• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ಯಾದಗಿರಿ ಕೇಸರಿ ಪಡೆಯಲ್ಲಿ ಗರಿಗೆದರಿದ ಟಿಕೆಟ್ ಆಕಾಂಕ್ಷಿಗಳ ನಿರೀಕ್ಷೆ

Karnataka Election 2023: ಯಾದಗಿರಿ ಕೇಸರಿ ಪಡೆಯಲ್ಲಿ ಗರಿಗೆದರಿದ ಟಿಕೆಟ್ ಆಕಾಂಕ್ಷಿಗಳ ನಿರೀಕ್ಷೆ

ಯಾದಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿ (ಸಾಂದರ್ಭಿಕ ಚಿತ್ರ)

ಯಾದಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿ (ಸಾಂದರ್ಭಿಕ ಚಿತ್ರ)

ನಾಲ್ಕು ಕ್ಷೇತ್ರಗಳಲ್ಲಿ ಸುರಪುರ, ಯಾದಗಿರಿಯಲ್ಲಿ ಹಾಲಿ ಬಿಜೆಪಿ ಶಾಸಕರಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಇಂದು ಮಹತ್ವದ ಚರ್ಚೆ ನಡೆಯಲಿದೆ.

 • Share this:

ಯಾದಗಿರಿ: ಖಾಸಗಿ ರೆಸಾರ್ಟ್​ನಲ್ಲಿ ಬಿಜೆಪಿ ಟಿಕೆಟ್ (BJP Election Ticket) ಹಂಚಿಕೆಯ ಬಗ್ಗೆ ಮ್ಯಾರಥಾನ್ ಸಭೆ ನಡೆಯುತ್ತಿದೆ. ಇತ್ತ ಹೊರಗಡೆ ಟಿಕೆಟ್ ಅಕಾಂಕ್ಷಿಗಳಲ್ಲಿ ಆತಂಕ ಹೆಚ್ಚಾಗಿದೆ. ಟಿಕೆಟ್ ಸಿಗುತ್ತಾ ಅಥವಾ ಇಲ್ಲವಾ ಅನ್ನೋ ಆತಂಕ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ರಾಜ್ಯ ಬಿಜೆಪಿ (Karnataka BJP) ಘಟಕ ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ಕ್ಷೇತ್ರಗಳಾದ ಸುರಪುರ, ಶಹಾಪುರ, ಯಾದಗಿರಿ, ಗುರುಮಠಕಲ್ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮತದಾನ ಮೂಲಕ ಜಿಲ್ಲಾ ಕೇಂದ್ರದಲ್ಲಿ ಅಭಿಪ್ರಾಯ ಸಂಗ್ರಹಿಸಿದೆ. ಅಭಿಪ್ರಾಯ ಸಂಗ್ರಹದ ನಂತರ ಇಂದು ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಿಜೆಪಿ ಕೋರ್ ಕಮಿಟಿ ಸಭೆ ಮೂಲಕ ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.


ನಾಲ್ಕು ಕ್ಷೇತ್ರಗಳಲ್ಲಿ ಸುರಪುರ, ಯಾದಗಿರಿಯಲ್ಲಿ ಹಾಲಿ ಬಿಜೆಪಿ ಶಾಸಕರಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಇಂದು ಮಹತ್ವದ ಚರ್ಚೆ ನಡೆಯಲಿದೆ.


ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ?


ಕೋರ್ ಕಮಿಟಿ ಸಭೆಯಲ್ಲಿ ಶಾಸಕರು, ಸಂಸದರು ,ಕೋರ್ ಕಮಿಟಿ ಸದಸ್ಯರು ಭಾಗಿಯಾಗಲಿದ್ದಾರೆ. ಶಾಸಕರಾದ ರಾಜುಗೌಡ, ವೆಂಕಟರೆಡ್ಡಿ ಮುದ್ನಾಳ, ರಾಯಚೂರು ಸಂಸದ ರಾಜಾ ಅಮರೇಶ ನಾಯಕ,ಕಲಬುರಗಿ ಸಂಸದ ಡಾ.ಉಮೇಶ ಜಾಧವ್,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್,ಚಂದ್ರಶೇಖರಗೌಡ ಮಾಗನೂರು, ನಾಗರತ್ನ ಕುಪ್ಪಿ,ದೇವೆಂದ್ರ ನಾದ್ ನಾಥ್ ಅವರು ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿಯೇ ಟಿಕೆಟ್ ಹಂಚಿಕೆ


ಮತದಾನ ಮೂಲಕ ಅಭಿಪ್ರಾಯ ಪಡೆಯಲಾಗಿದೆ. ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಜಿಲ್ಲಾ ಕೋರ್ ಕಮಿಟಿ ಸಭೆ  ಸದಸ್ಯರ ಸಲಹೆ ಪಡೆಯಲಾಗುತ್ತದೆ. ಸಲಹೆ ಪಡೆದು ಕೇಂದ್ರಕ್ಕೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುತ್ತದೆ ಎಂದು ಎಂಎಲ್​ಸಿ ರಘುನಾಥ್ ರಾವ್ ಮಲ್ಕಾಪುರೆ ಹೇಳಿದ್ದಾರೆ.


ಚುನಾವಣೆ ಸಮಿತಿ, ಕೇಂದ್ರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಂತರ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯು ಅಭ್ಯರ್ಥಿ ಆಯ್ಕೆ ಪೂರ್ಣಗೊಳಿಸುತ್ತದೆ. ಎಪ್ರಿಲ್ ಮೊದಲನೇ ವಾರ ಅಭ್ಯರ್ಥಿ ಗಳ ಆಯ್ಕೆ ಪ್ರಕ್ರಿಯೆ ಮುಗಿಯಬಹುದು ಎಂದು ರಘುನಾಥ್ ರಾವ್ ತಿಳಿಸಿದರು.


ಇದನ್ನೂ ಓದಿ:  Araga Jnanendra ಅದಕ್ಷತೆಯಿಂದಾಗಿ ಪೊಲೀಸ್ ಇಲಾಖೆ ಹಾದಿ ತಪ್ಪಿದೆ: ಸಿದ್ದರಾಮಯ್ಯ


ಯಾದಗಿರಿ ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು


1.ಸುರಪುರ: ರಾಜುಗೌಡ ( ಶಾಸಕ)


2.ಶಹಾಪುರ: ಗುರು ಪಾಟೀಲ ಶಿರವಾಳ, ಅಮೀನರೆಡ್ಡಿ ಯಾಳಗಿ, ಚಂದ್ರಶೇಖರ್ ಸುಬೇದಾರ್​


3.ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ ( ಶಾಸಕ), ಡಾ.ವೀರಬಸವಂತರೆಡ್ಡಿ  ಮುದ್ನಾಳ, ಚಂದ್ರಶೇಖರಗೌಡ ಮಾಗನೂರು, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಲಲಿತಾ ಅನಪುರ, ಚನ್ನಾರೆಡ್ಡಿಗೌಡ ಬಿಳ್ಹಾರ, ಅಂಬಯ್ಯ ಶಾಬಾದಿ

top videos


  4.ಗುರುಮಿಠಕಲ್: ನಾಗರತ್ನ ಕುಪ್ಪಿ, ಗಿರೀಶ್ ಮಟ್ಟಣನವರ್, ಲಲಿತಾ ಅನಪುರ, ಬಸವರಾಜ್ ಚಂಡರಕಿ, ನರೇಂದ್ರ ರಾಠೋಡ

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು