BS Yeddyurappa Cabinet: ಇಲ್ಲಿದೆ ನೂತನ ಸಚಿವರ ಪ್ರತಿಕ್ರಿಯೆ!

ಜಾತಿ, ಪ್ರದೇಶವಾರು ಮತ್ತು ಪಕ್ಷದ ನಿಷ್ಠಾವಂತರನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್​ ಈಗಾಗಲೇ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮಗೊಳಿಸಿದೆ.

Ganesh Nachikethu | news18
Updated:August 20, 2019, 11:04 AM IST
BS Yeddyurappa Cabinet: ಇಲ್ಲಿದೆ ನೂತನ ಸಚಿವರ ಪ್ರತಿಕ್ರಿಯೆ!
ಬಿಜೆಪಿ ಶಾಸಕರು
  • News18
  • Last Updated: August 20, 2019, 11:04 AM IST
  • Share this:
ಬೆಂಗಳೂರು(ಆಗಸ್ಟ್​​​.20): ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಾಲ್ಕು ವಾರಗಳ ಬಳಿಕ ಸಚಿವ ಸಂಪುಟ ರಚನೆಗೆ ಕಾಲ ಕೂಡಿ ಬಂದಿದೆ. ಕಳೆದ ವಾರ ಆಗಸ್ಟ್​​​ 15ನೇ ತಾರೀಕು ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್​ ಅಮಿತ್ ಶಾರನ್ನು ಭೇಟಿಯಾಗಿದ್ದರು. ಈ ವೇಳೆ ಸಚಿವ ಸಂಪುಟ ರಚನೆಗೆ ಅಂತಿಮ ಒಪ್ಪಿಗೆ ಸಿಕ್ಕಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಇಂದು 17 ಮಂತ್ರಿಗಳೊಂದಿಗೆ ನೂತನ ಸಚಿವ ಸಂಪುಟ ರಚನೆಯಾಗಿದೆ.

ಜಾತಿ, ಪ್ರದೇಶವಾರು ಮತ್ತು ಪಕ್ಷದ ನಿಷ್ಠಾವಂತರನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್​ ಈಗಾಗಲೇ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮಗೊಳಿಸಿದೆ. ಬಿ.ಎಸ್​​ ಯಡಿಯೂರಪ್ಪನವರ ನೇತೃತ್ವದಲ್ಲಿ ಈ 17 ಶಾಸಕರು ಸಂಪುಟ ಸೇರ್ಪಡೆಯಾಗಿದ್ದಾರೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ ಸರ್ಕಾರದ ನೂತನ ಸಚಿವರ ಪಟ್ಟಿಯನ್ನು ಕೊನೆಗೂ ಅಳೆದು ತೂಗಿ ಬಿಜೆಪಿ ರಾಷ್ಟ ಅಧ್ಯಕ್ಷ, ಗೃಹ ಮಂತ್ರಿ ಅಮಿ‌ತ್ ಶಾ ಅವರು ತಡರಾತ್ರಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ವಿ.ಸೋಮಣ್ಣ, ಡಾ. ಅಶ್ವಥ್ ನಾರಾಯಣ್, ಬಿ.ಶ್ರೀರಾಮಲು, ಗೋವಿಂದ್ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಪಿ. ರಾಮ್ ದಾಸ್, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ದತ್ತಾತ್ರೇಯ ಪಾಟೀಲ್, ಪ್ರಭು ಚೌಹಾಣ್, ಹೆಚ್ ನಾಗೇಶ್ ಅವರಿಗೆ ಸ್ಥಾನ ನೀಡಲಾಗಿದೆ. ಸದ್ಯ ಸಂಪುಟ ಸೇರಿರುವ ನೂತನ ಸಚಿವರು ನ್ಯೂಸ್​​-18 ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Karnataka Cabinet Expansion: ಶೆಟ್ಟರ್, ಈಶ್ವರಪ್ಪ, ಅಶೋಕ್, ಸುರೇಶ್ ಕುಮಾರ್, ಶ್ರೀರಾಮುಲು ಸೇರಿ 17 ಸಚಿವರ ಪ್ರಮಾಣ

ಇಲ್ಲಿದೆ ಸಂಪುಟ ಸೇರಲಿರುವ ಶಾಸಕರ ಪ್ರತಿಕ್ರಿಯೆ 

ಪಕ್ಷ ಸಚಿವ ಸ್ಥಾನ ನೀಡಿ ಹೆಚ್ಚಿನ ಜವಾಬ್ದಾರಿ ನೀಡಿದೆ. ಇದರಿಂದ ನನಗೆ ಸಂತೋಷ ಆಗಿದೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸ್ತೇವೆ. ಪಕ್ಷ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ತೇವೆ. ಹೈಕಮಾಂಡ್​​ ಮತ್ತು ಯಡಿಯೂರಪ್ಪಗೆ ಧನ್ಯವಾದಗಳು ತಿಳಿಸುತ್ತೇನೆ.

ಕೋಟ ಶ್ರೀನಿವಾಸ ಪೂಜಾರಿ
ನಾನು ಪಕ್ಷದ ನಿಷ್ಠ ಕಾರ್ಯಕರ್ತ. ನಾನು ಈ ಹಿಂದೆಯೂ ಸಚಿವನಾಗಿದ್ದೆ. ನನಗೇನು ಇದು ಹೊಸದಲ್ಲ, ಆದರೆ ಖುಷಿ ಇದೆ. ಪಕ್ಷ ಸಂಘಟನೆ ಹಾಗೂ ಜನರಪರ ಆಡಳಿತ ಕೊಡ್ತೇವೆ.

ಕೆ.ಎಸ್​ ಈಶ್ವರಪ್ಪ


ನನ್ನ ಮೇಲೆ ನಂಬಿಕೆ ಇಟ್ಟ ಹೈಕಮಾಂಮ್​​ಗೆ ಧನ್ಯವಾದಗಳು. ಪಕ್ಷಕ್ಕಾಗಿ, ಜನರ ಸೇವೆಗಾಗಿ ಶ್ರಮ ವಹಿಸುತ್ತೇನೆ. ನಮಗೆ ಏನ್ ಕೆಲಸ ಕೊಟ್ರು ನಿಭಾಯಿಸ್ತೀನಿ. ಇಂಥದ್ದೇ ಖಾತೆಗೆ ಡಿಮ್ಯಾಂಡ್ ಇಲ್ಲ.

ವಿ. ಸೋಮಣ್ಣ


ನನಗೆ ತುಂಬ ಸಂತೋಷವಾಗ್ತಿದೆ. ಮಲ್ಲೇಶ್ವರಂ ಜನರ ಮತ್ತು ಕಾರ್ಯಕರ್ತರ ಕನಸು ಇದಾಗಿತ್ತು. ಜನರ ಸೇವೆಗಾಗಿ ಹೈಕಮಾಂಡ್​ ಮಾಡಿ ಕೊಟ್ಟ ಅವಕಾಶ. ರೈತ ನಾಯಕ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಹೇಳಬೇಕು. ನಾನು ನಿಷ್ಠಾವಂತ ಕಾರ್ಯಕರ್ತ. ಇವತ್ತು ಮಂತ್ರಿ ಸ್ಥಾನ ದೊರಕಿರುವುದು ನನ್ನ ಭಾಗ್ಯ.

ಅಶ್ವಥ್ ನಾರಾಯಣ್


ಸಚಿವ ಸ್ಥಾನ ಸಿಕ್ಕಿರೋದು‌ ಖುಷಿ‌ಯಾಗಿದೆ. ಸಿಎಂ ಆಗಿದ್ದ ನನಗೆ ಮತ್ತೀಗ, ಸಚಿವ ಸ್ಥಾನ ಸಿಕ್ಕಿರುವುದು ಖುಷಿ ಇದೆ.

ಜಗದೀಶ್ ಶೆಟ್ಟರ್


ಗ್ರಾಮೀಣ ಜನತೆಗೆ ಸ್ಪಂದಿಸುವ ಕಂದಾಯ ಇಲಾಖೆ ಜವಾಬ್ದಾರಿ ಕೊಟ್ಟರೆ ಉತ್ತಮ. ಸಾಕಷ್ಟು ಸವಾಲುಗಳು ಸರ್ಕಾರದ ಮುಂದಿದೆ. ಇದನ್ನು ಪ್ರಾಮಾಣಿಕವಾಗಿ ಎದುರಿಸುತ್ತೇವೆ. ರಾಜಧಾನಿಯಿಂದ ಗ್ರಾಮದವರೆಗೂ ಉತ್ತಮ ಕೆಲಸ ಮಾಡುತ್ತೇವೆ.

ಮಾಧುಸ್ವಾಮಿ


ನನಗೆ ಇದರಿಂದ ಸಂತೋಷ ಆಗಿದೆ. ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರವಾಹ ಆಗಿದೆ, ಕೆಲವೆಡೆ ಬರ ಪರಿಸ್ಥಿತಿ ಇದೆ. ಎಲ್ಲವನ್ನೂ ನಿಭಾಯಿಸುತ್ತೇವೆ. ನಾನು ಯಾವ ಖಾತೆಯ ಆಕಾಂಕ್ಷಿಯು ಅಲ್ಲ. ಯಾವುದೇ ಖಾತೆ ನೀಡಿದರು ಕೆಲಸ ಮಾಡುತ್ತೇನೆ.

ಆರ್​​. ಅಶೋಕ್​​


ಈ ಹಿಂದೆ ಪಕ್ಷದ ‌ನಾಯಕರು ನನ್ನ ಮಂತ್ರಿ ಮಾಡಿದ್ರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡಿದ್ದೆ.  ಬಹುಶಃ ಕನ್ನಡ ತಾಯಿ ಮೆಚ್ಚಿ ನನಗೆ ಸಚಿವ ಸ್ಥಾನ ನೀಡಿದ್ದಾಳೆ ಎಂದು ಭಾವಿಸಿದ್ದೇನೆ. ರಾಷ್ಟ್ರೀಯ ‌ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ‌ಮೋದಿ, ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಡಿನ ಅಭಿವೃದ್ಧಿಗಾಗಿ ದುಡಿಯೋಕೆ ಬದ್ದರಾಗಿದ್ದೇವೆ.

ಗೋವಿಂದ ಕಾರಜೋಳ


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

------------------
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading