Congress Notice: ಡಿಕೆಶಿ ಜೊತೆ ಜಿದ್ದಾಜಿದ್ದಿ; ಶಾಸಕ ಜಮೀರ್ ಅಹ್ಮದ್​ ಖಾನ್​ಗೆ ಹೈಕಮಾಂಡ್​ ನೋಟಿಸ್​​

ರಾಜ್ಯ ಉಸ್ತುವಾರಿ ಸುರ್ಜೆವಾಲ ಎಚ್ಚರಿಕೆ ಪತ್ರ ನೀಡಿದ್ದು, ಪಕ್ಷದ ಶಿಸ್ತು, ಲಕ್ಷಣ ರೇಖೆ ದಾಟದಂತೆ ಸೂಚಿಸಲಾಗಿದೆ , ಇತ್ತೀಚೆಗಿನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ನೋಟಿಸ್ ನೀಡಲಾಗಿದೆ. 

ಶಾಸಕ ಜಮೀರ್ ಅಹ್ಮದ್ ಖಾನ್

ಶಾಸಕ ಜಮೀರ್ ಅಹ್ಮದ್ ಖಾನ್

  • Share this:
ಮುಂದಿನ ಸಿಎಂ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K Shivakumar) ಹಾಗೂ ಜಮೀರ್​ ನಡುವಿನ ಮಾತಿನ ಸಮರ ತಾರಕಕ್ಕೇರಿದೆ.  ಸಿದ್ದರಾಮಯ್ಯನವರ ಆಪ್ತ ಶಾಸಕ ಜಮೀರ್ ಅಹಮದ್ ಖಾನ್‌ಗೆ ಹೈಕಮಾಂಡ್ ನೋಟಿಸ್ (High Command Notice)​ ನೀಡಿದೆ. ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ತೀವ್ರ ಇರಿಸು ಮುರಿಸು ಉಂಟು ಮಾಡಿದ ಆರೋಪದ ಮೇಲೆ ಶಾಸಕ ಜಮೀರ್ ಅಹಮದ್ ಖಾನ್‌ಗೆ  ಎಐಸಿಸಿ ನೋಟಿಸ್ ನೀಡಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲ ಎಚ್ಚರಿಕೆ ಪತ್ರ ನೀಡಿದ್ದು, ಪಕ್ಷದ ಶಿಸ್ತು, ಲಕ್ಷಣ ರೇಖೆ ದಾಟದಂತೆ ಸೂಚಿಸಲಾಗಿದೆ , ಇತ್ತೀಚೆಗಿನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ನೋಟಿಸ್ ನೀಡಲಾಗಿದೆ. 

ನನಗೆ ಯಾವುದೇ  ನೋಟಿಸ್​ ಬಂದಿಲ್ಲ - ಜಮೀರ್​

ಇನ್ನು ನೋಟಿಸ್ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳ ಪ್ರತಿಕ್ರಿಯೆ ಕೇಳಿದ್ದಕ್ಕೆ ಜಮೀರ್ ಮಾತನಾಡಿದ್ದು, ನನಗೆ ಎಐಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ. ಇದುವರೆಗೂ ಯಾವುದೇ ಬಂದಿಲ್ಲ. ನೋಟಿಸ್ ಬರುವಂತಹದ್ದು ನಾನೇನು ಮಾಡಿದೀನಿ. ನಾನು ಯಾವ ಜಾತಿ ಬಗ್ಗೆ ಮಾತನಾಡಿಲ್ಲ. ಯಾವ ಜಾತಿ ವಿರುದ್ದ ಮಾತನಾಡಿದ್ದೇನೆ ಹೇಳಿ‌ ಎಂದು ಪ್ರಶ್ನಿಸಿದರು. ಒಂದು ಜಾತಿ ವೋಟ್ ತೆಗೆದುಕೊಂಡು ಸಿಎಂ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದೇನೆ. ಎಲ್ಲಾ ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಡಿಕೆ ಶಿವಕುಮಾರ್​ಗೆ  ಜಮೀರ್​ ತಿರುಗೇಟು

ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂಬ ಡಿ.ಕೆ.ಶಿವಕುಮಾರ್ ಎಚ್ಚರಿಕೆಗೆ ಜಮೀರ್ ಸಡ್ಡು ಹೊಡೆದು ನನಗೆ ವ್ಯಕ್ತಿ ಪೂಜೆಯೂ ಮುಖ್ಯ, ಪಕ್ಷ ಪೂಜೆಯೂ ಮುಖ್ಯ ಎಂದಿದ್ದರು. ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಚಾಲನೆ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್. ಇದಾದ ಬಳಿಕ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದು ತಿರುಗೇಟು ನೀಡಿದ್ದರು.

ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆನೆ.




ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆನೆ. ನನ್ನ ಬಾಯಿ ಮುಚ್ಚೋಕೆ ಸಾಧ್ಯ ಇಲ್ಲ.‌ ನಾನು ಪಕ್ಷ ಪೂಜೆನೂ ಮಾಡ್ತಿ‌‌ನಿ, ಅದರ ಜೊತೆ ವ್ಯಕ್ತಿ ಪೂಜೆನೂ ಮಾಡ್ತಿನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಅಂತೆಯೇ ರಾಜಕೀಯದಲ್ಲಿ ಲೆವೆಲ್ ಗುರುತಿಸೋದು ಜನ. ನಮ್ಮ ಲೆವೆಲ್ ಜನ ಹೇಳಬೇಕು ಎಂದು ಡಿ ಕೆ ಶಿವಕುಮಾರ ಅವರಿಗೆ ಟಾಂಗ್ ನೀಡಿದ ಜಮೀರ್​ ಎಐಸಿಸಿಯಿಂದಲೂ ನಂಗೆ ಸೂಚನೆ ಬಂದಿಲ್ಲ. ನಂಗ್ಯಾಕೆ ನೋಟಿಸ್ ನೀಡ್ತಾರೆ‌‌. ನಾನೇನು ತಪ್ಪು ಮಾತನಾಡಿದ್ದೇನೆ ಎಂದು ಕೇಳಿದರು.

ರಾಜಕೀಯಕ್ಕೆ ಬರಲು ಕಾರಣ ಆದಿಚುಂಚನಗಿರಿ ಸ್ವಾಮೀಜಿ




 ಈ ಬಗ್ಗೆ ಹಾವೇರಿಯಲ್ಲಿ ಇಂದು ಮಾತನಾಡಿದ ಜಮೀರ್, ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ. ಒಕ್ಕಲಿಗರ ಸ್ವಾಮೀಜಿ ಎಂದು ಹೇಳಿವ ಮೂಲಕ ಬಿಜೆಪಿಗರಿಗೆ ಟಾಂಗ್ ನೀಡಿದರು. ಎಲ್ಲ ಜಾತಿಯವರ ಪರ ಇರೋ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ನಾನು ಒಕ್ಕಲಿಗರ ಬಗ್ಗೆ ಏನು ಮಾತಾಡಿದ್ದೇನೆ?, ನಾನು ರಾಜಕೀಯಕ್ಕೆ ಬರೋಕೆ ಕಾರಣವೆ ಒಕ್ಕಲಿಗರು. ಆದಿಚುಂಚನಗಿರಿ ಮಠದ ಹುಡುಗ. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಆದಿಚುಂಚನಗಿರಿ ಮಠದಲ್ಲೇ ಬೆಳೆದಿರೋದು. ನಾನು ರಾಜಕೀಯಕ್ಕೆ ಬರಲು ಕಾರಣ ಆದಿಚುಂಚನಗಿರಿ ಮಠದ ಸ್ವಾಮೀಜಿ. ಸ್ವಾಮೀಜಿ ದಾರಿ ತೋರಿಸಿದರು ಎಂದರು. 


ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ. ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಗುರುಗಳು. ನಾನು ಮಠಕ್ಕೆ ಹೋಗೋದು ತಡವಾದರೆ ಸ್ವಾಮೀಜಿ ಎಲ್ಲಿದ್ದೀಯಾ ಜಮೀರ್ ಅಂತಾ ಫೋನ್ ಮಾಡುತ್ತಿದ್ದರು. ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋಗಿದ್ದು. ವಿಜಯನಗರ, ಚುಂಚನಗಿರಿ ಮಠದಲ್ಲಿ ಕೇಳಿ ನನ್ನ ಸ್ವಾಮೀಜಿಗಳ ಸಂಬಂಧ ಏನು ಎಂದು ಹೇಳ್ತಾರೆ ಎಂದು ಸ್ಪಷ್ಟಪಡಿಸಿದರು.
Published by:Pavana HS
First published: