HOME » NEWS » State » HERE THE DETAILS OF ARUDRA WHO ALLEGEDLY DETAINED FOR PRO PAK SLOGAN GNR

‘ಪಾಕ್​​​​​​ ಪರ ಘೋಷಣೆ‘ ಕೂಗಿದ ಆರೋಪ ಹೊತ್ತ ಮತ್ತೋರ್ವ ಯುವತಿ ಯಾರು? ಆಕೆ ಹಿನ್ನೆಲೆಯೇನು?

ಸದ್ಯ ಪೊಲೀಸರು ಅರುದ್ರಾಳನ್ನು ವಶಕ್ಕೆ ಪಡೆದುಕೊಂಡು ಎಸ್‌ಜೆ ಪಾರ್ಕ್ ಠಾಣೆಗೆ ಕರೆದೊಯ್ದಿದ್ದಾರೆ. ಅರುದ್ರಾಳನ್ನು ಬಿಡಿಸಿಕೊಂಡು ಹೋಗಲು ಮೂವರು ಸ್ನೇಹಿತರು ಆಗಮಿಸಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಅರುದ್ರಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

news18-kannada
Updated:February 21, 2020, 4:46 PM IST
‘ಪಾಕ್​​​​​​ ಪರ ಘೋಷಣೆ‘ ಕೂಗಿದ ಆರೋಪ ಹೊತ್ತ ಮತ್ತೋರ್ವ ಯುವತಿ ಯಾರು? ಆಕೆ ಹಿನ್ನೆಲೆಯೇನು?
ಘೋಷಣೆ ಕೂಗಿದರು ಎನ್ನಲಾದ ಮಹಿಳೆ
  • Share this:
ಬೆಂಗಳೂರು(ಫೆ.21): ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ ಅಮೂಲ್ಯ ಲಿಯೋನಾ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇಂದು ನಗರದ ಟೌನ್ ಹಾಲ್ ಬಳಿ ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲೀಗ ಮತ್ತೋರ್ವ ಯುವತಿ ಪಾಕಿಸ್ತಾನ ಜಿಂದಾಬಾದ್​ ಎಂಬ ಘೋಷಣೆ ಕೂಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಯುವತಿಯನ್ನು ಅರುದ್ರಾ ಎಂದು ಗುರುತಿಸಲಾಗಿದೆ.

ಸಿಎಎ ವಿರೋಧಿಸಿ ಪ್ರತಿಭಟನೆ ವೇಳೆ ಫ್ರೀಡಂ ಪಾರ್ಕ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಅಮೂಲ್ಯ ಲಿಯೋನಾ ಘೋಷಣೆ ಕೂಗಿದ್ದಳು. ಈಕೆ ವಿರುದ್ಧ ಹಿಂದೂಪರ ಸಂಘಟನೆಗಳು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದವು. ಆಗ ಅರುದ್ರಾ ಎಂಬಾಕೆ ದಿಢೀರ್​​​, ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್ , ಆದಿವಾಸ ಮುಕ್ತಿ' ಎಂದು ಬರೆದಿದ್ದ ಭಿತ್ತಿಪತ್ರ ಪ್ರದರ್ಶಿಸಿದಳು. ನಂತರ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಳೆ ಎಂದು ಪ್ರತಿಭಟನೆ ಆಯೋಜಿಸಿದ್ದ ಸಂಘಟಕರು ಆರೋಪಿಸಿದ್ದಾರೆ.

ಇನ್ನು ಪಾಕ್​​ ಪರ ಘೋಷಣೆ ಕೂಗಿದ್ದಾಳೆ ಎನ್ನಲಾದ ಮತ್ತೋರ್ವ ಯುವತಿ ಅರುದ್ರಾ ವಿರುದ್ಧ ಎಸ್‌ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 153ಎ ಮತ್ತು153ಬಿ ಸೆಕ್ಷನ್​​ ಅಡಿಯಲ್ಲಿ ಪೊಲೀಸರು ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೌನ್​ಹಾಲ್​ನಲ್ಲಿ ಫ್ರೀ ಕಾಶ್ಮೀರ ಫಲಕ; ಯುವತಿ ಅರಿದ್ರಾ ಕುಟುಂಬವನ್ನು ವಿಚಾರಣೆಗೊಳಪಡಿಸಿದ ಪೊಲೀಸರು

ಅರುದ್ರಾ ಯಾರು? ಹಿನ್ನಲೆಯೇನು?: ಅರುದ್ರಾ ಗ್ರಾಫಿಕ್ ಡಿಸೈನರ್. ಮೂಲತ ಮಲ್ಲೇಶ್ವರ ನಿವಾಸಿ. ಆಕೆ ಖಾಸಗಿ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದಳು. ಸದ್ಯ ಖಾಸಗಿ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು. ಅರುದ್ರಾಳ ಮೂಲ ಹೆಸರು ಅನ್ನಪೂರ್ಣ ಎನ್ನಲಾಗಿದೆ. ಅರುದ್ರಾ ತಾಯಿ ರಮಾ, ತಂದೆ ನಾರಾಯಣ್. ಎರಡು ವರ್ಷದ ಹಿಂದೆ ಈಕೆ ಅಪ್ಪ ಅಮ್ಮನಿಂದ ದೂರವಾಗಿದ್ದಳು. ನಂತರ ಮಲ್ಲೇಶ್ವರಂನ ಅಜ್ಜಿ ಮನೆಯಲ್ಲಿ ಇದ್ದಳು. ಬಳಿಕ ಸ್ನೇಹಿತೆಯೊಂದಿಗೆ ವಾಸವಿದ್ದಳು. ಎಡಪಂಥೀಯ ಚಿಂತನೆಗಳತ್ತ ಒಲವು ಹೊಂದಿದ್ದ ಅರುದ್ರಾ, ತನ್ನ ಹೆಸರು ಬದಲಿಸಿಕೊಂಡಿದ್ದಳು.

ಸದ್ಯ ಪೊಲೀಸರು ಅರುದ್ರಾಳನ್ನು ವಶಕ್ಕೆ ಪಡೆದುಕೊಂಡು ಎಸ್‌ಜೆ ಪಾರ್ಕ್ ಠಾಣೆಗೆ ಕರೆದೊಯ್ದಿದ್ದಾರೆ. ಅರುದ್ರಾಳನ್ನು ಬಿಡಿಸಿಕೊಂಡು ಹೋಗಲು ಮೂವರು ಸ್ನೇಹಿತರು ಆಗಮಿಸಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಅರುದ್ರಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Youtube Video
First published: February 21, 2020, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories