HOME » NEWS » State » HERE THE STORY OF VARAMAHALAXMI WHO KILLED BJP LOCAL LEADER IN BENGALURU GNR

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಮಾಜಿ ಕಾರ್ಪೋರೇಟರ್​​ ಹೆಂಡತಿ ಈ ಕಾರಣಕ್ಕೆ ಬಿಜೆಪಿ ಮುಖಂಡನನ್ನೇ ಕೊಂದ ಕಥೆ

ಆಗ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡ ಸೋತ. ಇನ್ನು ಬಿಜೆಪಿಯಿಂದ ಭಾಗ್ಯಮ್ಮ ಎಂಬುವರು ಗೆದ್ದರು. ಎಲ್ಲೇ ಹೋದರೂ ಎಲೆ ಅಡಿಕೆ ಚೀಲದಂತೆ ಖಾರದ ಪುಡಿ ಇಟ್ಕೊಂಡು ವರಮಹಾಲಕ್ಷ್ಮಿ ಓಡಾಡುತ್ತಿದ್ದಳು.

news18-kannada
Updated:July 30, 2020, 2:58 PM IST
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಮಾಜಿ ಕಾರ್ಪೋರೇಟರ್​​ ಹೆಂಡತಿ ಈ ಕಾರಣಕ್ಕೆ ಬಿಜೆಪಿ ಮುಖಂಡನನ್ನೇ ಕೊಂದ ಕಥೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜು.30): ಕೊಲೆ ಸುಪಾರಿ ಕೇಸ್​​​ನಲ್ಲಿ ಎಸ್ಕೇಪ್ ಆಗಿರುವ ವರಮಹಾಲಕ್ಷ್ಮಿ ಎಂಬಾಕೆಯನ್ನು ಈಗ ನೋಡಿದ್ರೂ ಹೆಗ್ಗನಹಳ್ಳಿಯಲ್ಲಿ ಜನ ಒಂದು ಕ್ಷಣ ಗಾಬರಿ ಆಗುತ್ತಾರೆ. ಅಷ್ಟು ಭಯ ಹುಟ್ಟಿಸಲು ಕಾರಣ ವರಮಹಾಲಕ್ಷ್ಮಿ ಮಾಡಿಸಿರುವ ಕೊಲೆಗಳು ಮತ್ತು ಈಕೆ ಜೈಲಿಗೆ ಹೋಗಿ ಬಂದಿರುವುದು.

ನಟೋರಿಯಸ್​​ ರೌಡಿ ಶೀಟರ್​​​ಗಳ ಸಂಪರ್ಕದಲ್ಲಿರುವ ಈಕೆ ಯಾವ ನಿರ್ಧಾರಕ್ಕೂ ಸೈ ಎನ್ನುತ್ತಾಳೆ. ಅಷ್ಟಕ್ಕೂ ಈ ವರಮಹಾಲಕ್ಷ್ಮಿ ಹೆಗ್ಗನಹಳ್ಳಿಯಲ್ಲಿ ಹವಾ ಮೈಂಟೇನ್ ಮಾಡಿದ್ದೇಗೆ ಗೊತ್ತಾ?.. ಆಕೆ ರಾಜಕೀಯಕ್ಕೆ ಬರುವ ಮುಂಚೆಯೇ ಕುಣಿಗಲ್​​​ನಿಂದ ಮದುವೆಯಾಗಿ ಹೆಗ್ಗನಹಳ್ಳಿಗೆ ಬಂದಾಕೆ. ಈಕೆ ಹೇಗೆ ಕ್ರಿಮಿನಲ್ ಮೈಂಡ್ ಬಳಸಿದ್ದಳು ಎಂದು ಗೊತ್ತಾದ್ರೆ ಆಶ್ವರ್ಯವಾಗುತ್ತೆ.

ಹೌದು, ಮೂಲತಃ ಕುಣಿಗಲ್​​​ನವಳಾದ ವರಮಹಾಲಕ್ಷ್ಮಿ ಗೋವಿಂದೇಗೌಡನನ್ನ ಮದುವೆಯಾಗಿ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದಳು. ದಿನ ಕಳೆದಂತೆಯೇ ತನ್ನ ಕ್ರಿಮಿನಲ್‌ ಬುದ್ದಿಯಿಂದ ಸ್ಕ್ರಾಪ್ ಬ್ಯುಸಿನಸ್​ಗೆ ಕೈ ಹಾಕಿದಳು. ಸ್ಕ್ರಾಪ್ ಬ್ಯುಸಿನೆಸ್ ಜೊತೆ ಫ್ಯಾಕ್ಟರಿ ವೇಸ್ಟೇಜ್ ಆಯಿಲ್ ಬ್ಯುಸಿನಸ್ ನಡೆಸೋಕೆ ಪತಿ ಪತ್ನಿ ಶುರು ಮಾಡಿದರು.

ವೇಸ್ಟೇಜ್ ಆಯಿಲ್ , ಗಾರ್ಬೇಜ್ ಹಾಗೂ ಸ್ಕ್ರಾಪ್ ವ್ಯವಹಾರದಿಂದ ಸಾಕಷ್ಟು ಹಣ ಸಂಪಾದನೆ ಮಾಡಿದಳು. ಇಷ್ಟೆಲ್ಲಾ ಅವ್ಯವಹಾರಗಳು ನಡೆಸ್ತಿದ್ದರೂ ಕ್ಷೇತ್ರದಲ್ಲಿ ಸಭ್ಯಸ್ಥಳಂತೆ ವರ್ತನೆ ತೋರುತ್ತಿದ್ದಳು. ಹೀಗೆ ಹೆಗ್ಗನಹಳ್ಳಿಯಲ್ಲಿ ಬಂಗಲೆ ಕಟ್ಟಿ ಪತಿ  ಗೋವಿಂದೇಗೌಡನನ್ನ ಚುನಾವಣೆಗೆ ತಯಾರಿ ನಿಲ್ಲಿಸಿದರು.

ತನ್ನ ಪತಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಾರ್ಪೋರೇಟರ್​​ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದಳು. ಇದು ವರಮಹಾಲಕ್ಷ್ಮಿ ವ್ಯವಹಾರಕ್ಕೆ ವರದಾನವಾಗಿತ್ತು. ಈ ಗೆಲುವಿನ ಬೆನ್ನಲ್ಲೇ ಜೆಡಿಎಸ್ ಸೇರಿ ಎಂಎಲ್​​ಎ ಎಲೆಕ್ಷನ್​​​ಗೆ ನಿಂತು ಗೋವಿಂದಗೌಡರು ತಯಾರಿ ನಡೆಸಿದ್ದ.

ಮತ್ತೆ ಕಾರ್ಪೊರೇಟರ್ ಎಲೆಕ್ಷನ್​​​ನಲ್ಲಿ ತನ್ನನ್ನು ಗೆಲ್ಲಿಸುವಂತೆ ಚಿಕ್ಕತಿಮ್ಮೇಗೌಡ ಸಹಕಾರ ಕೋರಿದ್ದ. ಯಾವುದೇ ಕಾರಣಕ್ಕೂ ಆಗಲ್ಲ ಎಂದಿದ್ದ ವರಮಹಾಲಕ್ಷ್ಮಿಗೆ ಕೊಟ್ಟು ಗೋವಿಂದೇಗೌಡನ ಸ್ನೇಹವೇ ಬೇಡ ಎಂದು ಚಿಕ್ಕತಿಮ್ಮೇಗೌಡ ಬಿಜೆಪಿ ಸೇರಿದ.

ಆಗ ನಡೆದ ಚುನಾವಣೆಯಲ್ಲಿ ಗೋವಿಂದೇಗೌಡ ಸೋತ. ಇನ್ನು ಬಿಜೆಪಿಯಿಂದ ಭಾಗ್ಯಮ್ಮ ಎಂಬುವರು ಗೆದ್ದರು. ಎಲ್ಲೇ ಹೋದರೂ ಎಲೆ ಅಡಿಕೆ ಚೀಲದಂತೆ ಖಾರದ ಪುಡಿ ಇಟ್ಕೊಂಡು ವರಮಹಾಲಕ್ಷ್ಮಿ ಓಡಾಡುತ್ತಿದ್ದಳು.

ಇದನ್ನೂ ಓದಿ: ಆಗಸ್ಟ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ; ದೆಹಲಿ ನಾಯಕರ ಇಶಾರೆಗೆ ಕಾಯುತ್ತಿರುವ ಯಡಿಯೂರಪ್ಪ

ಎಲೆಕ್ಷನ್ ಪ್ರಚಾರದ ವೇಳೆ ವಿರೋಧಿಗಳ ಮೇಲೆ ಖಾರದ ಪುಡಿ ಎರಚಿ ಹೋಗಿದ್ದಳು. ಆಗಲೇ ಖಾರದ ಪುಡಿ ವರಮಹಾಲಕ್ಷ್ಮಿ ಎಂಬ ಹೆಸರು ಬಂದಿತ್ತು. ಚುನಾವಣೆಯಲ್ಲಿ ಸೋಲಲು ಚಿಕ್ಕತಿಮ್ಮೇಗೌಡನೇ ಕಾರಣ ಎಂದು ಕೊಲೆ ಮಾಡಿಸಿ ಜೈಲಿಗೆ ಹೋದಳು. ಜೈಲಿಂದ ಬಂದಮೇಲೆ ಗಂಡ ಗೋವಿಂದೇಗೌಡನನ್ನ ವಿರೋಧಿ ಗ್ಯಾಂಗ್ ಮಟಾಶ್ ಮಾಡಿತ್ತು. ಮೂರು ವರ್ಷದಿಂದ ದ್ವೇಷ ಸಾಧಿಸುತ್ತಿರೋ ವರಮಹಾಲಕ್ಷ್ಮಿ ಮತ್ತಿಬ್ಬರ ಕೊಲೆಗೆ ಸ್ಕೆಚ್ ಹಾಕಿ ನಸೀಬು ಕೆಟ್ಟು ಎಸ್ಕೇಪ್ ಆಗಿದ್ದಾಳೆ.
Published by: Ganesh Nachikethu
First published: July 30, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories