ಕನಕಪುರದ ಸ್ವಗೃಹದಲ್ಲಿ ಕನ್ನಡದಲ್ಲಿಯೇ ಡಿಕೆಶಿ ತಾಯಿ ವಿಚಾರಣೆಗೆ ಹೈ ಕೋರ್ಟ್​ ಸೂಚನೆ

ಡಿಕೆ ಶಿವಕುಮಾರ್​ ಅವರ ತಾಯಿ ಗೌರಮ್ಮಗೆ ಭಾಷೆಯ ತೊಡಕು ಇರುವ ಹಿನನೆಲೆ ಅವರಿಗೆ ಕನ್ನಡದಲ್ಲಿಯೇ ಪ್ರಶ್ನೆಗಳನ್ನೇ ಕೇಳಬೆಕು. ಅಲ್ಲದೆ ವಿಚಾರಣೆಯ ಕುರಿತು ಸಂಪೂರ್ಣ ಆಡಿಯೋ ದಾಖಲಿಸಬೇಕು ಎಂದು ರಾಮನಗರ ಎಸ್ಪಿಗೆ ಹೈ ಕೋರ್ಟ್​ಗೆ ಸೂಚನೆ ನೀಡಿದೆ

Seema.R | news18-kannada
Updated:December 18, 2019, 4:09 PM IST
ಕನಕಪುರದ ಸ್ವಗೃಹದಲ್ಲಿ ಕನ್ನಡದಲ್ಲಿಯೇ ಡಿಕೆಶಿ ತಾಯಿ ವಿಚಾರಣೆಗೆ ಹೈ ಕೋರ್ಟ್​ ಸೂಚನೆ
ಡಿಕೆ ಶಿವಕುಮಾರ್​ ಅವರ ತಾಯಿ ಗೌರಮ್ಮಗೆ ಭಾಷೆಯ ತೊಡಕು ಇರುವ ಹಿನನೆಲೆ ಅವರಿಗೆ ಕನ್ನಡದಲ್ಲಿಯೇ ಪ್ರಶ್ನೆಗಳನ್ನೇ ಕೇಳಬೆಕು. ಅಲ್ಲದೆ ವಿಚಾರಣೆಯ ಕುರಿತು ಸಂಪೂರ್ಣ ಆಡಿಯೋ ದಾಖಲಿಸಬೇಕು ಎಂದು ರಾಮನಗರ ಎಸ್ಪಿಗೆ ಹೈ ಕೋರ್ಟ್​ಗೆ ಸೂಚನೆ ನೀಡಿದೆ
  • Share this:
ಬೆಂಗಳೂರು (ಡಿ.18): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್​ ಅವರನ್ನು ಕನಕಪುರದ ಸ್ವಗೃಹದಲ್ಲಿಯೇ ವಿಚಾರಣೆ ನಡೆಸಬೇಕು. ಅವರಿಗೆ ಕನ್ನಡದಲ್ಲಿಯೇ ಪ್ರಶ್ನೆ ಕೇಳಬೇಕು ಎಂದು ಹೈ ಕೋರ್ಟ್​ ಸೂಚನೆ ನೀಡಿದೆ. 

ಕಳೆದವಾರ ಬೆಂಗಳೂರಿನಲ್ಲೇ ಗೌರಮ್ಮ ಅವರ ವಿಚಾರಣೆ ನಡೆಸುವುದಾಗಿ ಜಾರಿ ನಿರ್ದೇಶನಾಲಯ ಒಪ್ಪಿಕೊಂಡಿತ್ತು. ಆದರೆ, 85 ವರ್ಷದ ವಯಸ್ಸಾಗಿದ್ದು, ಅನಾರೋಗ್ಯದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಪರವಾಗಿ ಪ್ರತಿನಿಧಿ ಕಳುಹಿಸುತ್ತೇವೆ ಅಥವಾ ತಮ್ಮ ಸ್ವಗೃಹದಲ್ಲಿ ವಿಚಾರಣೆಗೆ ಅವಕಾಶ ನೀಡುವಂತೆ ಬೆಂಗಳೂರು ಹೈ ಕೋರ್ಟ್​ಗೆ ಅವರು ರಿಟ್​ ಅರ್ಜಿ ಸಲ್ಲಿಸಿದರು.

ಈ ಅರ್ಜಿ ವಿಚಾರಣೆ ನಡೆಸಿದ್ದ  ನ್ಯಾ ನರೇಂದರ್​ ಅವರ ಏಕಸದಸ್ಯ ಪೀಠ, ಡಿಕೆ ಶಿವಕುಮಾರ್​ ಅವರ ತಾಯಿ ಗೌರಮ್ಮಗೆ ಭಾಷೆಯ ತೊಡಕು ಇರುವ ಹಿನನೆಲೆ ಅವರಿಗೆ ಕನ್ನಡದಲ್ಲಿಯೇ ಪ್ರಶ್ನೆಗಳನ್ನೇ ಕೇಳಬೆಕು. ಅಲ್ಲದೆ ವಿಚಾರಣೆಯ ಕುರಿತು ಸಂಪೂರ್ಣ ಆಡಿಯೋ ದಾಖಲಿಸಬೇಕು ಎಂದು ರಾಮನಗರ ಎಸ್ಪಿಗೆ ಹೈ ಕೋರ್ಟ್​ಗೆ ಸೂಚನೆ ನೀಡಿದೆ.

ಇದನ್ನು ಓದಿ: ಇಡಿ ಸಮನ್ಸ್: ಅರ್ಜಿ ಹಿಂಪಡೆದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ

ಇನ್ನು ಡಿಕೆ ಶಿವಕುಮಾರ್​ ತವರಿನಲ್ಲಿ ವಿಚಾರಣೆ ನಡೆಯುವ ಹಿನ್ನೆಲೆ ಪ್ರತಿಭಟನೆಗಳು ವ್ಯಕ್ತವಾಗುವ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಯಾವುದೇ ಪ್ರತಿಭಟನೆ ಇತ್ಯಾದಿ ನಡೆಸುವಂತಿಲ್ಲ. ಅಲ್ಲದೇ ವಿಚಾರಣೆ ನಡೆಸುವ ಇಡಿ ಅಧಿಕಾರಿಗಳಿಗೆ ಭದ್ರತೆ ನೀಡಬೇಕು  ಎಂದು ನ್ಯಾ ನರೇಂದರ್​ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ.

(ವರದಿ: ಮುನಿರಾಜು)
 
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading