ಎಲ್ಲದಕ್ಕೂ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ, ಹತ್ತಿರದ Post Officeನಲ್ಲಿ ಈ ದಾಖಲೆಗಳನ್ನು ಪಡೆಯಬಹುದು

post office services: ಈಗ ಹತ್ತಿರದಲ್ಲಿರುವ ಅಂಚೆ ಕಚೇರಿಯಲ್ಲಿ ಪ್ಯಾನ್​ ಕಾರ್ಡ್(PAN card)​ನಿಂದ ಹಿಡಿದು ತೆರಿಗೆ (ITR filing )ಹಿಂಪಡೆಯುವವರೆಗೂ ಎಲ್ಲಾ ರೀತಿಯ ಅರ್ಜಿಗಳನ್ನು ಸಲ್ಲಿಸಬಹುದು. ಆ ಬಗ್ಗೆ ಸಂಪೂರ್ಣ ಮಾಹಿತಿಯಲ್ಲಿ ಇಲ್ಲಿ ನೀಡಲಾಗಿದೆ.

ಅಂಚೆ ಕಚೇರಿ

ಅಂಚೆ ಕಚೇರಿ

  • Share this:
ಯಾವುದೇ ದಾಖಲೆಗಳು ಬೇಕೆಂದರೂ ಸರ್ಕಾರಿ ಕಚೇರಿಗಳಿಗೆ(govt office) ಅಲೆಯಬೇಕು. ಇಲ್ಲವೇ ಆನ್​ಲೈನ್​(online) ನಲ್ಲಿ ಅರ್ಜಿ ತುಂಬುವವರನ್ನು ಹುಡುಕಿಕೊಂಡು ಹೋಗಿ ಹಣ ತೆರಬೇಕು. ಸರ್ಕಾರಿ ಕಚೇರಿಗಳ ಎದುರು ಸರತಿ ಸಾಲಿನಲ್ಲಿ ನಿಂತು ದಾಖಲೆಗಳನ್ನು ಪಡೆಯುವಷ್ಟರಲ್ಲಿ ಸಾಕಪ್ಪಾ ಸಾಕು ಎನಿಸುತ್ತದೆ. ಆದರೆ ಇನ್ಮುಂದೆ ನಿಮಗೆ ಆ ಜಂಜಾಟ ಇರುವುದಿಲ್ಲ. ಎಲ್ಲದಕ್ಕೂ ಸರ್ಕಾರಿ ಕಚೇರಿಗಳಿಗೆ ಹೋಗಬೇಕೆಂದಿಲ್ಲ. ನಿಮ್ಮ ಹತ್ತಿರದಲ್ಲಿರುವ ಪೋಸ್ಟ್​ ಆಫೀಸ್​(Post Office) ಈಗ ನಿಮ್ಮ ಆಪ್ತ ಮಿತ್ರನಾಗಲಿದೆ. ಬೇರೆ ಬೇರೆ ರೀತಿಯ ದಾಖಲೆಗಳಿಗೆ ಬೇರೆ ಬೇರೆ ಸರ್ಕಾರಿ ಕಚೇರಿಗಳಿಗೆ ತೆರಳುವ ಬದಲು ಒಂದೇ ಕಚೇರಿಯಲ್ಲಿ ನಿಮಗೆ ಬೇಕಾದ ದಾಖಲೆಯನ್ನು ಪಡೆದುಕೊಳ್ಳಬಹುದು. ಹೌದು ಇದು ನಿಜ. ಈಗ ಹತ್ತಿರದಲ್ಲಿರುವ ಅಂಚೆ ಕಚೇರಿಯಲ್ಲಿ ಪ್ಯಾನ್​ ಕಾರ್ಡ್(PAN card)​ನಿಂದ ಹಿಡಿದು ತೆರಿಗೆ (ITR filing )ಹಿಂಪಡೆಯುವವರೆಗೂ ಎಲ್ಲಾ ರೀತಿಯ ಅರ್ಜಿಗಳನ್ನು ಸಲ್ಲಿಸಬಹುದು. ಆ ಬಗ್ಗೆ ಸಂಪೂರ್ಣ ಮಾಹಿತಿಯಲ್ಲಿ ಇಲ್ಲಿ ನೀಡಲಾಗಿದೆ.

ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದ ಅಂಚೆ ಕಚೇರಿ

ಭಾರತದಲ್ಲಿ ಅಂಚೆ ಕಚೇರಿಗಳು ನಾಗರಿಕರಿಗೆ ವ್ಯಾಪಕ ಸೇವೆಗಳನ್ನು ನೀಡುವ ಮೂಲಕ ಹೆಚ್ಚಿನ ಜನರಿಗೆ ಉಪಯುಕ್ತವಾಗಲು ನಿರ್ಧರಿಸಿದೆ. ಅಂಚೆ ಕಚೇರಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳಲ್ಲಿ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಮತ್ತು ಕೋವಿಡ್ ವ್ಯಾಕ್ಸಿನೇಷನ್ ಸ್ಲಾಟ್ ಅನ್ನು ಕಾಯ್ದಿರಿಸುವುದು ಸೇರಿವೆ.  ಪ್ಯಾನ್ ಅರ್ಜಿ, ಐಟಿಆರ್ ಫೈಲಿಂಗ್ ಮತ್ತು ಕೋವಿಡ್ ವ್ಯಾಕ್ಸಿನೇಷನ್ ಬುಕಿಂಗ್ ಕುರಿತು ಕೇಂದ್ರ ಸರ್ಕಾರ ನೀಡುವ ಹೆಚ್ಚಿನ ಸೇವೆಗಳು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿಲ್ಲದವರು ಈ ಸೌಲಭ್ಯಗಳನ್ನು ಪ್ರವೇಶಿಸಲು ಕಷ್ಟವಾಗುತ್ತದೆ. ಹೀಗಾಗಿ, ಭಾರತದ ಅಂಚೆ ತನ್ನ ಅಂಚೆ ಕಚೇರಿಗಳ ಮೂಲಕ ಈ ಸೇವೆಗಳನ್ನು ನೀಡಲು ನಿರ್ಧರಿಸಿದೆ.

ಸೇವಾ ಕೇಂದ್ರಗಳಲ್ಲಿ ಸೇವೆಗಳು ಲಭ್ಯ

ಮೇಲೆ ತಿಳಿಸಿದ ಸೇವೆಗಳ ಹೊರತಾಗಿ ಪೋಸ್ಟ್​​ ಆಫೀಸ್​​ ನಾಗರಿಕರಿಗೆ ದೇಶಾದ್ಯಂತ ತನ್ನ ವಿವಿಧ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸೌಲಭ್ಯವನ್ನು ನೀಡಿದೆ. ನಾಗರಿಕರಿಗೆ ಹಲವಾರು ತೃತೀಯ ಸೇವೆಗಳನ್ನು ಅಂಚೆ ಕಚೇರಿ ತನ್ನ ಸೇವಾ ಕೇಂದ್ರಗಳ ಮೂಲಕ ನೀಡುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ದೂರ ಪ್ರಯಾಣಿಸುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ಅಂಚೆ ಕಚೇರಿ CSC ಕೌಂಟರ್‌ನಲ್ಲಿ ನೀವು ಆದಾಯ ತೆರಿಗೆ ರಿಟರ್ನ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು ಎಂದು ಅಂಚೇ ಕಚೇರಿ ತನ್ನ ಅಧಿಕೃತ ಟ್ವೀಟರ್​​ ಖಾತೆ ಮೂಲಕ ತಿಳಿಸಿದೆ.

ಅಂಚೆ ಕಚೇರಿಯಲ್ಲಿ ಯಾವೆಲ್ಲಾ ದಾಖಲೆಗಳನ್ನು ಪಡೆಯಬಹುದು?

  • *ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್

  • *COVID-19 ಲಸಿಕೆ ನೇಮಕಾತಿ ಬುಕಿಂಗ್

  • *ಪ್ಯಾನ್ ಕಾರ್ಡ್ ಅರ್ಜಿ

  • *ಮತದಾರರ ಗುರುತಿನ ಚೀಟಿ ಅರ್ಜಿ

  • *ಪಾಸ್ಪೋರ್ಟ್ ಅರ್ಜಿ

  • *ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅರ್ಜಿ

  • *ಫಾಸ್ಟ್ಯಾಗ್ ಟಾಪ್-ಅಪ್ ಯುಟಿಲಿಟಿ ಬಿಲ್‌ಗಳ ಪಾವತಿ

  • *ಜೀವನ್ ಪ್ರಮಾಣ ಪತ್ರ


ಇದನ್ನೂ ಓದಿ: ಕರ್ನಾಟಕದ ರೈತರ ಮಕ್ಕಳು ಈಗ ಸಾವಿರಾರು ರೂ. ವಿದ್ಯಾರ್ಥಿವೇತನ ಪಡೆಯಬಹುದು : ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಸೇವೆಗಳು ದೇಶಾದ್ಯಂತ ಇರುವ ಸಾಮಾನ್ಯ ಸೇವಾ ಕೇಂದ್ರಗಳಿಂದ (CSC) ಸಾಮಾನ್ಯ ಜನರಿಗೆ ಲಭ್ಯವಿದೆ. CSC ಗಳ ಮೂಲಕ, ನಾಗರಿಕರು ಮೇಲೆ ತಿಳಿಸಿದ ಸೇವೆಗಳನ್ನು ಮತ್ತು ಅನೇಕ ಸರ್ಕಾರದ ಯೋಜನೆಗಳನ್ನು ಪಡೆಯಬಹುದು. ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಬೀದಿ ಮಾರಾಟಗಾರರ ಆತ್ಮ ನಿರ್ಭರ್ ನಿಧಿ ಯೋಜನೆ (PMSVANIDHI), ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಆಯುಷ್ಮಾನ್ ಭಾರತ) ಮತ್ತು ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮಾನ-ಧನ ಯೋಜನೆ (PM-LVM)ಯ ಸೌಲಭ್ಯವನ್ನೂ ಸಾಮಾನ್ಯ ಸೇವಾ ಕೇಂದ್ರಗಳಿಂದ ಪಡೆಯಬಹುದು.
Published by:Kavya V
First published: