• Home
  • »
  • News
  • »
  • state
  • »
  • CM Basavaraj Bommai: ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಯಾರಿಗೆ ಸಿಗಲಿದೆ ಸಚಿವ ಸ್ಥಾನ!?

CM Basavaraj Bommai: ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಯಾರಿಗೆ ಸಿಗಲಿದೆ ಸಚಿವ ಸ್ಥಾನ!?

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಸದ್ಯಕ್ಕೆ ಹಲವರು ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ. ನವಂಬರ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

  • News18 Kannada
  • Last Updated :
  • Karnataka, India
  • Share this:

ಸಂಪುಟ ವಿಸ್ತರಣೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಾನಾ ಕಸರತ್ತು ಮಾಡ್ತಿದ್ದಾರೆ. ಖಾಲಿ ಇರುವ 6 ಸ್ಥಾನ ಭರ್ತಿಗೆ ನಿರ್ಧಾರ ಮಾಡಿದ್ದು, ಸಂಪುಟ ವಿಸ್ತರಣೆಗೆ ಹೈಕಮಾಂಡ್​ ಗ್ರೀನ್ ಸಿಗ್ನಲ್ (High Command Green Signal)​ ನೀಡಿದೆ. ಸದ್ಯಕ್ಕೆ ಹಲವರು ಸಚಿವ ಸ್ಥಾನದ (Minister Position) ರೇಸ್ ನಲ್ಲಿದ್ದಾರೆ. ನವಂಬರ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ (Volume Expansion) ಮಾಡುವ ಸಾಧ್ಯತೆ ಇದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರು ಯಾರಿಗೆ ಸ್ಥಾನ ಸಿಗಲಿದೆ ಅನ್ನೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. 


ರೇಸ್​ನಲ್ಲಿ ಯಾರಿದ್ದಾರೆ?


ಕೆ .ಎಸ್ ಈಶ್ವರಪ್ಪ - ಕುರುಬ ಕೋಟ
ರಮೇಶ್ ಜಾರಕಿಹೊಳಿ- ವಲಸಿಗ ಹಾಗೂ ಎಸ್ ಟಿ ಕೋಟ
ಸಿ ಪಿ ಯೋಗೇಶ್ವರ್- ಹಳೇ ಮೈಸೂರು- ಒಕ್ಕಲಿಗ ಕೋಟ
ಪೂರ್ಣಿಮಾ ಶ್ರೀನಿವಾಸ್- ಮಹಿಳೆ/ ಯಾದವ ಕೋಟ
ನರಸಿಂಹ ನಾಯಕ ರಾಜೂಗೌಡ- ಕಲ್ಯಾಣ ಕರ್ನಾ ಟಕ ಹಾಗೂ ಎಸ್ ಟಿ ಕೋಟ
ಎಂಪಿ ರೇಣುಕಾಚಾರ್ಯ - ಮಧ್ಯ ಕರ್ನಾಟಕ: ಲಿಂಗಾಯತ ಕೋಟ


ಸಚಿವ ಸ್ಥಾನಕ್ಕೆ ಈಶ್ವರಪ್ಪ ಪಟ್ಟು


ಆರೋಪ ಮುಕ್ತರಾದ ಬಳಿಕ ಸಚಿವ ಸ್ಥಾನಕ್ಕಾಗಿ ಕೆ.ಎಸ್ ಈಶ್ವರಪ್ಪ ಒತ್ತಡ ಹೇರಿದ್ದಾರೆ. ಸಚಿವನಾಗಿ ಮಾಡದಿದ್ದರೆ ನಾನು ಕಾಂಗ್ರೆಸ್ ಹಾಗೂ ರಾಜ್ಯದ ಜನತೆ ಪಾಲಿಗೆ ಪರ್ಮನೆಂಟ್ ಆರೋಪಿತನಾಗುತ್ತೇನೆ. ಕಾಂಗ್ರೆಸ್ ಕಾಲದಲ್ಲಿ ಕೆ ಜೆ ಜಾರ್ಜ್ ನಿರಪರಾಧಿ ಎಂದ ಕೂಡಲೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು ಎಂದ್ರು. 2023ಕ್ಕೆ ಚುನಾವಣಾ ರಾಜಕೀಯ ಅಂತ್ಯವಾಗಲಿದ್ದು, ಪಕ್ಷಕ್ಕಾಗಿ ದುಡಿದಿದ್ದೇನೆ.


ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೈಕಮಾಂಡ್, ಸಂಘದ ನಾಯಕರು ಹಾಗೂ ಸಿಎಂಗೆ ಮನವರಿಕೆ ಮಾಡಿಕೊಟ್ಟಿರೋ ಕೆ ಎಸ್ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: Karnataka Congress: ಪರಮೇಶ್ವರ್​ ಮನದಲ್ಲೂ ಸಿಎಂ ಕುರ್ಚಿ ಆಸೆ; ಒಳ್ಳೆ ಟೈಮಲ್ಲಿ ಪಲ್ಟಿ ಹೊಡೆಸಿದ್ಯಾರು?


ಸಿ.ಪಿ ಯೋಗೇಶ್ವರ್​ಗೆ ಸ್ಥಾನ


ಹಳೇ ಮೈಸೂರು ಭಾಗದ ಒಕ್ಕಲಿಗ ಕೋಟದಲ್ಲಿ  ಸಿ.ಪಿ ಯೋಗೇಶ್ವರ್​ಗೆ ಸ್ಥಾನ ನೀಡಲು ನಿರ್ಧಾರ ಮಾಡಲಾಗಿದೆ. ಒಕ್ಕಲಿಗ ಮತ ಸೆಳೆಯುವ ಉದ್ದೇಶದಿಂದ ಹಾಗೂ ಹೆಚ್ ಡಿಕೆ ಹಾಗೂ ಡಿಕೆಶಿ ವಿರುದ್ಧ ಸೆಟೆದು ನಿಲ್ಲಲು ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.


ಪೂರ್ಣಿಮಾ ಶ್ರೀನಿವಾಸ್​ಗೆ​ ಸಂಪುಟದಲ್ಲಿ ಸ್ಥಾನ


ಹಿರಿಯೂರು ಕ್ಷೇತ್ರ, ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್​ಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಯಾದವ ಸಮುದಾಯದವರು ಇದ್ದಾರೆ. ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.


ಇದನ್ನೂ ಓದಿ: V Somanna: ಗುಂಡ್ಲುಪೇಟೆಯಲ್ಲಿ ಸಚಿವ ಸೋಮಣ್ಣ ವಿರುದ್ಧ ದೂರು ದಾಖಲು; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ


ರಮೇಶ್ ಜಾರಕಿಹೊಳಿ ಸಿಗಲಿದ್ಯಾ ಚಾನ್ಸ್!​?


ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಅವರಿಗೆ ಈ ಕೇಸ್​ನಿಂದ ರಮೇಶ್​ ಇಮೇಜಿಗೂ ಡ್ಯಾಮೇಜ್​ ಆಗಿತ್ತು.  ಸಿಡಿ ಪ್ರಕರಣದ ಹಿಂದೆ ಡಿಕೆಶಿ ಇದ್ದಾರೆಂದು ಆರೋಪಿಸಿರುವ ರಮೇಶ್, ಮತ್ತೆ ಸಚಿವರಾಗಿ ಮಾಡದಿದ್ದರೆ 2022ರಲ್ಲಿ ಬಿಜೆಪಿ ತೊರೆಯೋ ಎಚ್ಚರಿಕೆ ನೀಡಿದ್ರು.  ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆ ಹಿನ್ನೆಲೆ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಈ ಹಿನ್ನೆಲೆ ಬೆಳಗಾವಿ ಹಾಗೂ ಎಸ್ ಟಿ ಕೋಟಾದಡಿ ಸಚಿವ ಸ್ಥಾನ ನೀಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ. 

Published by:ಪಾವನ ಎಚ್ ಎಸ್
First published: