HOME » NEWS » State » HERE IS WHY SECOND DOSE OF COVID VACCINE IS GIVEN AFTER 45 DAYS OF FIRST INSTEAD OF 28 SKTV

Covid Vaccine: ಎರಡನೇ ಡೋಸ್ ಲಸಿಕೆ ಪಡೆಯಲು 28 ದಿನಗಳ ಬದಲು 45 ದಿನ ಬಿಟ್ಟು ಬನ್ನಿ ಎನ್ನುತ್ತಿರುವುದೇಕೆ ಗೊತ್ತಾ? ಇದರ ಹಿಂದಿದೆ ಹೊಸಾ ಸಂಶೋಧನೆ !

ಈಗ ಎರಡನೇ ಡೋಸ್​ನ್ನು 28 ದಿನಗಳಿಗೆ ನೀಡುವುದಿಲ್ಲ, ಬದಲಿಗೆ 45 ದಿನಗಳಿಗೆ ನೀಡಲಾಗುತ್ತದೆ. ಹಾಗಾಗಿ ಮೊದಲ ಡೋಸ್ ಲಸಿಕೆ ಪಡೆದವರು ಮತ್ತಷ್ಟು ದಿನ ತಡೆದು ಬನ್ನಿ ಎನ್ನಲಾಗುತ್ತಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಹೋದವರನ್ನು ವಾಪಸ್ ಕಳಿಸಲಾಗ್ತಿದೆ. ಇದು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ, ದೇಶದಾದ್ಯಂತ ಇದೇ ಸನ್ನಿವೇಶ ಇದೆ.

news18-kannada
Updated:April 20, 2021, 12:49 PM IST
Covid Vaccine: ಎರಡನೇ ಡೋಸ್ ಲಸಿಕೆ ಪಡೆಯಲು 28 ದಿನಗಳ ಬದಲು 45 ದಿನ ಬಿಟ್ಟು ಬನ್ನಿ ಎನ್ನುತ್ತಿರುವುದೇಕೆ ಗೊತ್ತಾ? ಇದರ ಹಿಂದಿದೆ ಹೊಸಾ ಸಂಶೋಧನೆ !
ಸಾಂದರ್ಭಿಕ ಚಿತ್ರ.
  • Share this:
Corona Updates: ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ತಿಂಗಳಲ್ಲಿ ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್ ಪಡೆದ ಅನೇಕರು ಏಪ್ರಿಲ್ ಆರಂಭದಿಂದ ಎರಡನೇ ಡೋಸ್​ ವ್ಯಾಕ್ಸಿನ್​ ಪಡೆಯಬೇಕು. ಇವರಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು 45 ರಿಂದ 59 ವರ್ಷದೊಳಗಿನ ಕೊ-ಮಾರ್ಬಿಡಿಟಿಸ್ (ಮುಂಚೆಯೇ ಅನಾರೋಗ್ಯ ಇರುವವರು) ಇರುವವರೇ ಹೆಚ್ಚಾಗಿ ಇದ್ದಾರೆ. ಜೊತೆಗೇ ಒಂದಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​ಲೈನ್ ವರ್ಕರ್ಸ್​ ಕೂಡಾ ಇದ್ದಾರೆ. ಆದ್ರೆ ಎರಡನೇ ಡೋಸ್ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಹೋದವರನ್ನು ಇನ್ನೂ ಒಂದೆರಡು ವಾರ ಬಿಟ್ಟು ಬರುವಂತೆ ಹೇಳಿ ವಾಪಸ್ ಕಳಿಸಲಾಗ್ತಿದೆ.

ಈಗ ಎರಡನೇ ಡೋಸ್​ನ್ನು 28 ದಿನಗಳಿಗೆ ನೀಡುವುದಿಲ್ಲ, ಬದಲಿಗೆ 45 ದಿನಗಳಿಗೆ ನೀಡಲಾಗುತ್ತದೆ. ಹಾಗಾಗಿ ಮೊದಲ ಡೋಸ್ ಲಸಿಕೆ ಪಡೆದವರು ಮತ್ತಷ್ಟು ದಿನ ತಡೆದು ಬನ್ನಿ ಎನ್ನಲಾಗುತ್ತಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಹೋದವರನ್ನು ವಾಪಸ್ ಕಳಿಸಲಾಗ್ತಿದೆ. ಇದು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ, ದೇಶದಾದ್ಯಂತ ಇದೇ ಸನ್ನಿವೇಶ ಇದೆ. ಇದಕ್ಕೆಲ್ಲಾ ಕಾರಣ ಈ ಲಸಿಕೆಗಳ ಮೇಲೆ ನಡೆದ ಮತ್ತಷ್ಟು ಸಂಶೋಧನೆಗಳು ಮತ್ತು ಅವುಗಳ ಆಧಾರದ ಮೇಲೆ ಬದಲಾದ ನಿಯಮಗಳು.

ಕರ್ನಾಟಕಕ್ಕೆ ಎಷ್ಟು ಲಸಿಕೆ ದೊರೆತಿದೆ?

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಮ್ಯನೈಜೇಶನ್ ವಿಭಾಗದ ಉಪನಿರ್ದೇಶಕಿ ಡಾ ರಜನಿ ಬಿ ಎನ್ ಹೇಳುವಂತೆ ರಾಜ್ಯಕ್ಕೆ ಇದುವರಗೆ 83,01,480 ಲಸಿಕೆಗಳು ದೊರೆತಿವೆ. ಇದರಲ್ಲಿ ಕೋವಿಶೀಲ್ಡ್ 73,85.260 ರಷ್ಟು ಇದ್ದರೆ 9,16,220 ಕೋವ್ಯಾಕ್ಸಿನ್ ಇದೆ. ಜನವರಿ 16ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದು ನಿನ್ನೆ ಮಧ್ಯಾಹ್ನದವರಗೆ ರಾಜ್ಯದಲ್ಲಿ ಒಟ್ಟು 71,17,405 ಡೋಸ್​ಗಳಷ್ಟು ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ ಆರೋಗ್ಯ ಸಿಬ್ಬಂದಿ, ಫ್ರಂಟ್​ಲೈನ್ ವರ್ಕರ್ಸ್, 60 ವರ್ಷ ಮೇಲ್ಪಟ್ಟವರು ಮತ್ತು 45 ರಿಂದ 59 ವರ್ಷದ ನಿರ್ದಿಷ್ಟ ಗುಂಪಿನವರು ಸೇರಿದ್ದಾರೆ. ಇವರಲ್ಲಿ ಅನೇಕರು ಈಗಾಗಲೇ ಎರಡನೇ ಡೋಸ್​ ಲಸಿಕೆಯನ್ನೂ ಪಡೆದಿದ್ದಾರೆ.

Second Dose ಗೆ 28ರ ಬದಲು 45 ದಿನಗಳು ಏಕೆ?

ಎಲ್ಲರಿಗೂ ತಿಳೀದಿರುವಂತೆ ಕೋವಿಡ್ 19 ಸೋಂಕು, ಲಸಿಕೆ ಎಲ್ಲವೂ ಇಡೀ ವಿಶ್ವಕ್ಕೇ ಹೊಸತು. ಸುರಕ್ಷಿತವಾದ ಲಸಿಕೆಗಳನ್ನು ತಯಾರಿಸಿ ಜನರಿಗೆ ನೀಡುತ್ತಿದ್ದರೂ ಅವುಗಳ ಮೇಲೆ ನಿರಂತರ ಸಂಶೋಧನೆ ಮತ್ತು ಪ್ರಯೋಗಗಳು ನಡೆಯುತ್ತಲೇ ಇವೆ. ಇಂಥಾ ಒಂದು ನೂತನ ಸಂಶೋಧನೆಯಲ್ಲಿ ಕೋವಿಡ್ ಲಸಿಕೆ ಮೊದಲನೇ ಮತ್ತು ಎರಡನೇ ಡೋಸ್​ಗಳ ನಡುವೆ ಅಂತರ ಈಗ ಇರುವುದಕ್ಕಿಂತ ಹೆಚ್ಚಿದ್ದರೆ ಆಗ ದೇಹದಲ್ಲಿ ಕೋವಿಡ್ ವಿರುದ್ಧದ ರೋಗನಿರೋಧಕ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದು ತಿಳಿದುಬಂದಿದೆ. ಹಾಗಾಗಿ ಕೇಂದ್ರ ಸರ್ಕಾರ ಲಸಿಕೆ ನೀಡುವ ನಿಯಮಗಳಲ್ಲೇ ಬದಲಾವಣೆ ತಂದು ಆ ಪ್ರಕಾರ ಆದೇಶ ಹೊರಡಿಸಿದೆ.

ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರೂ ಆಗಿರುವ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ ಡಾ ಸಿ ನಾಗರಾಜ್ ಹೇಳುವಂತೆ “ಈಗಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮೇಲೆ ಮತ್ತಷ್ಟು ಉನ್ನತ ಮಟ್ಟದ ಸಂಶೋಧನೆಗಳು ನಡೆಯುತ್ತಲೇ ಇವೆ. ಈ ಹಿಂದೆ ಇದ್ದ 28 ದಿನಗಳು ಅಂದರೆ 4 ವಾರಗಳ ಅಂತರದ ಬದಲು ಮತ್ತಷ್ಟು ಹೆಚ್ಚಿನ ಅಂತರ ನೀಡುವುದು ಉತ್ತಮ ಎಂದು ಈ ಸಂಶೋಧನೆಗಳಿಂದ ತಿಳಿದುಬಂದಿದೆ. ಹಾಗಾಗಿ ಕೋವಿಶೀಲ್ಡ್​ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್​ ನಡುವೆ 8 ರಿಂದ 12 ವಾರಗಳಷ್ಟು ಅಂತರ ಹಾಗೂ ಕೋವ್ಯಾಕ್ಸಿನ್​ಗೆ 6 ರಿಂದ 8 ವಾರಗಳ ಅಂತರ ನೀಡುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಜನರಿಗೆ ಅತಿ ಹೆಚ್ಚು ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಹೊಸಾ ನಿಯಮಗಳನ್ನು ರೂಪಿಸಲಾಗಿದೆ”.

ಎರಡು ಡೋಸ್​ಗಳ ನಡುವೆ ಅಂತರ ಹೆಚ್ಚಾದಾಗ ಹೆಚ್ಚು ಜನರಿಗೆ ಲಸಿಕೆ ನೀಡಲು ಸರ್ಕಾರಕ್ಕೆ ಸ್ವಲ್ಪ ಹೆಚ್ಚು ಸಮಯ ದೊರೆಯುತ್ತದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದರಿಂದ ಲಸಿಕೆಯ ತಯಾರಿ ಮತ್ತು ಹಂಚಿಯೂ ಹೆಚ್ಚಬೇಕಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹೊಸಾ ಸಂಶೋಧನೆ ಒಂದು ರೀತಿಯಲ್ಲೇ ಉಪಯುಕ್ತವೇ ಆದಂತಿದೆ.
Published by: Soumya KN
First published: April 20, 2021, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories