ರಾಜ್ಯ ಬಿಜೆಪಿ ನಾಯಕರಿಗೆ ಸಂಕ್ರಾಂತಿ ಗಿಫ್ಟ್; ಜ. 17ರಂದು ಪ್ರವಾಸ ಭಾಗ್ಯ

ರಾಜ್ಯ ಬಿಜೆಪಿಯ ವಿವಿಧ ಸ್ತರದ ಪದಾಧಿಕಾರಿಗಳು, ಸಂಘದ ಕಾರ್ಯಕರ್ತರು, ಎಬಿವಿಪಿ ಪ್ರಮುಖರು ಸೇರಿ ವರ್ಷಕ್ಕೆ ಒಂದು ದಿನ ಒಟ್ಟಿಗೆ ರಜೆ ಪಡೆಯುವುದು ವಾಡಿಕೆ. ಕಳೆದ ವರ್ಷ ಕೊರೋನಾ ಕಾರಣದಿಂದ ಹೋಗಲಾಗಿರಲಿಲ್ಲ. ಈಗ ಜ. 17ರಂದು ಒಂದು ದಿನದ ಪ್ರವಾಸಕ್ಕೆ ಹೈಕಮಾಂಡ್ ಒಪ್ಪಿದೆ.

ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್

  • Share this:
ಬೆಂಗಳೂರು: ಪಕ್ಷದ ಕೆಲಸ ಮಾಡಿರುವ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಂಕ್ರಾಂತಿ ಗಿಫ್ಟ್ ನೀಡಿದೆ. ಸಂಕ್ರಾಂತಿ ಕಳೆದ ಕೂಡಲೇ ಒಂದು ದಿನ ರಾಜ್ಯದ ಯಾವುದಾದರೊಂದು ಪ್ರವಾಸಿ ಸ್ಥಳಕ್ಕೆ ಟ್ರಿಪ್ ಹೋಗಲು ರಾಜ್ಯ ಬಿಜೆಪಿ ಪದಾಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಜನವರಿ 17 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಟ್ರಿಪ್‍ಗೆ ದಿನಾಂಕ ನಿಗದಿಯಾಗಿದೆ.

ಬಿಜೆಪಿ ಮಂಡಲ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಜನವರಿ ತಿಂಗಳಿನಲ್ಲಿ ಒಂದು ದಿನ ಪಿಕ್‍ನಿಕ್ ಹೋಗುವ ಸಂಪ್ರದಾಯ ಇದೆ. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಘಟಕಕ್ಕೆ ಪಿಕ್‍ನಿಕ್ ಹೋಗಲು ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆಯಂತೆ ಜನವರಿ 17 ರಂದು ರಾಜ್ಯ ಪದಾಧಿಕಾರಿಗಳ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 3 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ವೇಳೆ ಪಿಕ್‍ನಿಕ್ ಸ್ಥಳ ನಿಗದಿಯಾಗಲಿದೆ.

ಇದನ್ನೂ ಓದಿ: ಆನ್​ಲೈನ್​ ಆ್ಯಪ್​ನಲ್ಲಿ ಲೋನ್ ತೆಗೆದುಕೊಳ್ಳುವ ಗ್ರಾಹಕರೇ ಎಚ್ಚರ; ನಿಮ್ಮ ಖಾಸಗಿ ಡೇಟಾ ಲೀಕ್ ಆದೀತು..!

ಬಿಜೆಪಿ ಪದಾಧಿಕಾರಿಗಳು, ಸಂಘದ ಕಾರ್ಯಕರ್ತರು, ಎಬಿವಿಪಿ ಪ್ರಮುಖರು ಎಲ್ಲಾ ಸೇರಿ ವರ್ಷದ ಒಂದು ದಿನ ರಜಾ ತೆಗೆದುಕೊಳ್ಳುವ ಪದ್ಧತಿ ಇದೆ. ಆ ನಿಯಮದ ಪ್ರಕಾರ ವರ್ಷದ ಒಂದು ದಿನ ಯಾವುದಾದರೂ ಒಂದು ಸ್ಥಳಕ್ಕೆ ಒಟ್ಟಾಗಿ ಟ್ರಿಪ್ ಹೋಗುತ್ತಾರೆ. ಆದರೆ, ಕೊರೊನಾ ಹಿನ್ನೆಲೆ 2020 ರಲ್ಲಿ ಈ ಕಾರ್ಯಕ್ರಮ ನಡೆದಿರಲಿಲ್ಲ. ಈಗ ಜನವರಿ 17ರಂದು ರಾಜ್ಯದಲ್ಲೇ ಒಂದು ಸ್ಥಳಕ್ಕೆ ಟ್ರಿಪ್ ಹೋಗಲು ಯೋಜನೆ ಹಾಕಿಕೊಳ್ಳಲಾಗಿದೆ. ಬಿಜೆಪಿ ಪದಾಕಾರಿಗಳ ಒನ್ ಡೇ ಪಿಕ್‍ನಿಕ್ ಕಾರ್ಯಕ್ರಮದಲ್ಲಿ ಪಕ್ಷದ ಅಧಿಕೃತ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಇರುವುದಿಲ್ಲ.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by:Vijayasarthy SN
First published: