ಸದ್ಯಕ್ಕಿಲ್ಲ ಬಿಬಿಎಂಪಿ ಚುನಾವಣೆ; ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧಾರ

2021ರಲ್ಲಿ ಹೊಸ ಜನಗಣತಿ ಬಂದರೆ‌ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತದೆ. ಅದರ ಆಧಾರದ ಮೇಲೆ ಚುನಾವಣೆ ಮತ್ತಷ್ಟು ವಿಳಂಬ ಆಗಬಹುದು. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ  ಮೇಲ್ಮನವಿ ಸಲ್ಲಿಕೆ ಮಾಡಲಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಕಚೇರಿ.

ಬಿಬಿಎಂಪಿ ಕಚೇರಿ.

 • Share this:
  ಬೆಂಗಳೂರು (ಡಿಸೆಂಬರ್​ 07); ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ನಡೆಸಬೇಕು ಎಂದು ಕಾಂಗ್ರೆಸ್​ ನಾಯಕರು ಕಳೆದ ಹಲವು ದಿನಗಳಿಂದ ಒತ್ತಾಯಿಸುತ್ತಿವೆ. ಅಲ್ಲದೆ, ಹೈಕೋರ್ಟ್​ ಮೆಟ್ಟಿಲನ್ನೂ ಏರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್​ ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ನಡೆಸಬೇಕು ಎಂದು ಆದೇಶಿಸಿತ್ತು. ಆದರೆ, ರಾಜ್ಯದಲ್ಲಿ ಜನ ಗಣತಿ ನಡೆಯುತ್ತಿದ್ದು ಸದ್ಯದಲ್ಲಿ ಚುನಾವಣೆ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಇಂದು ತಿಳಿಸಿದ್ದಾರೆ.

  ಬಿಬಿಎಂಪಿ ಚುನಾವಣೆ ಸಂಬಂಧ ಇಂದು ವಿಧಾನಸೌಧದಲ್ಲಿ ಮಾತನಾಡಿರುವ ಸಚಿವ ಮಾಧುಸ್ವಾಮಿ, "2021ರಲ್ಲಿ ಹೊಸ ಜನಗಣತಿ ಬಂದರೆ‌ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತದೆ. ಅದರ ಆಧಾರದ ಮೇಲೆ ಚುನಾವಣೆ ಮತ್ತಷ್ಟು ವಿಳಂಬ ಆಗಬಹುದು. ಹೀಗಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ  ಮೇಲ್ಮನವಿ ಸಲ್ಲಿಕೆ ಮಾಡಲಿದೆ"  ಎಂದು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ ; ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗಿದ ಕಡಲು; ಶುಭ ಸೂಚಕವಲ್ಲ ಎಂದು ಎಚ್ಚರಿಸಿರುವ ತಜ್ಞರು!

  ಅಲ್ಲದೆ, "ನಮಗೂ ಚುನಾವಣೆ ಮಾಡಬೇಕು ಎಂಬ ಉದ್ದೇಶ ಇದೆ. ಆದರೆ, 198ವಾರ್ಡ್ ಗೆ ಚುನಾವಣೆ ಮಾಡೋಕೆ ಆಗಲ್ಲ. ಹೀಗಾಗಿ ಮುಂಚಿತವಾಗಿಯೇ ಮರುವಿಂಗಡನೆ ಮಾಡಿದ್ದೆವು. 243 ವಾರ್ಡ್ ಪುನರ್ ವಿಂಗಡನೆ ಮಾಡಿದ ಬಳಿಕ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಎಲ್ಲಾ ಪಕ್ಷದವರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲದೆ, ಜನಗಣತಿಯ ನಂತರ ಚುನಾವಣೆಗೆ ಮುಂದಾಗುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
  Published by:MAshok Kumar
  First published: