ಡ್ರಗ್ಸ್​ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾದ ರಾಗಿಣಿಗೆ ನಿದ್ದೆಯೂ ಬರ್ತಿಲ್ಲ; ಜೈಲೂಟವೂ ಸೇರ್ತಿಲ್ಲ

ಸದ್ಯ ಜೈಲಿನಲ್ಲಿರೋ ರಾಗಿಣಿಗೆ ಜೈಲಿನ ಊಟ ಸೇರ್ತಿಲ್ಲ. ಮತ್ತೊಂದು ಕಡೆ‌ ನಿದ್ರೆನೂ ಮಾಡ್ಡೆ ಇಡೀ ರಾತ್ರಿ ಕಳೆಯಲು ನಟಿ ಇಂಗ್ಲೀಷ್ ಕಾದಂಬರಿಯ ಮೊರೆ ಹೋಗ್ತಿದ್ದಾಳೆ. ಇದರ ನಡುವೆ ನಾಳೆ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯಿದ್ದು ರಾಗಿಣಿಗೆ ಜೈಲಾ / ಬೇಲಾ ಅನ್ನೊದನ್ನ ಕಾದುನೋಡಬೇಕಾಗಿದೆ.

news18-kannada
Updated:September 15, 2020, 7:47 PM IST
ಡ್ರಗ್ಸ್​ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾದ ರಾಗಿಣಿಗೆ ನಿದ್ದೆಯೂ ಬರ್ತಿಲ್ಲ; ಜೈಲೂಟವೂ ಸೇರ್ತಿಲ್ಲ
ನಟಿ ರಾಗಿಣಿ.
  • Share this:
ಬೆಂಗಳೂರು(ಸೆ.15): ಸ್ಯಾಂಡಲ್​​ವುಡ್ ಇತಿಹಾಸದಲ್ಲಿಯೇ ಖ್ಯಾತ ನಟಿಮಣಿಯೊಬ್ಬರು ಜೈಲು ಸೇರಿದ ಉದಾಹರಣೆ ಇಲ್ಲ. ಅದ್ರೆ ಅಂತಹದೊಂದು ಅಪಖ್ಯಾತಿಗೆ ನಟಿ ರಾಗಿಣಿ ಒಳಗಾಗಿದ್ದಾಳೆ. ಹೈ ಫೈ ಲೈಪ್ ಲೀಡ್ ಮಾಡ್ತಿದ್ದ ರಾಗಿಣಿ ಮೊದಲ ದಿನದ ಜೈಲು ದಿನಚರಿ ಹೇಗಿತ್ತು ಅನ್ನೊದನ್ನ ತೋರಿಸ್ತಿವಿ ನೋಡಿ. ಹೈ ಫೈ ಲೈಪ್ ಲೀಡ್ ಮಾಡ್ತಾ ಬಿಂದಾಸ್ ಆಗಿ ಮಿಂಚ್ತಿದ್ದ ನಟಿ ರಾಗಿಣಿ ಈಗಾಗಲೇ ಜೈಲು ಪಾಲಾಗಿದ್ದಾಳೆ. ಏಸಿ ರೂಮಲ್ಲಿ ಮಲಗಿ, ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಫಾಸ್ಟ್ ಫುಡ್ ತಿನ್ನುತ್ತಿದ್ದ ತುಪ್ಪದ ಬೆಡಗಿ ರಾಗಿಣಿಗೆ ಜೈಲಲ್ಲಿ ಊಟನೂ ಸೇರ್ತಿಲ್ಲ. ನಿದ್ದೆನೂ ಬರ್ತಿಲ್ಲ. ಬರೋಬ್ಬರಿ 11 ದಿನಗಳ ಸಿಸಿಬಿ ಕಸ್ಟಡಿ ಬಳಿಕ ನಿನ್ನೆ ಸಂಜೆ 7:20 ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಅಧಿಕಾರಿಗಳು ರಾಗಿಣಿ ಅಂಡ್ ಟೀಮ್ ಅನ್ನು ಬಿಟ್ಟು ಹೋಗಿದ್ದರು. ಹೊರಗಿನಿಂದ ಪಾರ್ಸಲ್ ತಂದಿದ್ದ ಹೊಟೇಲ್ ತಿಂದಿದ್ದ ರಾಗಿಣಿ ಅಂಡ್ ಟೀಮ್ ಅನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಮಹಿಳಾ ಬ್ಯಾರಕ್​​ನ ನೆಲ ಮಹಡಿಯಲ್ಲಿ ರಾಗಿಣಿಯನ್ನು ಪುರುಷರ ಬ್ಯಾರಕ್ನ ಕೊಠಡಿಯಲ್ಲಿ ಇತರ ನಾಲ್ವರು ಆರೋಪಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಬೇಲ್ ನಿರೀಕ್ಷೆಯಲ್ಲಿದ್ದ ರಾಗಿಣಿಗೆ ಜೈಲು ವಾಸ ಶಾಕ್ ಆಗಿರಬಹುದು. ಹಾಗಾಗಿ ತಡರಾತ್ರಿವರೆಗೂ ನಿದ್ರಿಸದ ರಾಗಿಣಿ ಬೇಸರದಲ್ಲಿದ್ದರು ಎನ್ನಲಾಗಿದೆ.

ತಡವಾಗಿ ನಿದ್ರೆಗೆ ಜಾರಿದ್ರೂ ಇಂದು ಬೆಳಗ್ಗೆ 7 ಗಂಟೆಗೆ ಎಚ್ಚರಗೊಂಡು ನಿತ್ಯ ಕರ್ಮ ಮುಗಿಸಿದ ರಾಗಿಣಿಗೆ ಜೈಲಿನ ಮೆನುವಿನ ಪ್ರಕಾರ ಚಿತ್ರಾನ್ನ ನೀಡಲಾಗಿತ್ತು. ಆದ್ರೆ ಹಸಿವಿಲ್ಲ ಎಂದು ಬೇಡ ಎಂದಿದ್ದ ರಾಗಿಣಿ ಬಳಿಕ ಸ್ವಲ್ಪ ಚಿತ್ರಾನ್ನ ರುಚಿ ನೋಡಿ ಸುಮ್ಮನಾಗಿದ್ದಳು. ಮಧ್ಯಾಹ್ನ ಅನ್ನ ಸಾಂಬಾರ್, ಚಪಾತಿ ದಾಲ್ ಸಹ ಅಷ್ಟಾಗಿ ರಾಗಿಣಿಗೆ ರುಚಿಸಿರಲಿಲ್ಲ.
ಒಂದು ಕಡೆ ಒಂಟಿತನ ಮತ್ತೊಂದು ಕಡೆ ಪೋಷಕರು ಬಾರದೆ ಇದ್ದುದ್ದರಿಂದ ಚಿಂತೆಗಿಡಾಗಿದ್ದ ರಾಗಿಣಿಗೆ ಯಾಕೋ ಗ್ರಹಚಾರ ಸರಿಯಿಲ್ಲ ಅಂತಾ ಕಾಣುತ್ತೆ.

4:30 ಸುಮಾರಿಗೆ ಕೊನೆ ಗಳಿಗೆಯಲ್ಲಿ ರಾಗಿಣಿಯನ್ನು ಭೇಟಿ ಮಾಡಲು ಜೈಲು ಬಳಿ ವಕೀಲ ಕಲ್ಯಾಣ್ರೊಂದಿಗೆ ಆಗಮಿಸಿದ ರಾಗಿಣಿ ತಾಯಿ ರೋಹಿಣಿ, ತಂದೆ ರಾಕೇಶ್ ಮತ್ತು ತಮ್ಮ ರುದ್ರಾಕ್ಷ್ ನನ್ನು ಜೈಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಹಾಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಪೋಷಕರು ವಾಪಸ್ಸಾಗಿದ್ದಾರೆ.‌

ಅತ್ತ ರಾಗಿಣಿಯು ಸಹ ನಿರಾಸೆ ಅನುಭವಿಸಿದ್ದಾರೆ. ಇದ್ದಕ್ಕೂ ಮೊದಲು ಮಾಧ್ಯಮದವರ ಮೇಲೆ ಗರಂ ಆದ ರಾಗಿಣಿ ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಅದನ್ನ ಸಾಬೀತುಪಡಿಸಲಾಗುವುದು. ಮಾಧ್ಯಮದವರು ರಾಗಿಣಿ ವಿಚಾರದಲ್ಲಿ ತಮಾಷೆ ಮಾಡಬೇಡಿ. ಅಕ್ರಮ ಡ್ರಗ್ಸ್ ಪ್ರಕರಣದಲ್ಲಿ ಹಲವರ ಹೆಸರು ಇದೆ. ಆದ್ರೆ ರಾಗಿಣಿ ಹೆಸರನ್ನೇ ಯಾಕೆ ಹೆಚ್ಚು ಪ್ರಚಾರ ಮಾಡುತ್ತಿದ್ದೀರಾ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ ರೋಹಿಣಿ ನನ್ನ ಮಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿದ್ದಾಳೆ ಎಂದರು.

ನಾವು ಇಡಿ, ಐಟಿ, ಪೊಲೀಸ್ ಯಾವುದಕ್ಕೂ ಭಯಪಡುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಜೊತೆ ನಮ್ಮ ಮಗಳ ಸಂಬಂಧವಿಲ್ಲ. ಕಳೆದ ಐದಾರೂ ತಿಂಗಳಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದಾಳೆ. ಆದ್ರೆ ಇಂದು ನಮಗೆ ಕೆಲವರು ಮೋಸ ಮಾಡಿದ್ದಾರೆ. ಕನ್ನಡ ಇಂಡಸ್ಟ್ರಿ ಮತ್ತು ಕನ್ನಡಿಗರಿಗೆ ಎಷ್ಟೆಲ್ಲಾ ಸೇವೆ ಮಾಡಿಲ್ಲ. ರಾಗಿಣಿ ನಿಮ್ಮ ಮನೆ ಮಗಳು ಇದ್ದ ಹಾಗೆ. ಆಕೆ ಬಳಿ ಹಲವಾರು ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಮಗಳಿಗಾಗಿ ಮನೆ ಮಾರಾಟ ಮಾಡುತ್ತೆವೆ. ಪ್ರಕರಣದಿಂದ ರಾಗಿಣಿ ಹೊರ ಬಂದ ಮೇಲೆ ಎಲ್ಲವನ್ನೂ ತಿಳಿಸುತ್ತೆವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Aindrita Ray: ಡ್ರಗ್ಸ್‌ ಕೇಸ್‌ನಲ್ಲಿ ಸ್ಟಾರ್‌ ಜೋಡಿ; ಟುಮಾರೋಲ್ಯಾಂಡ್ ಪಾರ್ಟಿಯೇ ಮುಳುವಾಯ್ತಾ ಐಂದ್ರಿತಾ ರೇಗೆ?

ಸದ್ಯ ಜೈಲಿನಲ್ಲಿರೋ ರಾಗಿಣಿಗೆ ಜೈಲಿನ ಊಟ ಸೇರ್ತಿಲ್ಲ. ಮತ್ತೊಂದು ಕಡೆ‌  ನಿದ್ರೆನೂ ಮಾಡ್ಡೆ ಇಡೀ ರಾತ್ರಿ ಕಳೆಯಲು ನಟಿ ಇಂಗ್ಲೀಷ್ ಕಾದಂಬರಿಯ ಮೊರೆ ಹೋಗ್ತಿದ್ದಾಳೆ. ಇದರ ನಡುವೆ ನಾಳೆ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯಿದ್ದು ರಾಗಿಣಿಗೆ ಜೈಲಾ / ಬೇಲಾ ಅನ್ನೊದನ್ನ ಕಾದುನೋಡಬೇಕಾಗಿದೆ.
Published by: Ganesh Nachikethu
First published: September 15, 2020, 7:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading