ಪ್ರತಾಪ್ ಗೌಡ ಪಾಟೀಲ್ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಅನೂರ್ಜಿತ ; ಮಸ್ಕಿಯಲ್ಲಿ ಗರಿಗೆದರಿದ ರಾಜಕೀಯ

ಮಸ್ಕಿ ಕ್ಷೇತ್ರದ ಉಪಚುನಾವಣೆಗಿದ್ದ ತೊಡಕು ಇದೀಗ ನಿವಾರಣೆಯಾಗಿದೆ. ಕ್ಷೇತ್ರದ ಶಾಸಕ ಪ್ರತಾಪ್​​ ಗೌಡ ಪಾಟೀಲ್ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ

news18-kannada
Updated:September 28, 2020, 10:29 PM IST
ಪ್ರತಾಪ್ ಗೌಡ ಪಾಟೀಲ್ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಅನೂರ್ಜಿತ ; ಮಸ್ಕಿಯಲ್ಲಿ ಗರಿಗೆದರಿದ ರಾಜಕೀಯ
ಪ್ರತಾಪ್ ಗೌಡ ಪಾಟೀಲ್
  • Share this:
ರಾಯಚೂರು(ಸೆಪ್ಟೆಂಬರ್​. 28): ಕಾಂಗ್ರೆಸ್ - ಜೆಡಿಎಸ್ ನ ಶಾಸಕರು ರಾಜಿನಾಮೆ ನೀಡಿದ್ದರಿಂದ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡ ಹಿನ್ನೆಲೆ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಕಳೆದ ನವಂಬರ್ ನಲ್ಲಿ 15 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಆದರೆ, ರಾಜಿನಾಮೆ ನೀಡಿದ ಮಸ್ಕಿ ಹಾಗು ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆದಿರಲಿಲ್ಲ. ಕಾರಣ ಈ ಕ್ಷೇತ್ರದ ಶಾಸಕರು ಅಕ್ರಮ ಮತದಾನ ಮಾಡಿಸಿ ಆಯ್ಕೆಯಾಗಿದ್ದಾರೆ ಎಂದು ನ್ಯಾಯಲಯದಲ್ಲಿ ದಾವೆಯನ್ನು ಹೂಡಿದ್ದರು. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ಮರು ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್​​​ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು, ಅಂದಿನ ವಿಧಾನಸಭಾಧ್ಯಕ್ಷರು ಅವರನ್ನು ಅನರ್ಹಗೊಳಿಸಿದ್ದರು, ಈಗಲೂ ಪ್ರತಾಪ್ ಗೌಡರು ಅನರ್ಹರಾಗಿಯೆ ಇದ್ದಾರೆ ಕಾರಣ ಅವರು ಮರು ಆಯ್ಕೆಯಾಗಿಲ್ಲ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 212 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಪ್ರತಾಪ್ ಗೌಡ ತಮ್ಮ ಮಗಳು ಅಮೆರಿಕಾದಲ್ಲಿದ್ದರು ಅವರ ಮತ ಸೇರಿದಂತೆ 253 ಮತಗಳನ್ನು ಅಕ್ರಮವಾಗಿ ಮಾಡಿಸಿದ್ದಾರೆ ಎಂದು ಪರಾಜಿತ 11 ಅಭ್ಯರ್ಥಿಗಳು ನ್ಯಾಯಲಯಕ್ಕೆ ಮೊರೆ ಹೋಗಿದ್ದರು.

ಈ ಮಧ್ಯೆ ಅಂದು ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ ಎಂಬುವವರು ಪ್ರತಾಪ್​​​ ಗೌಡರ ವಿರುದ್ದ ಪ್ರಕರಣ ದಾಖಲಿಸಿದ್ದರು. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪ್ರತಾಪ್ ಗೌಡ ಬಿಜೆಪಿ ಸೇರಿದ ನಂತರ ಬಸನ ಗೌಡರ ಮನವೊಲಿಸಿ ಅವರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಬಸನ ಗೌಡ ತಾವು ಹೂಡಿದ್ದ ಪ್ರಕರಣ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದರು.

ಬಸನಗೌಡ ಅರ್ಜಿ ಹಿಂಪಡೆಯುವ ಕುರಿತು ಉಳಿದ 10 ಜನರು ಮತ್ತೆ ನ್ಯಾಯಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಈ ಕುರಿತು ಇಂದು ಅಂತಿಮ ತೀರ್ಪು ನೀಡಲು ನ್ಯಾಯಾಧೀಶರು ತಿಳಿಸಿದ್ದರು. ಇಂದು‌ ಮಧ್ಯಾಹ್ನದ ವೇಳೆ ನ್ಯಾಯಮೂರ್ತಿ ಕೆ ಎಸ್ ಮುದಗಲ್ ರವರು ಈ ಪ್ರಕರಣದಲ್ಲಿ ಸರಿಯಾದ ದಾಖಲೆಗಳು ಇಲ್ಲ ಎಂದು ಪ್ರಕರಣವನ್ನು ತಿರಸ್ಕರಿಸಿದ್ದಾರೆ ಎಂದು ಪ್ರತಾಪ್ ಗೌಡ ಪಾಟೀಲ್​​​ ಮಾಹಿತಿ ನೀಡಿದ್ದಾರೆ.

ಈಗಾಗಲೇ ಒಂದುವರೆ ವರ್ಷದಿಂದ ಕ್ಷೇತ್ರದಲ್ಲಿ ಶಾಸಕರು ಇರಲಿಲ್ಲ. ಈಗ ನ್ಯಾಯಲಯವು ಪ್ರತಾಪ್ ಗೌಡರ ವಿರುದ್ದ ಪ್ರಕರಣ ತಿರಸ್ಕರಿಸಿದ್ದರಿಂದ ಕೆಲವೇ ದಿನಗಳಲ್ಲಿ ಮಸ್ಕಿ ಕ್ಷೇತ್ರದ ಉಪಚುನಾವಣೆ ನಡೆಯಲಿದೆ ಎನ್ನಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿಯೇ ಮಸ್ಕಿ ಚುನಾವಣೆ ನಡೆಯುವ ಸಾಧ್ಯತೆ, ಇದರಿಂದಾಗಿ ಪ್ರತಾಪ್ ಗೌಡರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಚಿವರಾಗುವ ಕನಸು ಕಾಣುತ್ತಿದ್ದಾರೆ.

ಇದನ್ನೂ ಓದಿ : ಅವರು ತೇಜಸ್ವಿ ಸೂರ್ಯ ಅಲ್ಲ, ಅಮವಾಸ್ಯೆ ಸೂರ್ಯ; ಬಿಜೆಪಿ ಸಂಸದನ ವಿರುದ್ಧ ಡಿಕೆಶಿ ಗುಡುಗು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಯಚೂರು ಜಿಲ್ಲೆಯಿಂದ ಪ್ರತಾಪ್ ಗೌಡರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ದೇವದುರ್ಗಾ ಶಾಸಕ ಶಿವನಗೌಡ ನಾಯಕ ಹಾಗು ರಾಯಚೂರು ಶಾಸಕ ಡಾ ಶಿವರಾಜ ಪಾಟೀಲರಿಗೆ ನಿಗಮ ಮಂಡಳಿ ನೀಡಲಾಗಿದೆ.

ನ್ಯಾಯಾಲಯದ ತೀರ್ಪಿನ ಪ್ರತಿ ಪಡೆದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಂತರ ಮಸ್ಕಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಇದರಿಂದಾಗಿ ಮಸ್ಕಿಯಲ್ಲಿ ಮತ್ತೆ ಚುನಾವಣಾ ರಾಜಕೀಯ ಗರಿಗೆದರಿದೆ.
Published by: G Hareeshkumar
First published: September 28, 2020, 10:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading