗೆದುಕೊಂಡಿದ್ದಾರೆ. ಅದರ ಪ್ರಕಾರ ಸೆಕ್ಯೂರಿಟಿ ನೀಡಬೇಕು. ಇದರಲ್ಲಿ ಸಣ್ಣ ಅಪಚಾರವಾಗಿದ್ರು ಸಹಿಸೋದಿಲ್ಲ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಮಂಗಳೂರು ಬಾಂಬ್ ಪತ್ತೆ, ಸ್ಪೋಟ ಒಂದು ಅಣಕು ಪ್ರದರ್ಶನ; ಇದು RSS​ ಸರ್ಕಾರವಲ್ಲ ಜನರ ಸರ್ಕಾರ; ಎಚ್ಡಿಕೆ

ಮಂಗಳೂರಿನಲ್ಲಿ ಸಜೀವ ಬಾಂಬ್ ದು ಅಣಕು ಪ್ರದರ್ಶನದಂತಿತ್ತು ಅಂತ ಎಚ್ ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎರಡು ಬಾರೀ ಮುಖ್ಯಮಂತ್ರಿ ಯಾಗಿದ್ದವರು ಕೆಲವೊಮ್ಮೆ ಹೀಗೆ ಆಡುತ್ತಾರೆ. ಕುಮಾರಸ್ವಾಮಿಯವರಿಗೆ ಮಾಜಿ ಪ್ರಧಾನಿ ದೇವೆಗೌಡರು ಸರಿಯಾಗಿ‌ ತರಬೇತಿ ನೀಡಿಲ್ಲ. ಹಿಟ್ ಆಂಡ್ ರನ್ ಅವರ ಜಾಯಮಾನ. ಈ ವಿಚಾರವನ್ನು ದೇವೆಗೌಡರು ಸಿರಿಯಸ್ ಆಗಿ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಗಂಟೆಗೊಂದು ಹೇಳಿಕೆ ನೀಡಿ. ಕೊನೆಗೆ ನಾನು ನೀಡಿಲ್ಲ ಅಂತ ಹೇಳ್ತಾರೆ. ಆ ರೀತಿ ಮಾತನಾಡಬಾರದು ಎಂದು ಹೇಳಿದರು.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ