ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹೈ ಕೋರ್ಟ್ ತಡೆಯಾಜ್ಞೆ

ಬ್ಯಾಂಕ್​​ನ ಯಾವುದೇ ಹುದ್ದೆಯಲ್ಲಿ ಮಂಜನಾಥ ಗೌಡರು ಇರಬಾರದು ಎಂದು ಆದೇಶ ಮಾಡಿದ್ದರು.  29 ಸಿ ಪ್ರಕಾರ ಅವರನ್ನು ಅನರ್ಹಗೊಳಿಸಿದ್ದರು. ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡ ನಂತರ ಮಂಜುನಾಥ ಗೌಡ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಶಿವಮೊಗ್ಗ(ಜು.30): ಶಿವಮೊಗ್ಗ ಡಿಸಿಸಿ ಬ್ಯಾಂಕ್​​ನ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆಯಬೇಕಿದ್ದ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೈ ಕೋರ್ಟ್ ನ ಮಧ್ಯಂತರ ತಡೆಯಾಜ್ಞೆ ಹಿನ್ನೆಲೆ ಚುನಾವಣೆಯನ್ನು ಚುನಾವಣಾಧಿಕಾರಿ ಸ್ಥಗಿತಗೊಳಿಸಿದ್ದಾರೆ. ಸಹಕಾರ ಇಲಾಖೆ ಜಂಟಿ ನಿಬಂಧಕರು ಮಂಜುನಾಥ್ ಗೌಡರನ್ನು ಬ್ಯಾಂಕ್ ನ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹೀಗಾಗಿ ಮಂಜುನಾಥ ಗೌಡರು ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ಕೋರ್ಟ್ ತಡೆಯಾಜ್ಞೆ ನೀಡಿದ ಕಾರಣ ಮತ್ತೆ ಅಧ್ಯಕ್ಷರಾಗಿ ಮಂಜುನಾಥ ಗೌಡ ಮುಂದುವರೆದಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆಯಲ್ಲಿ ನಕಲಿ ಬಂಗಾರದ ಅಡಮಾನ ಸಾಲ ಅವ್ಯವಹಾರ ನಡೆದಿದೆ. ಜೊತೆಗೆ ಸಾಲ ನೀಡಿಕೆಯಲ್ಲಿ ಕೂಡ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಡಿಸಿಸಿ ಬ್ಯಾಂಕ್ ಗೆ ಭೇಟಿ ನೀಡಿ ತನಿಕೆ ನಡೆಸಿ ಆಡಿಟ್ ಮಾಡಿದ್ದರು. ಇದರ ನಡುವೆ ಸಹಕಾರ ಇಲಾಖೆ ಜಂಟಿ ನಿಬಂಧಕರು ಮತ್ತು ಇಲಾಖೆ ಕಾರ್ಯದರ್ಶಿಗಳು ಬ್ಯಾಂಕ್​​ನ ಅಧ್ಯಕ್ಷರಾಗಿದ್ದ ಮಂಜುನಾಥ ಗೌಡರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು.

ಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಮಂಜುನಾಥ್​ಗೌಡ


ಬ್ಯಾಂಕ್​​ನ ಯಾವುದೇ ಹುದ್ದೆಯಲ್ಲಿ ಮಂಜನಾಥ ಗೌಡರು ಇರಬಾರದು ಎಂದು ಆದೇಶ ಮಾಡಿದ್ದರು.  29 ಸಿ ಪ್ರಕಾರ ಅವರನ್ನು ಅನರ್ಹಗೊಳಿಸಿದ್ದರು. ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡ ನಂತರ ಮಂಜುನಾಥ ಗೌಡ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲು ಸಿದ್ಧತೆಗಳು ನಡೆದಿದ್ದವು. ಚುನಾವಣಾಧಿಕಾರಿಯನ್ನು ಸಹ ನೇಮಿಸಲಾಗಿತ್ತು. ಮಧ್ಯಾಹ್ನ ಚುನಾವಣೆ ನಡೆಯಬೇಕಿತ್ತು. ಅಧಿಕಾರಿಗಳು ಸಹ ಆಗಮಿಸಿದ್ದರು. ಆದರೆ ಚುನಾವಣಾಧಿಕಾರಿಗೆ ಹೈ ಕೋರ್ಟ್ ನಿಂದ ಚುನಾವಣೆ ನಡೆಸದಂತೆ ತಡೆಯಾಜ್ಞೆ ಆದೇಶ ಬಂದಿದೆ.

ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೂ ಕೊರೋನಾ ಕರಿನೆರಳು; ಅರ್ಚಕ ಹಾಗೂ 16 ಭದ್ರತಾ ಸಿಬ್ಬಂದಿಗೆ ಸೋಂಕು ದೃಢ

ಹೀಗಾಗಿ ಕೋರ್ಟ್ ನ ಆದೇಶದಂತೆ ಚುನಾವಣೆ ಸ್ಥಗಿತಗೊಳಿಸಲಾಗಿದೆ. 29 ಸಿ ಅಡಿಯಲ್ಲಿ ಅನರ್ಹಗೊಳಿಸಿದ್ದ ಆದೇಶಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ವಕೀಲರು ನಮಗೆ ಕೋರ್ಟ್ ನ ಆದೇಶದ ಮಾಹಿತಿ ನೀಡಿದ್ದಾರೆ. ಮಂಜುನಾಥ್ ಗೌಡರು ಕೋರ್ಟ್ ನ ಆದೇಶದಿಂದ ಮತ್ತೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಬ್ಯಾಂಕ್ ನ ಎಂಡಿ ನಾಗೇಶ್ ಡೋಂಗರೆ ಮಾಹಿತಿ ನೀಡಿದರು.

ಇನ್ನು ಕೋರ್ಟ್ ನ ಆದೇಶದಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಮಂಜುನಾಥ ಗೌಡರು ತಿಳಿಸಿದರು. ಬ್ಯಾಂಕ್ ಗೆ ಆಗಮಿಸಿದ ಆರ್.ಎಂ. ಮಂಜುನಾಥ್ ಗೌಡರು ತಮ್ಮ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಇದರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿಗೆ ಮುಜುಗರ, ಹಾಗು ಹಿನ್ನಡೆ  ಉಂಟಾಗಿದೆ. ಪ್ರಭಾರ ಅಧ್ಯಕ್ಷರಾಗಿದ್ದ ಎಂ.ಬಿ. ಚನ್ನವೀರಪ್ಪ ಅವರೇ ಅಧ್ಯಕ್ಷರಾಗುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದರು.

ಚುನಾವಣೆಗೆ ಸಿದ್ಧತೆಗಳನ್ನು ಸಹ ಮಾಡಿಕೊಂಡಿದ್ದರು. ಕೋರ್ಟ್ ನ ತಡೆಯಾಜ್ಞೆ ನೀಡಿದ ಕಾರಣ ನಾಮಪತ್ರವನ್ನು ಅವರು ಸಲ್ಲಿಸಲಿಲ್ಲ. ಬಿಜೆಪಿ ಡಿಡಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿತ್ತು. ಅದರೆ ಕೋರ್ಟ್ ನ ಆದೇಶದಿಂದ ಮಂಜುನಾಥ ಗೌಡರಿಗೆ ಮತ್ತೆ ಅಧ್ಯಕ್ಷಗಾದಿ ದೊರೆತಿದೆ. ಕೋರ್ಟ್ ನ ಮಧ್ಯಂತರ ತಡೆಯಾಜ್ಞೆ ಇದಾಗಿದ್ದು, ಮುಂದಿನ ಆದೇಶ ಬರುವವರೆಗೂ ಮಂಜುನಾಥಗೌಡ ಅಧ್ಯಕ್ಷರಾಗಿ  ಮುಂದುವರೆಯಲಿದ್ದಾರೆ.
Published by:Latha CG
First published: