HOME » NEWS » State » HERE THE 12 ACCUSED WHO BOOKED UNDER FIR IN DRUGS MAFIA CASE GNR

ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಕೇಸ್​​: 12 ಮಂದಿ ಮೇಲೆ ಎಫ್​​ಐಆರ್​​; ಯಾರ‍್ಯಾರು ಗೊತ್ತಾ?

ಇನ್ನು, ಪ್ರಕರಣದ ಆರೋಪಿಗಳು A1 to A12 ನಗರದ ಪ್ರತಿಷ್ಠಿತ ಹೋಟೆಲ್​​ನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಪ್ರತಿಷ್ಠಿತ ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಪುತ್ರರಿಗೆ ಈ ಡ್ರಗ್ಸ್​ ಮಾರಾಟ ಮಾಡಲಾಗುತ್ತಿತ್ತು.


Updated:September 5, 2020, 9:50 PM IST
ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಕೇಸ್​​: 12 ಮಂದಿ ಮೇಲೆ ಎಫ್​​ಐಆರ್​​; ಯಾರ‍್ಯಾರು ಗೊತ್ತಾ?
ನಟಿ ರಾಗಿಣಿ
 • Share this:
ಬೆಂಗಳೂರು(ಸೆ.05): ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್​​ನಲ್ಲಿ ಉಲ್ಲೇಖಿತವಾದ ಆರೋಪಿಗಳ ಹೆಸರುಗಳು ಬಹಿರಂಗವಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​​ಸಿಬಿ) ಎಸಿಪಿ ಗೌತಮ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಖುದ್ದು ಮಾಹಿತಿ ನೀಡಿದ್ದಾರೆ.

ಇನ್ನು, ಪ್ರಕರಣದ ಆರೋಪಿಗಳು  A1 to A12 ನಗರದ ಪ್ರತಿಷ್ಠಿತ  ಹೋಟೆಲ್​​ನಲ್ಲಿ ಸೇರುತ್ತಿದ್ದರು. ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಪ್ರತಿಷ್ಠಿತ ಸಿನಿಮಾ ತಾರೆಯರು, ಉದ್ಯಮಿಗಳ ಮಕ್ಕಳು, ರಾಜಕಾರಣಿಗಳ ಪುತ್ರರಿಗೆ ಈ ಡ್ರಗ್ಸ್​ ಮಾರಾಟ ಮಾಡಲಾಗುತ್ತಿತ್ತು. ಕೆಲವೊಮ್ಮೆ ಒಟ್ಟಿಗೆ ಸೇರಿ ಡ್ರಗ್ ಪಾರ್ಟಿ ಮಾಡಿ ಇವರೇ ಖುದ್ದು ಸೇವನೆ ಮಾಡುತ್ತಿದ್ದರು ಎಂದು ದೂರಿನಲ್ಲಿ ದಾಖಲಾಗಿರುವ ಬಗ್ಗೆ ಗೌತಮ್​​ ಅವರು ತಿಳಿಸಿದ್ದಾರೆ.

ಸದ್ಯ ಈ ಆರೋಪಿಗಳು ಒಳಸಂಚು ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದರು ಎಂಬ ಅಡಿ ಪ್ರಕರಣ ದಾಖಲಾಗಿದೆ. ಕಾಟನ್‌ ಪೇಟೆಯಿಂದ‌ ಸಿಸಿಬಿಗೆ ಈ  ಪ್ರಕರಣ ವರ್ಹಾವಣೆಯಾಗಿದೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಆರೋಪಿಗಳ ಹೆಸರು ಹೀಗಿದೆ:

 • A1 : ಶಿವ ಪ್ರಕಾಶ್, ಚಿಪ್ಪಿ

 • A2 : ರಾಗಿಣಿ ದ್ವಿವೇದಿ
 • A3 :ವಿರೇನ್ ಖನ್ನಾ

 • A4 : ಪ್ರಶಾಂತ್ ರಾಂಕಾ

 • A5 : ವೈಭವ್ ಜೈನ್

 • A6 : ಆದಿತ್ಯಾ ಆಳ್ವಾ

 • A7 : ಲೂಮ್ ಪೆಪ್ಪರ್( ಡಕಾರ್) ಸೈಮನ್

 • A8 : ಪ್ರಶಾಂತ್ ರಾಜು

 • A9 : ಅಶ್ವಿನ್ ಅಲಿಯಾಸ್ ಬೂಗಿ

 • A10 : ಅಭಿಸ್ವಾಮಿ

 • A11 : ರಾಹುಲ್ ತೋನ್ಸೆ

 • A12 : ವಿನಯ್ಇದನ್ನೂ ಓದಿ: Sandalwood Drugs Scandal: ಡ್ರಗ್ಸ್​ ಕೇಸ್​​ನಲ್ಲಿ ಚಿರು ಸರ್ಜಾ ಹೆಸರು ಪ್ರಸ್ತಾಪ - ಮೇಘನಾ ರಾಜ್​​ಗೆ ಬಹಿರಂಗ ಕ್ಷಮೆ ಕೋರಿದ ಇಂದ್ರಜಿತ್​ ಲಂಕೇಶ್​​

ಇನ್ನೊಂದೆಡೆ ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಡಕಾರ್ ದೇಶದ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್ ಬಂಧಿತ ಆರೋಪಿಯಾಗಿದ್ದಾನೆ. ಈತ ಮೋಜು ಮಸ್ತಿ ಪಾರ್ಟಿಗಳಿಗೆ  ವಿದೇಶದಿಂದ ಡ್ರಗ್ಸ್ ತರುತ್ತಿದ್ದ. ಸದ್ಯ ಈತನ್ನನ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ದಿದ್ದಾರೆ. ಹಾಗೆ ಈತ  ಸೆನೆಗಲ್ ದೇಶದ ರಾಜಧಾನಿಯಿಂದ ಡ್ರಗ್ ತಂದು ನಟ ನಟಿಯರಿಗೆ  ಡ್ರಗ್ ನೀಡ್ತಿದ್ದ ಎನ್ನಲಾಗಿದೆ.
Published by: Ganesh Nachikethu
First published: September 5, 2020, 9:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading