ವಿಧಾನಸೌಧದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​; ಸಿಎಂ ಕುಮಾರಸ್ವಾಮಿ ರಾಜೀನಾಮೆ ಮುನ್ಸೂಚನೆ?

ವಿಧಾನಸೌಧಕ್ಕೆ ಈಗಾಗಲೇ ಡಿಜಿಪಿ ನೀಲಮಣಿ ರಾಜು, ನಗರ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​​ ಆಗಮಿಸಿದ್ದು, ಶಕ್ತಿಸೌಧದ ಸುತ್ತ ಹೈ ಆಲರ್ಟ್​ ಘೋಷಣೆಯಾಗಿದೆ, ಅಲ್ಲದೇ ವಿಧಾನಸೌಧದಿಂದ ರಾಜಭವನದವರೆಗೆ ಟ್ರಾಫಿಕ್​ ಕ್ಲಿಯರ್​ ಮಾಡಲು ಪೊಲೀಸರು ನಿಂತಿದ್ದು, ಇವೆಲ್ಲವನ್ನು ಗಮನಿಸಿದಾಗ ಸಿಎಂ ರಾಜೀನಾಮೆ ಬಹುತೇಕ ಖಚಿತ ಎಂಬ ಮುನ್ಸೂಚನೆ ನೀಡಿದೆ.

Seema.R | news18
Updated:July 22, 2019, 6:48 PM IST
ವಿಧಾನಸೌಧದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​; ಸಿಎಂ ಕುಮಾರಸ್ವಾಮಿ ರಾಜೀನಾಮೆ ಮುನ್ಸೂಚನೆ?
ವಿಧಾನಸೌಧದ ಪೊಲೀಸ್​ ಬಂದೋಬಸ್ತ್
  • News18
  • Last Updated: July 22, 2019, 6:48 PM IST
  • Share this:
ಬೆಂಗಳೂರು (ಜು.22): ಎಷ್ಟು ಸಮಯವಾದರೂ ಪರವಾಗಿಲ್ಲ ಇಂದೇ ವಿಶ್ವಾಸಮತ ನಿರ್ಣಯವಾಗಬೇಕು ಎಂದು ಸ್ಪೀಕರ್​ ಪಟ್ಟು ಹಿಡಿದ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಇಂದು ರಾಜೀನಾಮೆ ಸಲ್ಲಿಸುವುದು ಬಹುತೇಕ ಖಚಿತ ಎಂಬ ಮಾತು ಬಲವಾಗಿ ಕೇಳಿ ಬಂದಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸೌಧದಲ್ಲಿ ಬಿಗಿ ಪೊಲೀಸ್​ ಭದ್ರತೆ ಹೆಚ್ಚಿದ್ದು, ಇದಕ್ಕೆ ಮತ್ತಷ್ಟು ಸಾಕ್ಷಿ ಒದಗಿಸಿದೆ.

ಮೈತ್ರಿ ಸರ್ಕಾರದ ಸಂಖ್ಯಾಬಲ ಕುಗ್ಗಿರುವ ಹಿನ್ನೆಲೆ ಸಿಎಂ ಕುಮಾರಸ್ವಾಮಿ, ವಿಶ್ವಾಸಮತ ಯಾಚನೆ ಬದಲು ವಿದಾಯದ ಭಾಷಣ ಮಾಡಲಿದ್ದಾರೆ.  ಇದಾದ ಬಳಿಕ ನೇರವಾಗಿ ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ರಾಜಭವನ ಹಾಗೂ ವಿಧಾನಸೌಧ ಸುತ್ತ ಪೊಲೀಸರು ಸರ್ಪಗಾವಲು ಹೆಚ್ಚಿದೆ.

ವಿಧಾನಸೌಧಕ್ಕೆ ಈಗಾಗಲೇ ಡಿಜಿಪಿ ನೀಲಮಣಿ ರಾಜು, ನಗರ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​​ ಆಗಮಿಸಿದ್ದು, ಶಕ್ತಿಸೌಧದ ಸುತ್ತ ಹೈ ಆಲರ್ಟ್​ ಘೋಷಣೆಯಾಗಿದೆ. ಅಲ್ಲದೇ, ವಿಧಾನಸೌಧದಿಂದ ರಾಜಭವನದವರೆಗೆ ಟ್ರಾಫಿಕ್​ ಕ್ಲಿಯರ್​ ಮಾಡಲು ಪೊಲೀಸರು ನಿಂತಿದ್ದು, ಇವೆಲ್ಲವನ್ನು ಗಮನಿಸಿದಾಗ ಸಿಎಂ ರಾಜೀನಾಮೆ ಬಹುತೇಕ ಖಚಿತ ಎಂಬ ಮುನ್ಸೂಚನೆ ಒದಗಿಸಿದೆ

ಇದನ್ನು ಓದಿ: ವಿಶ್ವಾಸಮತಕ್ಕೆ ಕ್ಷಣಗಣನೆ; ಸದನದಲ್ಲಿ ಹಾಜರಿರುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್

ಕೇಂದ್ರ ವಿಭಾಗ ಡಿಸಿಸಿ ಚಂದ್ರಗುಪ್ತ, ಇಬ್ಬರು ಎಸಿಪಿ ನೇತೃತ್ವದಲ್ಲಿ  ಇನ್ಸ್ಪೆಕ್ಟರ್  ,ನೂರಕ್ಕೂ ಹೆಚ್ಚು ಪೊಲೀಸರು, ಕೆಎಸ್ಆರ್​ಪಿ ತುಕಡಿಯನ್ನು ರಾಜಭವನ ಮುಂದೆ  ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ಬಿಗಿಬಂದೋಬಸ್ತ್​ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇನ್ನೆರಡು ದಿನ ಚರ್ಚೆಗೆ ಅವಕಾಶ ನೀಡಲು ಸಿಎಂ ಕೋರಿದ್ದ ಕಾಲಾವಕಾಶವನ್ನು ಸ್ಪೀಕರ್​ ತಳ್ಳಿ ಹಾಕಿದ್ದು, ಮಧ್ಯಾಹ್ನದಿಂದ ಸಿಎಂ ಕುಮಾರಸ್ವಾಮಿ ಕಲಾಪಕ್ಕೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ವಿದಾಯ ಭಾಷಣಕ್ಕೆ ಸಜ್ಜಾಗಿದ್ದಾರಾ ಎಂಬ ಅನುಮಾನ ಮೂಡಿಸಿದೆ.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading