ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ‌ ಯೋಧನ ನೆನಪಿನಲ್ಲಿ ಜೀವನ ಸವೆಸುತ್ತಿರುವ ತ್ಯಾಗಮಯಿ

ಆಗಿನ್ನೂ ಅವರಿಗೆ 25 ವರ್ಷ. ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಪಾಕಿಸ್ತಾನ ಭಾರತದ ಮಧ್ಯೆ ನಡೆದಾಗ 25 ವರ್ಷದ ಬಸವರಾಜ ಆಗಲೇ ಮದ್ರಾಸ್ ರೆಜೆಮೆಂಟ್​ನಲ್ಲಿ ಸಿಪಾಯಿಯಾಗಿ ಸೇರಿ 3 ವರ್ಷವಾಗಿತ್ತು. ಯುದ್ದದ ಮುನ್ನ ರಾಯಚೂರಿಗೆ ರಜೆಯ ಮೇಲೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಅಕ್ಕನ ಮಗಳಾದ ಮಲ್ಲಮ್ಮನನ್ನು ಮದುವೆಯಾಗಿದ್ದರು .

ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ‌ ಯೋಧನ ನೆನಪಿನಲ್ಲಿ ಜೀವನ ಸವೆಸುತ್ತಿರುವ ತ್ಯಾಗಮಯಿ

ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ‌ ಯೋಧನ ನೆನಪಿನಲ್ಲಿ ಜೀವನ ಸವೆಸುತ್ತಿರುವ ತ್ಯಾಗಮಯಿ

  • Share this:
ರಾಯಚೂರು(ಜೂ.19): ಈಗ ಚೀನಾ ಭಾರತದ ಮಧ್ಯೆ ಯುದ್ದದ ಕಾರ್ಮೋಡ ಆವರಿಸಿದೆ. ಒಂದು ಯುದ್ದ ದೇಶದ ನೆಮ್ಮದಿ ಮಾತ್ರ ಹಾಳು ಮಾಡದೆ ಯೋಧರ ಕುಟುಂಬದವರ ನೆಮ್ಮದಿ ಹಾಳು ಮಾಡುತ್ತಿದೆ. ಇದಕ್ಕೆ ಉದಾಹರಣೆ ರಾಯಚೂರಿನ ಹುತಾತ್ಮ ಯೋಧ ಬಸವರಾಜಪ್ಪನ ಕುಟುಂಬ.

50 ವರ್ಷಗಳ ಹಿಂದೆ ಪತಿ ಯುದ್ದದಲ್ಲಿ ಹುತಾತ್ಮರಾದರೂ ಅಂದಿನಿಂದವರೆಗೂ ಅವರ ನೆನಪಲ್ಲಿಯೇ ಬದುಕು ಸವೆಸುತ್ತಿದ್ದಾರೆ ಹುತಾತ್ಮನ ಪತ್ನಿ. ಭಾರತ ಹಾಗು ಪಾಕಿಸ್ತಾನದ ಮಧ್ಯೆ ಆಗಾಗ ಗಡಿಯಲ್ಲಿ ಘರ್ಷಣೆ ನಡೆದಿವೆ. ಅದರಂತೆ 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಮಧ್ಯೆ ನಡೆದ 18 ದಿನಗಳ ಯುದ್ದ ನಡೆಯಿತು. ಈ ಸಂದರ್ಭದಲ್ಲಿ ರಾಯಚೂರಿನ ಬಸವರಾಜಪ್ಪ 1971 ಡಿಸೆಂಬರ್ 15 ರಂದು ಪಾಕಿಸ್ತಾನದ ಬಾಂಬ್ ದಾಳಿಗೆ ತುತ್ತಾಗಿ ಹುತಾತ್ಮರಾದರು.

ಆಗಿನ್ನೂ ಅವರಿಗೆ  25  ವರ್ಷ. ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಪಾಕಿಸ್ತಾನ ಭಾರತದ ಮಧ್ಯೆ ನಡೆದಾಗ 25 ವರ್ಷದ ಬಸವರಾಜ ಆಗಲೇ ಮದ್ರಾಸ್ ರೆಜೆಮೆಂಟ್​ನಲ್ಲಿ ಸಿಪಾಯಿಯಾಗಿ ಸೇರಿ 3 ವರ್ಷವಾಗಿತ್ತು. ಯುದ್ದದ ಮುನ್ನ ರಾಯಚೂರಿಗೆ ರಜೆಯ ಮೇಲೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಅಕ್ಕನ ಮಗಳಾದ ಮಲ್ಲಮ್ಮನನ್ನು ಮದುವೆಯಾಗಿದ್ದರು .

ಮದುವೆಯಗಿ ಒಂದು ತಿಂಗಳಾಗಿರಲಿಲ್ಲ, ಸೇನೆಯಿಂದ ಟೆಲಿಗ್ರಾಂ ಬಂತು. ಬೇಗ ನೌಕರಿಗೆ ಹಾಜರಾಗಿ ತಕ್ಷಣ ಹೊರಟ ಅವರು ಮರಳಿ ಬರಲಿಲ್ಲ. ಕೇವಲ ಒಂದು ತಿಂಗಳು ದಾಂಪತ್ಯ ಸುಖ ಅನುಭವಿಸಿದ ಮಲ್ಲಮ್ಮನಿಗೆ ಆಗ 18 ವರ್ಷ. ಯುದ್ದದಲ್ಲಿ ಬಸವರಾಜಪ್ಪ ಮಡಿದಿದ್ದಾರೆ ಎಂದು ಟೆಲಿಗ್ರಾಂ ಬಂತು.

ಇದನ್ನೂ ಓದಿ: ಕೊರೋನಾ ನಡುವೆಯೇ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಆದೇಶ; ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ದ ದೂರು ದಾಖಲು

ನಂತರ ಆತನ ಉಡುಪು ಸೇನಾ ಮೆಡಲ್​​ಗಳನ್ನು ಮನೆಗೆ ಕಳುಹಿಸಿ ಸರಕಾರ ಅಂದಿನಿಂದ ಇಲ್ಲಿವರೆಗೂ ಹುತಾತ್ಮ ಪತ್ನಿಗೆ ಪೆನ್ಸೆನ್ ನೀಡಿದೆ. ಈಗ ಚೀನಾ ಹಾಗು ಭಾರತದ ಮಧ್ಯೆ ಯುದ್ದ ನಡೆಯುತ್ತಿರುವ ದೃಶ್ಯಗಳನ್ನು ನೋಡಿದ ಮಲ್ಲಮ್ಮ ಹಾಗು ಅವರ ಕುಟುಂಬ ಯುದ್ದ ಕಹಿ ನೆನಪುಗಳು ಬಂದು ಕಣ್ಣೀರು ಹಾಕುತ್ತಿದ್ದಾರೆ.

ಈ ಯುದ್ದ ಬೇಡ  ಇದರಿಂದ ಯಾರಿಗೆ ಲಾಭ ಎಂದು ಹೇಳುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ದೇಶಕ್ಕಾಗಿ ಮಡಿದರು ಎಂಬ ಹೆಮ್ಮೆ ಇದೆ. ಆದರೆ ಮಲ್ಲಮ್ಮನ ಇಡೀ ಜೀವನ ಹುತಾತ್ಮ ಪತಿಯ ನೆನಪಲ್ಲಿಯೇ ಕಳೆಯುವಂತಾಗಿತ್ತು. ಯುದ್ದಗಳಾಗುವದನ್ನು ನೋಡಿದಾಗ ನನ್ನಂತೆ ಇತರ ಹೆಣ್ಮಕ್ಕಳಿಗೂ ಆಗದಿರಲಿ ಎಂದು ಪ್ರಾರ್ಥಿಸುತ್ತಾರೆ.
First published: