HOME » NEWS » State » HIGH COURT DIRECTS THE STATE GOVT TO REHABILITATE THOSE EVICTED IN BENGALURU ILLEGAL DEMOLITIONS GNR

ಜೋಪಡಿಗಳ ನೆಲಸಮ ಪ್ರಕರಣ: ತಿಂಗಳೊಳಗೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್​ ಆದೇಶ

ಈ ಹಿಂದೆ ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲಸಿದ್ದಾರೆ ಎಂದು ಬಿಬಿಎಂಪಿ ಮತ್ತು ಪೊಲೀಸ್​​ ಇಲಾಖೆಯೂ ನಗರದ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ ಹಾಗೂ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳನ್ನು ನೆಲಸಮ ಮಾಡಿತ್ತು. ಈ ಕುರಿತಂತೆ ಪೀಪಲ್ಸ್ ಯೂನಿಯನ್ ಫಾರ್‌ ಸಿವಿಲ್ ಲಿಬರ್ಟೀಸ್‌(ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.


Updated:February 10, 2020, 5:27 PM IST
ಜೋಪಡಿಗಳ ನೆಲಸಮ ಪ್ರಕರಣ: ತಿಂಗಳೊಳಗೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್​ ಆದೇಶ
ಕರ್ನಾಟಕ ಹೈಕೋರ್ಟ್
  • Share this:
ಬೆಂಗಳೂರು(ಫೆ.10): ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪದಡಿ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳನ್ನು ನೆಲಸಮ ಮಾಡಿರುವ ಪ್ರಕರಣ ಸಂಬಂಧ ಹೈಕೋರ್ಟ್​​ ಮಹತ್ವದ ತೀರ್ಪು ಪ್ರಕಟಿಸಿದೆ. ಮುಂದಿನ 30 ದಿನಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ. ಇನ್ನೆರಡು ವಾರಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಸರಿಯಾದ ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ಕನಿಷ್ಠ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಬೇಕು ಎಂದು ಹೈಕೋರ್ಟ್​​ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಎಲ್ಲಾ ಸಂತ್ರಸ್ತರಿಗೂ ಪರಿಹಾರ ಪುನರ್ವಸತಿ ಕಲ್ಪಿಸಬೇಕು. ಜೋಪಡಿ ಕಳೆದುಕೊಂಡ 144 ಕುಂಟುಬಗಳಿಗೂ ಪರಿಹಾರ ನೀಡಬೇಕು. ರಾಜ್ಯ ಮತ್ತು ಬಿಬಿಎಂಪಿಯೂ ಜೋಪಡಿಗಳನ್ನು ತೆರವುಗೊಳಿಸಿಲ್ಲ ಎಂದು ಹೇಳುತ್ತಿವೆ. ಆದರೆ, ನಮಗೆ ಸಿಕ್ಕ ಫೋಟೋಗಳಲ್ಲಿ ಪೊಲೀಸ್​​ ಅಧಿಕಾರಗಳ ಸಮ್ಮುಖದಲ್ಲೇ ಜೋಪಡಿ ತೆರವು ಕಾರ್ಯಾಚರಣೆ ನಡೆದಿದೆ. ಹಾಗಾಗಿ ಕೂಡಲೇ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಎಂದು ಛೀಮಾರಿ ಹಾಕಿದೆ.

ಈ ಹಿಂದೆ ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲಸಿದ್ದಾರೆ ಎಂದು ಬಿಬಿಎಂಪಿ ಮತ್ತು ಪೊಲೀಸ್​​ ಇಲಾಖೆಯೂ ನಗರದ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ ಹಾಗೂ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳನ್ನು ನೆಲಸಮ ಮಾಡಿತ್ತು. ಈ ಕುರಿತಂತೆ ಪೀಪಲ್ಸ್ ಯೂನಿಯನ್ ಫಾರ್‌ ಸಿವಿಲ್ ಲಿಬರ್ಟೀಸ್‌(ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಆಗ ಈ ಬಗ್ಗೆ ಕೂಲಂಕಷ ಪ್ರಮಾಣ ಪತ್ರ ಸಲ್ಲಿಸಿ' ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.

ಇದನ್ನೂ ಓದಿ: ಅಕ್ರಮ ಬಾಂಗ್ಲಾ ವಲಸಿಗರೆಂಬ ಶಂಕೆಯಲ್ಲಿ ನೂರಾರು ಟೆಂಟ್ ಹೌಸ್​ಗಳ ತೆರವು; ಬೀದಿಗೆ ಬಿದ್ದ ಉತ್ತರ ಕರ್ನಾಟಕದ ಮಂದಿ

ತೆರವು ಕಾರ್ಯಾಚರಣೆ ನಡೆಸಿದ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವರನ್ನು ಅಕ್ರಮ ವಲಸಿಗರು ಎಂದು ಹೇಗೆ ನಿರ್ಧರಿಸಲಾಯಿತು. ಅದಕ್ಕಿರುವ ದಾಖಲೆಗಳೇನು? ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು? ನೋಟಿಸ್ ಕೊಟ್ಟವರು ಯಾರು? ಮತ್ತೆ ಯಾವ ಕಾಯ್ದೆಯಡಿ ಅಧಿಕಾರ ಚಲಾಯಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬುದನ್ನು ಸವಿವರವಾಗಿ ಪ್ರಮಾಣಪತ್ರದ ಮೂಲಕ ಸಲ್ಲಿಸಿ' ಎಂದು ನ್ಯಾಯಪೀಠ ನಿರ್ದೇಶಿಸಿತ್ತು.

ಹಾಗೆಯೇ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಮತ್ತು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೂ ನೋಟಿಸ್​​ ನೀಡಿತ್ತು. ಜತೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾರತ್ತಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ ಆದೇಶಿತ್ತು. ಮುಂದಿನ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ಆದೇಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತ್ತು.
First published: February 10, 2020, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories