ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ ಪ್ರಕರಣ - ಪೊಲೀಸ್ ಎಫ್ಐಆರ್ನಲ್ಲಿ ಏನಿದೆ?
ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯಶಂಕರ್ ಪತ್ತೆಯಾಗಿದ್ದರು. ಪ್ಯಾನ್ ಪಕ್ಕದ ಉಕ್ಕಿಗೆ ನೇಣು ಬಿಗಿದುಕೊಂಡು ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಕುಟುಂಬ ನೀಡಿದ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಾಗಿದೆ.
news18-kannada Updated:June 24, 2020, 9:01 AM IST

ವಿಜಯಶಂಕರ್
- News18 Kannada
- Last Updated: June 24, 2020, 9:01 AM IST
ಬೆಂಗಳೂರು(ಜೂ.24): ಕಳೆದ ವರ್ಷ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ನಿನ್ನೆ ಸಂಜೆ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಇದರ ಹಿಂದೆ ಮತ್ತೇನಾದರೂ ಕಾರಣವಿದೆಯೋ ಎಂದು ಈಗಾಗಲೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರ ಪ್ರಥಾಮಿಕ ತನಿಖೆಯಲ್ಲಿ ಬಂಧನ ಭೀತಿ ಅಥವಾ ಕುಟುಂಬದವರಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು, ತನ್ನ ತಂದೆ ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಮಗಳು ಇಂಚನಾ ಪೊಲೀಸ್ ಠಾಣೆಗೆ ದೂರು ನೀಡಿದ್ಧಾಳೆ. ಪೊಲೀಸರು ಈ ದೂರಿನ ಆಧಾರದ ಮೇರೆಗೆ ಎಫ್ಐಆರ್ ಕೂಡ ದಾಖಲಿಸಿಕೊಂಡಿದ್ಧಾರೆ. ಇವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು. ಈಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಂಚನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನು ಉಲ್ಲೇಖ ಮಾಡಿದರೂ ಎಂಬ ಅಂಶಗಳು ನ್ಯೂಸ್-18 ಕನ್ನಡಕ್ಕೆ ಲಭ್ಯವಾಗಿವೆ. ಈ ಘಟನೆ ಆದಾಗ ಮನೆಯಲ್ಲಿ ವಿಜಯಶಂಕರ್ ಹಾಗೂ ಪತ್ನಿ ಮಾತ್ರ ಇದ್ದರು. ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಂಜೆ 5 ಗಂಟೆಯವರೆಗೂ ಹೆಂಡತಿ ಜೊತೆ ಮಾತನಾಡಿಕೊಂಡಿದ್ದ ವಿಜಯಶಂಕರ್ ಬಳಿಕ ಹೊರಗಡೆ ಹೋಗುವುದಾಗಿ ಹೇಳಿದ್ದರು. ಸಂಜೆ 5 ಗಂಟೆ ಮೇಲೆ ಹೊರಗಡೆ ಕೆಲಸದ ಮೇಲೆ ಹೋಗುವುದಾಗಿ ಹೇಳಿದ್ದ ವಿಜಯಶಂಕರ್ ಮನೆಯ ಮೇಲಿನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು.
ಇದನ್ನೂ ಓದಿ: IAS Vijay Shankar Suicide: ಐಎಂಎಯಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣು
ಇನ್ನು, ಹೆಂಡತಿ ಹೊರಗಡೆ ಹೋದರೂ ಎಂದು ಭಾವಿಸಿದ್ದ ವಿಜಯಶಂಕರ್ ಸಂಜೆ 7 ಗಂಟೆಗೆ ತನ್ನ ಪತ್ನಿಗೆ ಕರೆ ಮಾಡಿದ್ದಾರೆ. ಪತ್ನಿ ಫೋನ್ ತೆಗೆಯದ ಕಾರಣ ತನ್ನ ಮಕ್ಕಳಿಗೆ ಕರೆ ಮಾಡಲಾಗಿದೆ. ಇದಾದ ನಂತರ 7.20ರ ವೇಳೆಗೆ ಇಬ್ಬರು ಮಕ್ಕಳು ಮನೆಗೆ ಬರುತ್ತಾರೆ. ಆಗ ಮೇಲಿನ ಕೊಠಡಿ ಬಳಿ ಹೋಗಿ ನೋಡಿದಾಗ ಲಾಕ್ ಆಗಿರುತ್ತೆ. ಆಗ ವಿಜಯಶಂಕರ್ ಹೆಂಡತಿ ಮಕ್ಕಳು ಕೂಗಾಡಿದ್ದಾರೆ. ಹೆಂಡತಿ, ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬರು ಬಾಗಿಲನ್ನು ಹೊಡೆದಿದ್ದಾರೆ.
ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯಶಂಕರ್ ಪತ್ತೆಯಾಗಿದ್ದರು. ಪ್ಯಾನ್ ಪಕ್ಕದ ಉಕ್ಕಿಗೆ ನೇಣು ಬಿಗಿದುಕೊಂಡು ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಕುಟುಂಬ ನೀಡಿದ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಇನ್ನು, ತನ್ನ ತಂದೆ ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಮಗಳು ಇಂಚನಾ ಪೊಲೀಸ್ ಠಾಣೆಗೆ ದೂರು ನೀಡಿದ್ಧಾಳೆ. ಪೊಲೀಸರು ಈ ದೂರಿನ ಆಧಾರದ ಮೇರೆಗೆ ಎಫ್ಐಆರ್ ಕೂಡ ದಾಖಲಿಸಿಕೊಂಡಿದ್ಧಾರೆ. ಇವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು. ಈಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.