ಐಎಂಎ ಪ್ರಕರಣ: ಹೈಕೋರ್ಟ್​​ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದ ಸಿಬಿಐ; ಸೆ.26ಕ್ಕೆ ವಿಚಾರಣೆ ಮುಂದೂಡಿಕೆ

ಇನ್ನು ಪ್ರಮುಖ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಸಿಬಿಐ/ಎಸ್​​ಐಟಿ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮುಂದಾಗುವಂತೆ ಹೈಕೋರ್ಟ್​ಗೆ ಸಿಬಿಐ ಅಧಿಕಾರಿಗಳಿಗೆ ಸೂಚಿದೆ. ಜತೆಗೆ ಸಕ್ಷಮ ಪ್ರಾಧಿಕಾರವೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ಪರಿಹಾರದ ಕೊಡಿಸುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಹೈಕೋರ್ಟ್​ ಆದೇಶ ಹೊರಡಿಸಿದೆ.

news18
Updated:September 16, 2019, 4:35 PM IST
ಐಎಂಎ ಪ್ರಕರಣ: ಹೈಕೋರ್ಟ್​​ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದ ಸಿಬಿಐ; ಸೆ.26ಕ್ಕೆ ವಿಚಾರಣೆ ಮುಂದೂಡಿಕೆ
ಜಮೀರ್​​ ಖಾನ್​​, ರೋಷನ್​​ ಬೇಗ್​​
  • News18
  • Last Updated: September 16, 2019, 4:35 PM IST
  • Share this:
ಬೆಂಗಳೂರು(ಸೆ.16): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​​ಗೆ ಸಿಬಿಐ ತನಿಖಾ ಪ್ರಗತಿ ವರದಿ ಸಲ್ಲಿಸಿದೆ. ಹೈಕೋರ್ಟ್ ವಿಭಾಗೀಯ ಪಿಠದಲ್ಲಿ ನಡೆದ ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್, ಮಾಜಿ ಸಚಿವ ರೋಷನ್ ಬೇಗ್ ಪ್ರಕರಣ ಉಲ್ಲೇಖಿಸಿದ್ಧಾರೆ. ಹಾಗೆಯೇ ರೋಷನ್​​ ಬೇಗ್​​ ನಾಲ್ಕು ಬಾರಿ ಸಮನ್ಸ್​ ನೀಡಿದರೂ ವಿಚಾರಣೆಗೆ ಹಾಜರಾಗಲಿಲ್ಲ ಎಂದು ನ್ಯಾಯಲಯಕ್ಕೆ ತಿಳಿಸಿದ್ದಾರೆ.

ಇನ್ನು ಆರೋಪಿ ರೋಷನ್​​ ಬೇಗ್​​ಗೆ ರಕ್ಷಣೆ ನೀಡುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಎಸ್​​ಐಟಿಗೆ ಬರೆದಿದ್ದ ಪತ್ರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಅಲ್ಲದೇ ಐಎಂಎ ಸಂಸ್ಥೆ ಮಾಲೀಕ ಮನ್ಸೂರ್​​ ಖಾನ್​​ ಬಳಿ ಸಚಿವರೊಬ್ಬರು 10 ಕೋಟಿ ರೂ. ಕೇಳಿದ್ದರು ಎಂದು ಸಿಬಿಐ ಆರೋಪಿಸಲಾಗಿದೆ.

ಇನ್ನು ಪ್ರಮುಖ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಸಿಬಿಐ/ಎಸ್​​ಐಟಿ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮುಂದಾಗುವಂತೆ ಹೈಕೋರ್ಟ್​ಗೆ ಸಿಬಿಐ ಅಧಿಕಾರಿಗಳಿಗೆ ಸೂಚಿದೆ. ಜತೆಗೆ ಸಕ್ಷಮ ಪ್ರಾಧಿಕಾರವೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ಪರಿಹಾರದ ಕೊಡಿಸುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಹೈಕೋರ್ಟ್​ ಆದೇಶ ಹೊರಡಿಸಿದ್ದು, ಪ್ರಕರಣದ ವಿಚಾರಣೆ ಸೆಪ್ಟೆಂಬರ್​​​ 26ಕ್ಕೆ ಮುಂದೂಡಿದೆ.

ಇನ್ನು ಸರ್ಕಾರಿ ಅಧಿಕಾರಿಗಳ ವಿರುದ್ದ ಚಾರ್ಜ್​​ಶೀಟ್ ಗೆ ಪೂರ್ವಾನುಮತಿ ಬೇಕು. ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸದ್ಯಕ್ಕೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಸರ್ಕಾರಿ ನೌಕರರನ್ನು ಮಾತ್ರ ಬಂಧಿಸಲಾಗಿದೆ. ಇತರೆ ಸರ್ಕಾರಿ ಅಧಿಕಾರಿಗಳ ಮೇಲೆ ಎಸ್ಐಟಿ/ ಸಿಬಿಐ ಕ್ರಮಕೈಗೊಳ್ಳಲಿದೆ ಎಂದು ಮುಚ್ಚಿದ ಲಕೋಟೆಯಲ್ಲಿ ಕೈಗೊಂಡಿರುವ ಕ್ರಮದ ಮಾಹಿತಿಯನ್ನು ಹೈಕೋರ್ಟ್​​ಗೆ ವಕೀಲ ಪ್ರಸನ್ನ ಕುಮಾರ್ ನೀಡಿದ್ದಾರೆ.

ಈ ಹಿಂದೆಯೇ ಐಎಂಎ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮಾಜಿ ಸಚಿವ ರೋಷನ್​​ ಬೇಗ್​ ಅವರಿಗೆ ರಕ್ಷಣೆ ನೀಡುವಂತೆ ಎಸ್​​ಐಟಿ ತಂಡಕ್ಕೆ ಗವರ್ನರ್​​ ಪತ್ರ ಬರೆದಿದ್ದರು. ರಾಜ್ಯಪಾಲ ವಜುಭಾಯಿ ವಾಲಾ ಅವರೇ ಖುದ್ದು, ಎಸ್‌ಐಟಿ ಮುಖ್ಯಸ್ಥ ಬಿ.ಆರ್‌ ರವಿಕಾಂತೇಗೌಡರಿಗೆ ಪತ್ರದ ಮೂಲಕ ಹೀಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿಗರು ನೆರೆ ಸಂತ್ರಸ್ತರ ಕುರಿತಲ್ಲದೆ, ಹಿಂದಿ ಹೇರಿಕೆ ಬಗ್ಗೆ ಮಾತಾಡುತ್ತಾರೆ; ದಿನೇಶ್​ ಗುಂಡೂರಾವ್​

ಮಾಜಿ ಸಚಿವ ರೋಷನ್​​ ಬೇಗ್​​ ಅವರು ಐಎಂಎ ಪ್ರಕರಣದ ಪ್ರಮುಖ ಸಾಕ್ಷಿ. ಹೀಗಾಗಿ ಮಾಜಿ ಸಚಿವ ರೋಷನ್ ಬೇಗ್​​ಗೆ ರಕ್ಷಣೆ ನೀಡಬೇಕು. ಸ್ವಾತಂತ್ರ್ಯ ಮತ್ತು ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂರು ತಿಂಗಳ ಹಿಂದೆಯೇ ಜುಲೈ 17ರಂದು ರವಿಕಾಂತೇಗೌಡರಿಗೆ ಗವರ್ನರ್​​ ಪತ್ರ ಬರೆದು ಸೂಚಿಸಿದ್ದರು.ಜುಲೈ 16ರಂದು ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್​ಐಟಿ ಡಿಸಿಪಿ ಗಿರೀಶ್​ ವಶಕ್ಕೆ ಪಡೆದಿದ್ದರು. ಬಳಿಕ ಮರುದಿನ ಮಧ್ಯಾಹ್ನ ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ರವಿಕಾಂತೇಗೌಡರಿಗೆ ರಾಜ್ಯಪಾಲರು ಬರೆದ ಪತ್ರವೀಗ ವಿವಾದಕ್ಕಿಡಾಗಿದೆ. ಅಲ್ಲದೇ ಈ ಪತ್ರ ಕಾನೂನು ತಜ್ಞರ ವಲಯದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ಐಎಂಎ ಪ್ರಕರಣವನ್ನು ಸದ್ಯ ಸಿಬಿಐ ತನಿಖೆಗೆ ನಡೆಸುತ್ತಿದ್ದು, ಈ ಪತ್ರದ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
----------
First published: September 16, 2019, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading