HOME » NEWS » State » HIGH COURT DISMISS THE CASEOF FALSE AFFIDAVITS CASE AGAINST PRAJWAL REVANNA SESR

ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆರೋಪ: ಹೈಕೋರ್ಟ್​ನಲ್ಲಿ ಪ್ರಕರಣ ವಜಾ

ಪ್ರಕರಣವನ್ನು ವಿಚಾರಣೆ ನಡೆಸಿದ  ನ್ಯಾಯಾಧೀಶ ಮೈಕಲ್ ಡಿ ಕುನ್ಹಾ, ಪ್ರಕರಣ ಕುರಿತು ಹೈಕೋರ್ಟ್ ನಲ್ಲಿ ಅಫಿಡೆವಿಟ್ ಹಾಕಿಲ್ಲ ಎಂದು  ತಾಂತ್ರಿಕ ಕಾರಣದಿಂದ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಪ್ರಜ್ವಲ್​ ರೇವಣ್ಣಗೆ ತಾತ್ಕಾಲಿಕ ಜಯ ಸಂದಿದೆ. 

news18-kannada
Updated:January 17, 2020, 1:53 PM IST
ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆರೋಪ: ಹೈಕೋರ್ಟ್​ನಲ್ಲಿ ಪ್ರಕರಣ ವಜಾ
ಸಂಸದ ಪ್ರಜ್ವಲ್​​ ರೇವಣ್ಣ
  • Share this:
ಹಾಸನ (ಜ.17): ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಪ್ರಜ್ವಲ್​ ರೇವಣ್ಣ ಸುಳ್ಳು ಪ್ರಮಾಣ ಪತ್ರ ನೀಡಿದರೆನ್ನಲಾದ ಪ್ರಕರಣವನ್ನು ಹೈ ಕೋರ್ಟ್​ ವಜಾಗೊಳಿಸಿದ್ದು, ಈ ಮೂಲಕ ಹಾಸನ ಸಂಸದರಿಗೆ ಬಿಗ್​ ರಿಲೀಫ್​ ದೊರಕಿದೆ. 

ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಆರೋಪಿಸಿದ್ದರು. ಜೊತೆಗೆ ಅವರ ಗೆಲುವನ್ನು ಅನೂರ್ಜಿತಗೊಳಿಸುವಂತೆ ಕೂಡ ಮನವಿ ಮಾಡಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ  ನ್ಯಾಯಾಧೀಶ ಮೈಕಲ್ ಡಿ ಕುನ್ಹಾ, ಪ್ರಕರಣ ಕುರಿತು ಹೈಕೋರ್ಟ್ ನಲ್ಲಿ ಅಫಿಡೆವಿಟ್ ಹಾಕಿಲ್ಲ ಎಂದು  ತಾಂತ್ರಿಕ ಕಾರಣದಿಂದ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಪ್ರಜ್ವಲ್​ ರೇವಣ್ಣಗೆ ತಾತ್ಕಾಲಿಕ ಜಯ ಸಂದಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಲೋಕಾಸಭಾ ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಹಾಸನ ಬಿಜೆಪಿ ಅಭ್ಯರ್ಥಿ ಮತ್ತು ವಕೀಲ ದೇವರಾಜೇಗೌಡ ಅವರು ಹೈ ಕೋರ್ಟ್​ನಲ್ಲಿ ಕೇಸ್ ಹಾಕಿದ್ದರು. ಈ ಸಂಬಂಧ ಹೈ ಕೋರ್ಟ್ ಪ್ರಜ್ವಲ್ ರೇವಣ್ಣಗೆ ನೊಟೀಸ್ ನೀಡಿತ್ತು. ಆದರೆ ಮೂರು ಬಾರಿಯೂ ಪ್ರಜ್ವಲ್ ರೇವಣ್ಣಗೆ ನೊಟೀಸ್ ತಲುಪಿರಲಿಲ್ಲ. ಆಫಿಡವಿಟ್​ನಲ್ಲಿನ ವಿಳಾಸದಲ್ಲಿ ಅವರಿಲ್ಲವೆಂಬ ಉತ್ತರ ಕೇಳಿ ಬಂದಿತ್ತು. ಪೋಸ್ಟ್, ಕೋರ್ಟ್ ಅಮೀನರು ಮತ್ತು ಹಾಸನ ಜಿಲ್ಲಾ ನ್ಯಾಯಾಧೀಶರ ಮೂಲಕ ತಲುಪಿಸುವ ಪ್ರಯತ್ನ ಕೂಡ ವಿಫಲವಾಗಿತ್ತು.
Youtube Video

 
First published: January 17, 2020, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories