Suicide: ನನ್ನ ಸಾವಿಗೆ ಇವರಿಬ್ಬರೇ ಕಾರಣ, ಐ ಲವ್ ಹೆಸ್ಕಾಂ;  ಡೆತ್ ನೋಟ್ ಬರೆದು ಉದ್ಯೋಗಿ ಆತ್ಮಹತ್ಯೆ

ಡೆತ್ ನೋಟ್​​ನಲ್ಲಿ ನನಗೆ ಈ ಕೆಲಸ ತುಂಬಾ ಇಷ್ಟ. ಐ ಲವ್ ಹೆಸ್ಕಾಂ ಎಂದು ಬರೆಯಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತ ಮಂಜುನಾಥ್

ಮೃತ ಮಂಜುನಾಥ್

  • Share this:
ಬೆಳಗಾವಿ ಜಿಲ್ಲೆಯ ಅಥಣಿಯ (Athani, Belagavi) ಹೆಸ್ಕಾಂ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಶರಣಾಗಿದ್ದ ಉದ್ಯೋಗಿ ಬರೆದಿಟ್ಟ ಡೆತ್ ನೋಟ್ (Death Note) ಲಭ್ಯವಾಗಿದೆ. ಡೆತ್​​ ನೋಟ್​​ನಲ್ಲಿ ಸಹೋದ್ಯೋಗಿಗಳ (Colleague) ಕಿರುಕುಳ ಕಾರಣ ಎಂದು ಬರೆಯಲಾಗಿದೆ. ಮಂಜುನಾಥ್ ಮುತ್ತಗಿ ಮೃತ ಉದ್ಯೋಗಿ. ಮಂಜುನಾಥ್ ಹೆಸ್ಕಾಂನಲ್ಲಿ (HESCOM) ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಸೋಮವಾರ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್​​ನಲ್ಲಿ ನನಗೆ ಈ ಕೆಲಸ ತುಂಬಾ ಇಷ್ಟ. ಐ ಲವ್ ಹೆಸ್ಕಾಂ ಎಂದು ಬರೆಯಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಂಜುನಾಥ್ ಡೆತ್​ ನೋಟ್​ನಲ್ಲಿ ಏನಿದೆ?

ನನ್ನ ಸಾವಿಗೆ ಇವರು ಇಬ್ಬರೇ ಕಾರಣ. ಬಸು ಕುಂಬಾರ್, ನಜೀರ್ ಡಲಾಯತ್, ಯಾಕೆ ಅಂದ್ರೆ ಇವರು ಮಾಡುವ ಮೋಸ, ಅನ್ಯಾಯ, ಮಾನಸಿಕ ಹಿಂಸೆ ದಬ್ಬಾಳಿಕೆ, ಕಿರುಕುಳ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗದೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.

employee suicide, Belagavi Crime News, Suicide Case, kannada News, Karnataka News, ಹೆಸ್ಕಾಂ ಉದ್ಯೋಗಿ ಆತ್ಮಹತ್ಯೆ ಕೇಸ್, ಬೆಳಗಾವಿ ಕ್ರೈಂ ನ್ಯೂಸ್
ನಜೀರ್ ಡಲಾಯತ್ ಮತ್ತು ಬಸು ಕುಂಬಾರ್


ನನಗೆ ಈ ಕೆಲಸ ಅಂದ್ರೆ ತುಂಬಾ ತುಂಬಾ ಇಷ್ಟ. ಆದರೆ ಇವರು ಮಾಡುವ ಭೇದಭಾವ. ನಮಗೊಂದು ಅವರಿಗೊಂದು ಅಂತ ಭೇದಭಾವ ನೋಡೋಕೆ ಆಗ್ತಿಲ್ಲ. ನಮ್ಮನ್ನೆಲ್ಲ ವಾರದ ಏಳು ದಿನ 24 ಗಂಟೆಯೂ ಕೇವಲವಾಗಿ ನೋಡುತ್ತಾರೆ. ಆದರೆ ನಾವು ಮಾಡೋದು ಸಹ ಹೆಸ್ಕಾಂ ಕೆಲಸ. ಆದ್ರೆ ಇವರು ನಮ್ಮನ್ನು ನೋಡುವ ರೀತಿ ಸರಿ ಇಲ್ಲ. ಇದು ಬದಲಾಗಬೇಕು.

ನಾವು ಎಲ್ಲರೂ ಒಂದೇ ಅನ್ನೋ ರೀತಿ ಇರಬೇಕು. ಆವಾಗ ಮಾತ್ರ ನನ್ನ ಸಾವಿಗೆ ನ್ಯಾಯ ಸಿಗುತ್ತದೆ. ನನ್ನಿಂದ ಯಾರಿಗಾದ್ರೂ ನೋವಾಗಿದ್ರೆ ಸಾರಿ. I Love HESCM And Athani  ಎಂದು ಡೆತ್​ ನೋಟ್​​​ನಲ್ಲಿ ಬರೆಯಲಾಗಿದೆ.

2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್! ವಂಚಕ ಅಸಿಸ್ಟೆಂಟ್ ಮ್ಯಾನೇಜರ್ ಎಸ್ಕೇಪ್

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (Yellapur) ತಾಲೂಕಿನ ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) ಭಾರೀ ಗೋಲ್ಮಾಲ್ (Golmall) ನಡೆದಿದೆ. ಇಲ್ಲಿನ ಶಾಖೆಯಲ್ಲಿ (Branch) 2.69 ಕೋಟಿ ರೂ. ಬ್ಯಾಂಕ್ ಅಧಿಕಾರಿಯೇ (bank Officers) ಲಪಟಾಯಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಇದ್ರಿಂದ ಗ್ರಾಹಕರು (Customer) ಬ್ಯಾಂಕ್ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಘಟನೆ ಸಂಬಂಧಿಸಿದಂತೆ ಪೊಲೀಸ್ ತನಿಖೆ (police enquiry) ಚುರುಕುಗೊಂಡಿದೆ.

ಇದನ್ನೂ ಓದಿ:  Potholes: ಮಂಗಳೂರಿಗೆ ಮೋದಿ, ರಾತ್ರೋ ರಾತ್ರಿ ಮಾಯವಾಗಿದ್ದ ರಸ್ತೆ ಗುಂಡಿಗಳು ಹತ್ತೇ ದಿನದಲ್ಲಿ ಪ್ರತ್ಯಕ್ಷ!

ಈ ನಡುವೆ ಹಣ ಕ್ರೆಡಿಟ್ (Credit) ಆಗಿದ್ದ ಖಾತೆಯಲ್ಲಿ ಸದ್ಯ ಝೀರೋ ಬ್ಯಾಲೆನ್ಸ್ (zero balance) ಇರುವುದು ತಿಳಿದುಬಂದಿದೆ. ಬರೋಬ್ಬರಿ 2.69 ಕೋಟಿ ರೂಪಾಯಿ (2.69 crore rupees) ಹಣವನ್ನು ತನ್ನ ಹೆಂಡತಿ ಅಕೌಂಟ್‌ಗೆ (wife account) ವರ್ಗಾಯಿಸಿರುವ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ (bank manager), ಇದೀಗ ಎಸ್ಕೇಪ್ ಆಗಿದ್ದಾನೆ.

ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಶಿವಮೊಗ್ಗ ನಗರದ ಪ್ರಿಯಾಂಕ ಲೇಔಟ್​​ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಸಾವನ್ನಪ್ಪಿದ್ದು, ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. 30 ವರ್ಷದ ಮಂಜುಳಾ ಮೃತ ಮಹಿಳೆ. ಮಂಜುಳಾ ಪತಿ ದಿನೇಶ್ ಚಾಕುವಿನಿಂದ ಕೈ ಕುಯ್ದುಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಜುಳಾ ಮೃತದೇಹ ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Woman dead body found in house husband suicide attempt mrq
ಶಿವಮೊಗ್ಗ ನ್ಯೂಸ್


ಇದನ್ನೂ ಓದಿ:  Bengaluru: ಜೈಲು ಸೇರಿದ BBMP ಜಂಟಿ ಆಯುಕ್ತ; ಮುಂದುವರಿಯಲಿದೆ ಒತ್ತುವರಿ ತೆರವು ಕಾರ್ಯಾಚರಣೆ; ಬಿಬಿಎಂಪಿ ಮೇಲಿದ್ಯಾ ರಾಜಕೀಯ ಒತ್ತಡ

ಪತ್ನಿಯ ಕೊಲೆಯ ಬಳಿಕ ದಿನೇಶ್ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ರಾತ್ರಿ ಪತಿ ಮತ್ತು ಪತ್ನಿ ಗಲಾಟೆ ನಡೆದಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸ್ಥಳೀಯರೇ ದಿನೇಶ್​​ನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ
Published by:Mahmadrafik K
First published: