ಬಿಜೆಪಿಯಲ್ಲಿ ಅನುವಂಶಿಕವಾಗಿ ಉತ್ತರಾಧಿಕಾರಿ ನೇಮಕವಾಗಲ್ಲ; ನಮಗೆ ಯಡಿಯೂರಪ್ಪ ಮಾತ್ರ ಸಿಎಂ: ಯತ್ನಾಳ್

ಸಿಎಂ ಯಡಿಯೂರಪ್ಪ ವಿರುದ್ಧ ಯಾವುದೇ ಶಾಸಕರು ಸಭೆ ಮಾಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ಸಭೆ ಸೇರಿಲ್ಲ,‌ ನಾನು ಯಾವುದರಲ್ಲೂ ಭಾಗಿಯಾಗಿಲ್ಲ. ಬಿಜೆಪಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

news18-kannada
Updated:February 25, 2020, 6:21 PM IST
ಬಿಜೆಪಿಯಲ್ಲಿ ಅನುವಂಶಿಕವಾಗಿ ಉತ್ತರಾಧಿಕಾರಿ ನೇಮಕವಾಗಲ್ಲ; ನಮಗೆ ಯಡಿಯೂರಪ್ಪ ಮಾತ್ರ ಸಿಎಂ: ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ವಿಜಯಪುರ(ಫೆ. 25): ಬಿಜೆಪಿಯಲ್ಲಿ ಉತ್ತರಾಧಿಕಾರಿ ಯಾರು ಆಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅನುವಂಶಿಕವಾಗಿ ನಮ್ಮ ಪಕ್ಷದಲ್ಲಿ ಉತ್ತರಾಧಿಕಾರಿ ನೇಮಕ‌ ಮಾಡಲ್ಲ. ನಮಗೆ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿ, ಉಳಿದವರಲ್ಲ. ಮೂರು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಈ ಮೂಲಕ ಬಿ.ವೈ. ವಿಜಯೇಂದ್ರ ಸೂಪರ್ ಸಿಎಂ ಎಂಬ ಸುದ್ದಿಯನ್ನು ಯತ್ನಾಳ್ ಅಲ್ಲಗಳೆದರು.

ಸಿಎಂ ಯಡಿಯೂರಪ್ಪ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗಲು ಯಾರೂ ಹಸ್ತಕ್ಷೇಪ ಮಾಡಬಾರದು. ಆದರೆ, ಯಡಿಯೂರಪ್ಪ ಆಡಳಿತದಲ್ಲಿ ವಿಜಯೆಂದ್ರ ಹಸ್ತಕ್ಷೇಪ ಮಾಡಬಾರದು ಎಂದು ಸಲಹೆ ನೀಡುತ್ತೇನೆ. ಸಿಎಂ ಯಡಿಯೂರಪ್ಪ ವಿರುದ್ಧ ಯಾವುದೇ ಶಾಸಕರು ಸಭೆ ಮಾಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ಸಭೆ ಸೇರಿಲ್ಲ,‌ ನಾನು ಯಾವುದರಲ್ಲೂ ಭಾಗಿಯಾಗಿಲ್ಲ. ಬಿಜೆಪಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಒಂದು ವಾರದಲ್ಲೇ 32 ಬಿಜೆಪಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಕೆಲವೇ ದಿನಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದ ಅರ್ಧಕ್ಕಿಂತ ಹೆಚ್ಚು ಶಾಸಕರು ಬಿಜೆಪಿ ಸೇರಲಿದ್ದಾರೆ. ಪಕ್ಷದ ಟಿಕೇಟ್ ಕೊಟ್ಟರೆ ಬಿಜೆಪಿಗೆ ಬರುವುದಾಗಿ ಹೇಳಿದ್ದಾರೆ. ಈ ಕುರಿತು ಈಗಾಗಲೇ ಎರಡು ಪಕ್ಷದ ಶಾಸಕರ ಜೊತೆ ಮಾತುಕತೆ ನಡೆದಿದೆ ಎಂದರು.

ಪಾಕ್ ಪ್ರಧಾನಿಯನ್ನ ಅಪ್ಪಿಕೊಂಡು ಬಂದ ಮೋದಿ ರುಂಡ ಕತ್ತರಿಸಬೇಕಾ? ಎಂದು ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಬಸ್‌ನಲ್ಲಿ ಲಾಹೋರ್ ಗೆ ಹೋಗಿ ಬಂದಿದ್ದರು. ಪಾಕಿಸ್ತಾನ ನಮ್ಮ ವೈರಿ ಎಂದು ಭಾರತ ತಿಳಿದುಕೊಂಡಿಲ್ಲ. ನಮ್ಮ ಅಕ್ರಮದಿಂದ ಹುಟ್ಟಿದ್ದು ಪಾಕ್. ಅದು ಅಕ್ರಮವಲ್ಲ. ಜವಾಹರಲಾಲ್ ನೆಹರು ಅವರ ಸ್ವಾರ್ಥದಿಂದ ಪಾಕಿಸ್ತಾನ ಹುಟ್ಟಿದೆ ಎಂದು ಯತ್ನಾಳ ಆರೋಪಿಸಿದರು.

ಇದನ್ನೂ ಓದಿ: ಸೂಪರ್ ಸಿಎಂ ಯಾರೂ ಇಲ್ಲ; ಯಡಿಯೂರಪ್ಪ ಪ್ರಶ್ನಾತೀತ ನಾಯಕ: ಸಚಿವ ವಿ ಸೋಮಣ್ಣ 

ಬಿಜೆಪಿಯವರು ಭಾರತದ ಸ್ವಾತಂತ್ರ್ಯಕ್ಕೆ ಹೋರಾಟದಲ್ಲಿ ಇರಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಹೋರಾಟ ಮಾಡಿದ್ದಾರೆ. ವಾಜಪೇಯಿಯವರು ಮಾಡಿದ್ದಾರೆ. ಆದರೆ, ಸಿದ್ದಾಂತ ಬೇರೆ ಬೇರೆ ಇದ್ದವು ಎಂದು ಅಭಿಪ್ರಾಯಪಟ್ಟರು.
First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading