ಕುಮಾರಸ್ವಾಮಿ ದೂರಿದರೂ ಸಿದ್ದರಾಮಯ್ಯ ಪರ ಬ್ಯಾಟಿಂಗ್​ ಮಾಡಿದ ರಾಹುಲ್​ ಗಾಂಧಿ

news18
Updated:August 30, 2018, 5:54 PM IST
ಕುಮಾರಸ್ವಾಮಿ ದೂರಿದರೂ ಸಿದ್ದರಾಮಯ್ಯ ಪರ ಬ್ಯಾಟಿಂಗ್​ ಮಾಡಿದ ರಾಹುಲ್​ ಗಾಂಧಿ
news18
Updated: August 30, 2018, 5:54 PM IST
ಧರಣೀಶ್​ ಬೂಕನಕೆರೆ, ನ್ಯೂಸ್​ 18 ಕನ್ನಡ

ನವದೆಹಲಿ (ಆ.30): ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ಹೇಳಿಕೆಗಳು ಕುಮಾರಸ್ವಾಮಿಗೆ ನುಂಗಲಾರದ ತುತ್ತಾಗಿದೆ. ಈ ರೀತಿಯ ಹೇಳಿಕೆಗಳು ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವುದು ಖಚಿತ ಎಂದು ಈ ಕುರಿತು ಕುಮಾರಸ್ವಾಮಿ ರಾಹುಲ್​ಗಾಂಧಿಗೆ ದೂರು ಕೂಡ ನೀಡಿದ್ದಾರೆ.

ಕಾಂಗ್ರೆಸ್​ ಬೆಂಬಲದೊಂದಿಗೆ ಜೆಡಿಎಸ್​ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆ ದೆಹಲಿಗೆ ತೆರಳಿ ರಾಹುಲ್​ಗಾಂಧಿಗೆ ಧನ್ಯವಾದ ತಿಳಿಸಿದ ಕುಮಾರಸ್ವಾಮಿ ಇದೇ ಅವಕಾಶವನ್ನು ಬಳಸಿಕೊಂಡು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುತ್ತಿದ್ದು, ಈ ಹೇಳಿಕೆಗಳು ಸರ್ಕಾರದ ಅನಿಶ್ಚಿತತೆಯನ್ನು ಪ್ರಶ್ನೆ ಮಾಡುತ್ತಿದೆ. ಬಸವಕಲ್ಯಾಣ ಶಾಸಕ  ಸೇರಿದಂತೆ ಅನೇಕ ಶಾಸಕರು ಸರ್ಕಾರದ   ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಶಾಸಕರಿಗೆ ಸಿದ್ದರಾಮಯ್ಯ ಅವರೇ ತಿಳಿ ಹೇಳುಬೇಕು. ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಿಗೆ ನೀವೇ  ಹೇಳಬೇಕು ಎಂದು ಕುಮಾರಸ್ವಾಮಿ ರಾಹುಲ್​ ಗಾಂಧಿಗೆ ಮನವಿ ಮಾಡಿದರು.

ಅಲ್ಲದೇ ಶೀಘ್ರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿ, ನಿಗಮ ಮಂಡಳಿಗಳಿಗೆ ಶಾಸಕರ ನೇಮಕಾತಿಗೆ ಅಸ್ತು ನೀಡಬೇಕು. ನೂತನವಾಗಿ ರಾಜ್ಯಾಧ್ಯಕ್ಷರಾಗಿರುವ ಎಚ್​. ವಿಶ್ವನಾಥ್​ ಸೇರ್ಪಡೆ ಮಾಡುವಂತೆ ಕೂಡ ಮನವಿ ಮಾಡಿದ್ದಾರೆ. ಈ ವೇಳೆ ಜಾಣ ನಡೆ ಪ್ರದರ್ಶಿಸಿರುವ ರಾಹುಲ್​ ಗಾಂಧಿ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿ ಫೈನಲ್​ ಮಾಡಿ ಎಂದು ಸಿದ್ದರಾಮಯ್ಯ ಹೆಗಲಿಗೆ ಜವಾಬ್ದಾರಿಯನ್ನು ಹೊರೆಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್​ ನಾಯಕರ ಮಾತಿಗೆ ಮನ್ನಣೆ ಇಲ್ಲದಂತೆ ಆಗಿದೆ. ಕೈ ನಾಯಕರ ಹಿಡಿತ ತಪ್ಪುತ್ತಿದ್ದು,  ಕುಮಾರಸ್ವಾಮಿ ಮತ್ತು ಅವರ ಅಣ್ಣ ರೇವಣ್ಣ, ಹಾಗೂ ಜೆಡಿಎಸ್​ ವರಿಷ್ಠ ದೇವೇಗೌಡ ಹಿಡಿತವನ್ನು ಸಾಧಿಸುತ್ತಿದ್ದಾರೆ ಎಂಬ ವರದಿ ರಾಹುಲ್​ ಗಾಂಧಿಗೆ ಹೋಗಿದೆ. ಈ ಹಿನ್ನಲೆಯಲ್ಲಿ ರಾಹುಲ್​ ಕುಮಾರಸ್ವಾಮಿ ಪ್ರತಿಯೊಂದು ಮಾತಿಗೆ ತಲೆ ಅಲ್ಲಾಡಿಸಿ ಕೊನೆಗೆ ಅಂತಿಮ ಅಧಿಕಾರವನ್ನು ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದ್ದಾರೆ.

ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ ಅಧ್ಯಕ್ಷರ ಸೇರ್ಪಡೆಗೂ ಅಸ್ತು ಕುರಿತಂತೆ ಪ್ರತಿಯೊಂದು  ವಿಷಯವೂ ಸಮನ್ವಯ ಸಮಿತಿಯಲ್ಲೇ ನಿರ್ಧಾರವಾಗಲಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದರೂ ಅವರ ಪರವೇ ಹೈಮಾಂಡ್ ನಿಂತಿದೆ.
Loading...

ಕುಮಾರಸ್ವಾಮಿ ಎದುರು ಹೈ ಕಮಾಂಡ್​ ಸಿದ್ದರಾಮಯ್ಯ ಪರವಾಗಿ ನಿಂತರು. ಮೈತ್ರಿ ಸರ್ಕಾರದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದ ದೃಷ್ಟಿ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿಮಾಡಿದ್ದಾರೆ.  ಅಸಮಾಧಾನಿತ ಶಾಸಕರೊಂದಿಗೆ ಮಾತನಾಡಿ, ಸಣ್ಣ ಪುಟ್ಟ ಗೊಂದಲಗಳಿಗೂ ಬೇಜಾರಾಗದಂತೆ ನೋಡಿಕೊಂಡು ಕೂಡಲೇ ಮನವೊಲಿಸಿ ಎಂದು ಯುರೋಪ್​ ಪ್ರವಾಸಕ್ಕೂ ಮುನ್ನ ಜವಬ್ದಾರಿಯನ್ನು  ನೀಡಿದ್ದಾರೆ.

ರಾಹುಲ್​ ಗಾಂಧಿಗೆ ಸಿದ್ದರಾಮಯ್ಯ ಬಗ್ಗೆ ಮೊದಲಿನಿಂದಲೂ ಅಧಿಕ ಒಲವಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ನಡೆಸಿ ಅವರೆ ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಬಹುಮತದಿಂದ ಸರ್ಕಾರ ರಚಿಸಲು ಕಾಂಗ್ರೆಸ್​ ವಿಫಲವಾದಾಗ ಮೈತ್ರಿಗೆ ಮುಂದಾದ ಕಾಂಗ್ರೆಸ್​ ಹೈ ಕಮಾಂಡ್​ ಸಿದ್ದರಾಮಯ್ಯಗೆ ಸೂಕ್ತ ಸ್ಥಾನಮಾನ ಒದಗಿಸುವ ಸಲುವಾಗಿ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ