ಮಂಗಳೂರಲ್ಲಿ ಸಜೀವ ಬಾಂಬ್​ ಪತ್ತೆ ಹಿನ್ನೆಲೆ; ಬೆಂಗಳೂರು ಸೇರಿ ಎಲ್ಲೆಡೆ ಹೈ ಅಲರ್ಟ್​ ಘೋಷಣೆ

ಶಕ್ತಿಸೌಧ ವಿಧಾನಸೌಧ, ವಿಕಾಸಸೌದದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಧಾನಸೌಧಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಒಳಗಡೆ ಬಿಡುತ್ತಿದ್ದಾರೆ. ವಿಧಾನಸೌಧದ ಒಳಗೆ ಬರುವ ಕಾರುಗಳನ್ನು ಚೆಕ್ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜ.20): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆಯಾದ ಹಿನ್ನೆಲೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೈ ಅಲರ್ಟ್​​ ಘೋಷಣೆ ಮಾಡಲಾಗಿದೆ. ಮಂಗಳೂರಿನ ಎಲ್ಲೆಡೆ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. 

  ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ.  ಬೆಂಗಳೂರಿನಾದ್ಯಂತ ಎಲ್ಲಾ ಡಿಸಿಪಿಗಳಿಗೂ ಪೊಲೀಸ್ ಆಯುಕ್ತರು ಮೌಖಿಕ ಆದೇಶ ಹೊರಡಿಸಿದ್ದಾರೆ. ತಮ್ಮ-ತಮ್ಮ ಡಿವಿಜನ್ ನಲ್ಲಿರುವ ಎಲ್ಲಾ ಪ್ರಮುಖ ಸ್ಥಳಗಳು, ಧಾರ್ಮಿಕ ಮಂದಿರಗಳು ಮತ್ತು ಬಸ್/ ಮೆಟ್ರೋ ನಿಲ್ದಾಣಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಸೂಚನೆ ಹಿನ್ನೆಲೆ ಪ್ರತಿ ವಿಭಾಗದ ಇನ್ಸ್‌ಪೆಕ್ಟರ್ ಹಾಗೂ ಎಸಿಪಿಗಳ ಜೊತೆ ಡಿಸಿಪಿಗಳ ಸಭೆ ನಡೆಸಲಾಗಿದೆ. ಅಗತ್ಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಬಗ್ಗೆ ಸೂಚನೆ ನೀಡಲಾಗಿದೆ.

  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗುತ್ತದೆ.  ಶ್ವಾನದಳ ಹಾಗೂ ಬಾಂಬ್ ನಿಷ್ಟ್ರಿಯ ದಳದಿಂದ ತೀವ್ರ ತಪಾಸಣೆ ಮಾಡಲಾಗುತ್ತಿದೆ.  ಪೊಲೀಸರು ವಿಮಾನ ನಿಲ್ದಾಣದಲ್ಲಿ ಅನುಮಾಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪ್ರಯಾಣಿಕರ ಬ್ಯಾಗ್ ಗಳನ್ನು ಸಹ ತಪಾಸಣೆ ಮಾಡುತ್ತಿದ್ದಾರೆ.   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದೇವನಹಳ್ಳಿ ಏರ್​​ಪೋರ್ಟ್​ನಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಶ್ವಾನದಳ, ಪೊಲೀಸರಿಂದ ತೀವ್ರ ತಪಾಸಣೆ ಮಾಡಲಾಗುತ್ತಿದೆ.

  ಮಂಗಳೂರು ಏರ್​ಪೋರ್ಟ್​ನಲ್ಲಿ ಪತ್ತೆಯಾಯ್ತು ಸಜೀವ ಬಾಂಬ್; ಭದ್ರತಾ ವೈಫಲ್ಯ, ವಿಮಾನ ನಿಲ್ದಾಣ ಕೆಲಕಾಲ ಬಂದ್

  ಶಕ್ತಿಸೌಧ ವಿಧಾನಸೌಧ, ವಿಕಾಸಸೌದದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಧಾನಸೌಧಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಒಳಗಡೆ ಬಿಡುತ್ತಿದ್ದಾರೆ. ವಿಧಾನಸೌಧದ ಒಳಗೆ ಬರುವ ಕಾರುಗಳನ್ನು ಚೆಕ್ ಮಾಡುತ್ತಿದ್ದಾರೆ. ಬಾಂಬ್ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಹೆಚ್ಚು ಭದ್ರತೆ ಕಲ್ಪಿಸಿದ್ದಾರೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.  ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳ ಪರಿಶೀಲನೆಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಶ್ವಾನದಳ ಹಾಗೂ ಎ‌ಎಸ್‌ಸಿ (ಆಂಟಿ ಸೆಡ್ಯುಟೇಜ್ ಚೆಕ್) ನಿಯೋಜನೆ ಮಾಡಲಾಗಿದೆ.

  ಸಕ್ಕರೆನಾಡು ಮಂಡ್ಯದಲ್ಲಿ ಹೈ ಅಲರ್ಟ್​​​ ಘೋಷಣೆ ಮಾಡಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದರೆ ಕಂಟ್ರೋಲ್ ರೂಂ ಕರೆ ಮಾಡಲು ಸೂಚನೆ ನೀಡಲಾಗಿದೆ.  ಮೈಸೂರಿನಲ್ಲಿ ನಗರ ಪೊಲೀಸ್ ಆಯಕ್ತರು ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ. ಗುಪ್ತದಳ ಇಲಾಖೆಯಿಂದ ತಕ್ಷಣ  ಮಾಹಿತಿ ರವಾನೆ ಮಾಡುವಂತೆ ಸೂಚಿಸಿದ್ಧಾರೆ. ಪ್ರವಾಸಿ ತಾಣಗಳು ಸೇರಿದಂತೆ ಇತರೆಡೆ ಹೈ ಅರ್ಲಟ್ ಘೋಷಿಸಿದ್ದಾರೆ.

  ಮೋದಿ-ಶಾ ನಂಬಿಗಸ್ಥ ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

  ಉಡುಪಿಯಲ್ಲೂ ಹೈ ಅಲರ್ಟ್ ಘೋಷಿಸಿದ್ದು, ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬಾಂಬು ಪತ್ತೆ ದಳದಿಂದ ಕಾರ್ಯಾಚರಣೆ ನಡೆಸಿದ್ದು,ಅನುಮಾನಾಸ್ಪದ ವ್ಯಕ್ತಿಗಳನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ವಾರದ ಹಿಂದೆ ಇದೇ ರೈಲ್ವೇ ನಿಲ್ದಾಣದಲ್ಲಿ ಮೂವರು ಶಂಕಿತ ಉಗ್ರರು ಸಿಕ್ಕಿ ಬಿದ್ದಿದ್ದರು. ಹೀಗಾಗಿ ಬಸ್ ನಿಲ್ದಾಣ ಮತ್ತು ಕೃಷ್ಣಮಠ ಪರಿಸರದಲ್ಲಿ ಹೆಚ್ಚಿನ  ಭದ್ರತೆ ವಹಿಸಲಾಗಿದೆ.

  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಣೆ ಮಾಡಿದ್ದು, ಶ್ವಾನದಳದಿಂದ ಪ್ರಯಾಣಿಕರ ಬ್ಯಾಗ್‌ ಪರಿಶೀಲನೆ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ.  ಬಳ್ಳಾರಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  ವಿಶ್ವಪ್ರಸಿದ್ದ ಹಂಪಿ, ತುಂಗಭದ್ರ ಜಲಾಶಯದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  ಕಲಬುರ್ಗಿ ವಿಮಾನ ನಿಲ್ದಾಣ ಮತ್ತಿತರ ಕಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತಿತರ ಕಡೆ ರೊಟೀನ್ ಚೆಕ್ ಅಪ್ ಗಳ ಮುಂದುವರಿಕೆ ಮಾಡಲಾಗುತ್ತದೆ. ವಿಮಾನ ನಿಲ್ದಾಣದ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.

  ಮೋದಿ ಮತ್ತು ಅಮಿತ್ ಶಾ ಈ ದೇಶದ ಆಧುನಿಕ ಭಸ್ಮಾಸುರರು: ವಿ.ಎಸ್. ಉಗ್ರಪ್ಪ

  ಕೊಡಗಿನ ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಗೂ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲಿಗೂ ಕ್ರಮ ಕೈಗೊಳ್ಳಲಾಗಿದೆ.

  ಉತ್ತರಕನ್ನಡದ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲೆಯಾದ್ಯಂತ ಜಿಲ್ಲೆಯ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ವಿಶ್ವ ವಿಖ್ಯಾತ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

   
  First published: