ಸಂಸದ ಪ್ರಜ್ವಲ್​ ರೇವಣ್ಣಗೆ ಕಂಟಕ; ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ, ವಿಚಾರಣೆ ಆರಂಭಿಸಿರುವ ಹೈ ಕೋರ್ಟ್​

ಈ ಕುರಿತ ವಿಚಾರಣೆಯನ್ನು ಹೈಕೋರ್ಟ್​ ನಿನ್ನೆಯಿಂದ ಆರಂಭಿಸಿದೆ. ಅಕಸ್ಮಾತ್​ ಪ್ರಜ್ವಲ್​ ರೇವಣ್ಣ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಸಾಬೀತಾದರೆ ಅವರ ಸಂಸದ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನಲಾಗುತ್ತಿದೆ.

news18-kannada
Updated:January 14, 2020, 3:09 PM IST
ಸಂಸದ ಪ್ರಜ್ವಲ್​ ರೇವಣ್ಣಗೆ ಕಂಟಕ; ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ, ವಿಚಾರಣೆ ಆರಂಭಿಸಿರುವ ಹೈ ಕೋರ್ಟ್​
ಸಂಸದ ಪ್ರಜ್ವಲ್​​ ರೇವಣ್ಣ
  • Share this:
ಹಾಸನ (ಜನವರಿ 14); ಹಾಸನ ಸಂಸದ ಪ್ರಜ್ಚಲ್​ ರೇವಣ್ಣ ವಿರುದ್ಧ ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿರುವ ಕುರಿತು ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದು ಕೈಗೆತ್ತಿಕೊಂಡಿದ್ದು, ಮಾಜಿ ಪ್ರಧಾನಿ ಮೊಮ್ಮಗನಿಗೆ ಸಂಕಷ್ಟ ಎದುರಾಗುವ  ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪ್ರಜ್ವಲ್​ ರೇವಣ್ಣ ಸಂಸದರಾಗಿ ಮೊದಲ ಬಾರಿಗೆ ಸಂಸತ್​ ಪ್ರವೇಶಿಸಿದ್ದರು. ಆದರೆ, ಪ್ರಜ್ವಲ್​ ರೇವಣ್ಣ ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಹಾಸನದ ಬಿಜೆಪಿ ಅಭ್ಯರ್ಥಿ ಎ. ಮಂಜು ಆರೋಪಿಸಿದ್ದರು. ಅಲ್ಲದೆ, ವಕೀಲ ದೇವರಾಜೇಗೌಡ ಮೂಲಕ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಪ್ರಜ್ವಲ್ ರೇವಣ್ಣ ಅವರ ಗೆಲುವನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿದ್ದರು.

ಈ ಕುರಿತ ವಿಚಾರಣೆಯನ್ನು ಹೈಕೋರ್ಟ್​ ನಿನ್ನೆಯಿಂದ ಆರಂಭಿಸಿದೆ. ಅಕಸ್ಮಾತ್​ ಪ್ರಜ್ವಲ್​ ರೇವಣ್ಣ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಸಾಬೀತಾದರೆ ಅವರ ಸಂಸದ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ರಾಜ್ಯದ ಅತೀ‌ ಶ್ರೀಮಂತ ದೇವಾಲಯ ಯಾವುದು?; ಇಲ್ಲಿದೆ ಮುಜರಾಯಿ ಇಲಾಖೆ ಪಟ್ಟಿ ಮಾಡಿರುವ ಟಾಪ್ 10 ಸಿರಿವಂತ ದೇಗುಲಗಳ ಪಟ್ಟಿ!
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ