Kannadada Kotyadhipatiಯಲ್ಲಿ ಭಾಗವಹಿಸಿದ್ದ ಪ್ರತಿಭಾವಂತ ಯುವಕ ಸೂಸೈಡ್! ಗೃಹಪ್ರವೇಶಕ್ಕೂ ಮುನ್ನವೇ ಸಾವಿಗೆ ಶರಣು
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಭಾಗಿಯಾಗಿದ್ದ ಸ್ಪರ್ಧಿ, ಬಾಗಲಕೋಟೆ ಜಿಲ್ಲೆಯ ಹೆಸ್ಕಾಂ ಲೈನ್ಮೆನ್ (HESCOM Linemen) ತಿಮ್ಮಣ್ಣ ಗುರಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಗಲಕೋಟೆ: ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna TV) ಮೂಡಿ ಬರುತ್ತಿದ್ದ ಜನಪ್ರಿಯ ಕಾರ್ಯಕ್ರಮ ’ಕನ್ನಡದ ಕೋಟ್ಯಾಧಿಪತಿ’ (Kannadada Kotyadhipati) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ನಟ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ನಡೆಸಿಕೊಡುತ್ತಿದ್ದ ಈ ಕ್ವಿಜ್ ಶೋ (Quiz Show), ಇಡೀ ಮನೆಮಂದಿಯೆಲ್ಲರ ಫೆವರೇಟ್ (Favorite) ಆಗಿತ್ತು. ಬಳಿಕ ಮತ್ತೊಂದು ಸೀಸನ್ (Season) ಅನ್ನು ನಡೆಸಿಕೊಟ್ಟಿದ್ದು ಕನ್ನಡದ ಪ್ರತಿಭಾನ್ವಿತ ನಾಯಕ ನಟ (Hero), ನಿರ್ದೇಶಕ (Director) ರಮೇಶ್ ಅರವಿಂದ್ (Ramesh Aravind). ಅದೆಷ್ಟೋ ಮಂದಿ ಯುವಕರು, ಗೃಹಿಣಿಯರು, ಉದ್ಯೋಗಿಗಳು, ಮಕ್ಕಳು, ಮುದುಕರು, ಬಡವರು, ಮಧ್ಯಮ ವರ್ಗದ ಜನ ಹೀಗೆ ಸಾಕಷ್ಟು ಜನ ಭಾಗವಹಿಸಿ, ಲಕ್ಷಾಂತರ ರೂಪಾಯಿ ಗೆದ್ದುಕೊಂಡು ಹೋಗಿದ್ದಾರೆ. ಹೀಗೆ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರದ ಹೆಸ್ಕಾಂ ಲೈನ್ಮೆನ್ (HESCOM Linemen) ತಿಮ್ಮಣ್ಣ ಗುರಡ್ಡಿ ಕೂಡ ಒಬ್ಬರು. ಇದೀಗ ತಿಮ್ಮಣ್ಣ ಗುರಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ಯುವಕ
ಎಸ್ಸೆಸ್ಸೆಲ್ಸಿ ಓದಿದ್ದ 27 ವರ್ಷದ ತಿಮ್ಮಣ್ಣ ಗುರಡ್ಡಿ, ಹೆಸ್ಕಾಂನಲ್ಲಿ ಲೈನ್ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಹೊಸದಾಗಿ ಮನೆ ಕಟ್ಟಿಸಲು ತಾವು ದುಡಿದ ಹಣದ ಜೊತೆಗೆ ಸಾಕಷ್ಟು ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲೆ ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾತ್ರಿ ಮಾತುಕತೆ, ಬೆಳಗಾಗುವಷ್ಟರಲ್ಲಿ ಸೂಸೈಡ್!
ರಾತ್ರಿ ತಿಮ್ಮಣ್ಣ ತಮ್ಮ ಸ್ನೇಹಿತರ ಜೊತೆ ಎಂದಿನಂತೆ ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್ ಗೆ ಕೂಡ ಹೊದಿದ್ದರು. ಈ ವೇಳೆ ಮನೆ ಗೃಹ ಪ್ರವೇಶದ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ್ದರು. ಆದರೆ, ಬೆಳಗ್ಗೆ ಆಗುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತಿಮ್ಮಣ್ಣ ಗುರಡ್ಡಿ ತಾವು ದುಡಿದು ಸಂಪಾದಿಸಿದ್ದ ಹಣದ ಜೊತೆಗೆ ಸಾಲ ಮಾಡಿ 18 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿದ್ದರು. ಇಂದು ಅಂದರೆ ಮೇ 5ರಂದು ಅವರ ಹೊಸ ಮನೆ ಗೃಹಪ್ರವೇಶಕ್ಕಾಗಿ ಸಮಯ ನಿಗದಿ ಆಗಿತ್ತು. ಅದಕ್ಕಾಗಿ ತಿಮ್ಮಣ್ಣ ಸ್ವಾಮೀಜಿಗೂ ಕೂಡ ಆಹ್ವಾನ ನೀಡಿದ್ದರು. ಆದರೆ ಹೊಸ ಮನೆ ಗೃಹ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗಿ
ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ 6.40 ಲಕ್ಷ ರೂಪಾಯಿ ಗೆದ್ದಿದ್ದರು. ಪ್ರತಿಭಾವಂತರಾಗಿದ್ದ ತಿಮ್ಮಣ್ಣ ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಚೀವ್ ಆಗಿದ್ದರು. ಜೊತೆಗೆ ಖೋ ಖೋ ಕ್ರೀಡಾಪಟು ಕೂಡ ಆಗಿದ್ದ ಇವರು, ಈ ಆಟದ ಬಗ್ಗೆ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು.
ತಿಮ್ಮಣ್ಣನಿಗೆ ದುಡ್ಡಿನ ಸಮಸ್ಯೆ ಇರಲಿಲ್ಲ ಅಂತ ಅವರ ಸ್ನೇಹಿತರು ಹೇಳುತ್ತಿದ್ದಾರೆ. ತಿಮ್ಮಣ್ಣ ಅವರಿಗೆ ಒಳ್ಳೆ ಸಂಬಳ ಬರುತ್ತಿತ್ತು. ಅವರ ಸ್ಯಾಲರಿ ಮೇಲೆ 16 ಲಕ್ಷ ರೂ. ಬ್ಯಾಂಕ್ ಸಾಲ ತೆಗೆದುಕೊಂಡಿದ್ದರು. ಆದರೆ ಆತ್ಮಹತ್ಯೆಗೆ ಶರಣಾಗಿದ್ದು ಆಘಾತ ಮೂಡಿಸಿದೆ. ಈ ಬಗ್ಗೆ ತನಿಖೆ ಆಗಬೇಕು ಅಂತ ಸ್ನೇಹಿತರು ಆಗ್ರಹಿಸಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ