Idgah Maidan: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ಹಗ್ಗಜಗ್ಗಾಟ, ವಿವಾದದಿಂದ ಕೂಡಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಗಣೇಶ ಹಬಕ್ಕೆ ವಕ್ಫ್ ಬೋರ್ಡ್, ಶಾಸಕ ಜಮೀರ್ ವಿರೋಧಿಸಿದ್ದರು. ಈಗ ಹೈಕೋರ್ಟ್​ ಆದೇಶದಿಂದ ನಾಗರಿಕ ಒಕ್ಕೂಟಕ್ಕೆ ಜಯವಾಗಿದೆ.

ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್​ ಸಿಗ್ನಲ್

ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್​ ಸಿಗ್ನಲ್

  • Share this:
ಹಗ್ಗಜಗ್ಗಾಟ, ವಿವಾದದಿಂದ ಕೂಡಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan) ಗಣೇಶ ಹಬ್ಬ (Ganesha Festival) ಆಚರಿಸಲು ಕರ್ನಾಟಕ ಹೈಕೋರ್ಟ್ (Karnataka High Court)​ ಗ್ರೀನ್​ ಸಿಗ್ನಲ್ ನೀಡಿದೆ. ಚಾಮರಾಜಪೇಟೆ ಮೈದಾನದಲ್ಲಿ ಈವರೆಗೆ ಬಕ್ರೀದ್​ ಹಬ್ಬ ಮಾತ್ರ ಆಚರಿಸಲಾಗ್ತಿತ್ತು. ಈ ಬಾರಿ ವಿವಾದದ (Controversy) ಬಳಿಕ ಗಣೇಶ ಹಬ್ಬಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ವಕ್ಫ್​ ಬೋರ್ಡ್ (Waqf Board)​, ಶಾಸಕ ಜಮೀರ್​ ವಿರೋಧಿಸಿದ್ದರು. ಬಳಿಕ ವಿವಾದ ಹೈಕೋರ್ಟ್​ ಮೆಟ್ಟಿಲೇರಿತ್ತು. ನಿನ್ನೆಯಷ್ಟೇ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಲು ಕರ್ನಾಟಕ ಹೈಕೋರ್ಟ್​ ಗ್ರೀನ್​ ಸಿಗ್ನಲ್ ನೀಡಿದೆ. ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.

ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನುಮತಿ ನೀಡಬಹುದು

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಏಕಸದಸ್ಯ ಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಗ್ರೀನ್ ಸಿಗ್ನಲ್ ನೀಡಿದೆ. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನುಮತಿ ನೀಡಬಹುದು. ಆ.31ರಿಂದ ನಿರ್ದಿಷ್ಟ ಅವಧಿಗೆ ಅನುಮತಿ ಕೊಡಬಹುದು ಅಂತಾ ಕೋರ್ಟ್​ ಹೇಳಿದೆ.

ವಕ್ಫ್ ಬೋರ್ಡ್ ವಾದವೇನು?

ವಕ್ಫ್ ಬೋರ್ಡ್ ಪರ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿದರು. ಮೈದಾನದ ಮಾಲೀಕತ್ವದ ನಿರ್ಧಾರವನ್ನ ಜಂಟಿ ಆಯುಕ್ತರು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡಿದ್ದಾರೆ. ಕಾಲಮಿತಿ ಮೀರಿದ ಪ್ರಕರಣ ಅಂತ ಜಂಟಿ ಆಯುಕ್ತರು ಆದೇಶ ಮಾಡಿದ್ದಾರೆ.

ಈದ್ಗಾ ಮೈದಾನದ ಮೇಲೆ ಪಾಲಿಕೆಗೆ ಮಾಲೀಕತ್ವದ ಅಧಿಕಾರ ಇಲ್ಲ. ಪಾಲಿಕೆಯೇ ಮೈದಾನದ ಜಾಗ ತಮ್ಮದು ಎಂದು ಆದೇಶ ಮಾಡಿಕೊಂಡಿದೆ. ಸುಪ್ರೀಂಕೋರ್ಟ್ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆಗೆ ಅವಕಾಶ ನೀಡಿದೆ. ಸುಪ್ರೀಂ ಆದೇಶದ ನಂತರ ಮೈದಾನ ವಕ್ಫ್ ಬೋರ್ಡ್ ಅನುಭೋಗದಲ್ಲಿ ಇದೆ. ಏಕಸದಸ್ಯ ಪೀಠ ನೀಡಿದ ಮಧ್ಯಂತರ ಆದೇಶ ಸರಿಯಿದೆ ಅಂತಾ ವಾದಿಸಿದ್ರು.

ಸರ್ಕಾರದ ಪರ ವಕೀಲರ ವಾದವೇನು?

ಮಧ್ಯಂತರ ಆದೇಶ ರದ್ದು ಮಾಡುವಂತೆ ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ವರ್ಷಕ್ಕೆರಡು ಬಾರಿ ಮುಸ್ಲಿಂ ಧರ್ಮೀಯರ ಪ್ರಾರ್ಥನೆಗೆ ಆಕ್ಷೇಪವಿಲ್ಲ. ಆದರೆ ಇತರೆ ಚಟುವಟಿಕೆಗೆ ಹೈಕೋರ್ಟ್ ಅವಕಾಶ ನಿರ್ಬಂಧ ಸರಿಯಲ್ಲ.

ವಕ್ಫ್ ಬೋರ್ಡ್ ಸರ್ಕಾರದ ಭಾಗ ಆದ್ರೂ, ಸ್ವಾಯತ್ತ ಸಂಸ್ಥೆ ಆಗಿದೆ ಅಂತಾ ವಾದಿಸಿದ್ರು. ವಕ್ಫ್ ಬೋರ್ಡ್ ಈ ಜಾಗ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದೆ. ಈ ಸಂಬಂಧ ದಾಖಲೆ‌ ಕೇಳಿದಾಗ ವಕ್ಫ್ ಬೋರ್ಡ್ ಸಲ್ಲಿಸಿಲ್ಲ. ಕಳೆದ 50-60 ವರ್ಷದಲ್ಲಿ ಎಲ್ಲಿಯೂ ವಕ್ಫ್​ ಬೋರ್ಡ್ ಗೆ ಸಂಬಂಧಿಸಿದ್ದು ಎಂಬ ದಾಖಲೆಗಳಿಲ್ಲ. ಹೀಗಾಗಿ ಈ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶ ಮಾಡಲಾಗಿದೆ.

ಎಲ್ಲಾ ಸಮುದಾಯವನ್ನೂ ಸಮಾನವಾಗಿ ನೋಡಬೇಕಿದೆ

ಒಂದು ದಿನ ಮಟ್ಟಿಗೆ ಗಣೇಶ ಕೂರಿಸಲು ಅರ್ಜಿಗಳು ಬರುತ್ತಿವೆ. ಎಲ್ಲಾ ಸಮುದಾಯವನ್ನೂ ಸಮಾನವಾಗಿ ನೋಡಬೇಕಿದೆ. ಆ ಅರ್ಜಿಗಳನ್ನ ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಅಂತಾ ವಾದಿಸಿದ್ರು.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

ಹೈಕೋರ್ಟ್​ ಆದೇಶ ಬರುತ್ತಿದ್ದಂತೆ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ಒಂದು ಕೆಎಸ್​​ಆರ್​ಪಿ ವಾಹನ, ಸಿಬ್ಬಂದಿ ನಿಯೋಜನೆ‌‌‌ ಮಾಡಲಾಗಿದೆ. ಸದ್ಯ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಸೇರಿದಂತೆ 2 ಕೆಎಸ್​ಆರ್​​ಪಿ ತುಕಡಿ ಭದ್ರತೆಗೆ ನಿಯೋಜಿಸಲಾಗಿದೆ. ಇಬ್ಬರು ಇನ್ಸ್ ಪೆಕ್ಟರ್​ಗಳು ಮೈದಾನದ ಬಳಿ ಕಡ್ಡಾಯವಾಗಿ ಇರಲು ಸೂಚಿಸಲಾಗಿದೆ.
Published by:Thara Kemmara
First published: