• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BJP: ಬಿಎಸ್​ವೈ ನಿವಾಸಕ್ಕೆ ಬಿಎಲ್​ ಸಂತೋಷ್; ಆ ಇಬ್ಬರನ್ನು ಸೋಲಿಸಲು ರಾಜಾಹುಲಿಗೆ ಟಾಸ್ಕ್

BJP: ಬಿಎಸ್​ವೈ ನಿವಾಸಕ್ಕೆ ಬಿಎಲ್​ ಸಂತೋಷ್; ಆ ಇಬ್ಬರನ್ನು ಸೋಲಿಸಲು ರಾಜಾಹುಲಿಗೆ ಟಾಸ್ಕ್

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

BS Yediyurappa: ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಎಲ್ ಸಂತೋಷ್ ಜೊತೆ ಚರ್ಚೆ ನಡೆಸಲಾಯ್ತು. ಹಿರಿಯರಾಗಿ ಸಲಹೆ ನೀಡಿದ್ರು.

 • Share this:

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರಿಗೆ ಬಿಜೆಪಿ ಹೈಕಮಾಂಡ್ (BJP High Command) ಬಿಗ್ ಟಾಸ್ಕ್ ನೀಡಿದೆ ಎಂದು ತಿಳಿದು ಬಂದಿದೆ. ಈ ಸಂದೇಶ ಯಡಿಯೂರಪ್ಪ ಅವರಿಗೆ ತಲುಪಿದ್ದು, ಆ ಇಬ್ಬರು ಘಟಾನುಘಟಿ ನಾಯಕರ ವಿರುದ್ಧ ಮಾಜಿ ಸಿಎಂ ಪ್ರಚಾರ ನಡೆಸಲಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಸಿಎಂ  ಜಗದೀಶ್ ಶೆಟ್ಟರ್ (Former CM Jagadish Shettar) ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Former DCM Laxman Savadi) ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.


ಶೆಟ್ಟರ್ ಮತ್ತು ಸವದಿ ಲಿಂಗಾಯತ ಮುಖಂಡರಾಗಿದ್ದರಿಂದ (Lingayat Leaders) ಇಬ್ಬರನ್ನು ಸೋಲಿಸುವ ಜವಾಬ್ದಾರಿಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನೀಡಿದೆ ಎಂದು ತಿಳಿದು ಬಂದಿದೆ.


ಬಿಎಸ್​ವೈ ನಿವಾಸಕ್ಕೆ ಬಿಎಲ್​ ಸಂತೋಷ್ ಭೇಟಿ


ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿಯಾಗಿ ಚುನಾವಣೆ ಸಂಬಂಧ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದರು. ವರುಣಾ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಅಥಣಿಯಲ್ಲಿ ಹೆಚ್ಚು ಪ್ರಚಾರದ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಕರಿಸಬೇಕೆಂದು ಬಿಎಲ್ ಸಂತೋಷ್ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಂತ ಬಲದಲ್ಲೇ ಅಧಿಕಾರಕ್ಕೆ ಬರುತ್ತೇವೆ 


ಬಿಎಲ್ ಸಂತೋಷ್ ಭೇಟಿ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ಇಂದಿನಿಂದ ಚುನಾವಣೆ ಮುಗಿಯುವ ತನಕ ನಾನು ಪ್ರಚಾರ ಮಾಡುತ್ತೇನೆ. ಎಲ್ಲ ಕಡೆಯೂ ಬಿಜೆಪಿಯ ವಾತವರಣ ಗಾಳಿ ಬೀಸುತ್ತಿದೆ. ಮೋದಿ, ಅಮಿತ್ ಶಾ ಬಂದ ಮೇಲೆ ದೊಡ್ಡ ಪ್ರಮಾಣದಲ್ಲಿ ಅನುಕೂಲ ಆಗಲಿದೆ. ನಾವು ಎಲ್ಲೇ ಹೋದ್ರು ದೇವದುರ್ಬಲವಾದ ಸ್ವಾಗತ ಸಿಗ್ತಿದೆ.  ಯಾರ ಬೆಂಬಲ ಇಲ್ಲದೇ ನಾವೇ ಸ್ವಂತ ಬಲದಲ್ಲೇ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು.


ಇದನ್ನೂ ಓದಿ: Gokak: ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಸಂಚಲನ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ


130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ

top videos


  ನಾವೇ ಸರ್ಕಾರ ರಚಿಸೋದು‌ ನಿಶ್ಚಿತ. ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಎಲ್ ಸಂತೋಷ್ ಜೊತೆ ಚರ್ಚೆ ನಡೆಸಲಾಯ್ತು. ಹಿರಿಯರಾಗಿ ಸಲಹೆ ನೀಡಿದ್ರು. ಸಂತೋಷ್ ಅವರಿಗೂ ಚುನಾವಣೆ ಬಗ್ಗೆ ಸಮಾಧಾನ ಇದೆ. 130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಹೇಳಿದರು.

  First published: