ಬೆಂಗಳೂರು: ಬಿಜೆಪಿ ಟಿಕೆಟ್ ಘೋಷಣೆಗೆ (BJP Candidate List) ಕ್ಷಣಗಣನೆ ಆರಂಭವಾಗಿದೆ. ಕುಟುಂಬ ರಾಜಕಾರಣದ (Family Politics) ವಿರುದ್ಧ ವಾಗ್ದಾಳಿ ನಡೆಸುವ ಬಿಜೆಪಿಯ ನಾಯಕರು (BJP Leaders) ಇದೀಗ ಮಕ್ಕಳಿಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು, ಶಿಕಾರಿಪುರ (Shikaripura) ಕ್ಷೇತ್ರದಿಂದ ಪುತ್ರ ಬಿವೈ ವಿಜಯೇಂದ್ರ (BY Vijayendra) ಸ್ಪರ್ಧೆ ಮಾಡೋದು ಖಚಿತ ಎಂಬ ಸಂದೇಶವನ್ನು ಹೈಕಮಾಂಡ್ಗೆ ಕಳುಹಿಸಿದ್ದಾರೆ. ಈಗ ಅದೇ ರೀತಿ ರಾಜ್ಯ ಬಿಜೆಪಿ ನಾಯಕರು ತಮ್ಮ ಮುಂದಿನ ಪೀಳಿಗೆಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಹಾಗಾದರೆ ಬಿಜೆಪಿಯಲ್ಲಿ ಯಾರು ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗ ನಗರದಲ್ಲಿ ಪುತ್ರ ಕಾಂತೇಶ್ಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ. ಹೊಸಕೋಟೆಯಲ್ಲಿ ನಿತೀಶ್ ಪುರುಷೊತ್ತಮ್‌ಗೆ ಸಚಿವ ಎಂಟಿಬಿ ನಾಗರಾಜ್ ಟಿಕೆಟ್ ಕೇಳಿದ್ದಾರೆ.
ಟಿಕೆಟ್ ರೇಸ್ನಲ್ಲಿ ಕಾರಜೋಳರ ಇಬ್ಬರು ಪುತ್ರರು
ಮುಧೋಳದಲ್ಲಿ ತಮಗೆ ಕೊಡದಿದ್ರೆ ಪುತ್ರ ಉಮೇಶ್ ಕಾರಜೋಳಗೆ ಟಿಕೆಟ್ ನೀಡಬೇಕೆಂದು ಸಚಿವ ಗೋವಿಂದ ಕಾರಜೋಳ ಡಿಮ್ಯಾಂಡ್ ಮಾಡಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ ಗೋವಿಂದ ಕಾರಜೋಳರ ಮತ್ತೊಬ್ಬ ಪುತ್ರ ಗೋಪಾಲ್ ಕಾರಜೋಳ ಅವರೂ ಸಹ ಬಿಜೆಪಿ ಆಕಾಂಕ್ಷಿ ಆಗಿದ್ದಾರೆ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ ಮಗ ಡಾ. ಸಿದ್ಧಾರ್ಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಡಬಲ್ ಟಿಕೆಟ್ ಕೇಳಿರುವ ಸೋಮಣ್ಣ
ಇನ್ನು ಸಚಿವ ವಿ.ಸೋಮಣ್ಣ ತಮಗೂ, ಪುತ್ರ ಅರುಣ್ಗೆ ಟಿಕೆಟ್ ಕೇಳಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್ ಕೇಳಿದ್ದಾರೆ.
ಇನ್ನು ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಸ್ಥಾನಕ್ಕೆ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಬಂದಿದೆ. ಹುಕ್ಕೇರಿಯಲ್ಲಿ ಕತ್ತಿ ಪುತ್ರ ನಿಖಿಲ್ ಕತ್ತಿ ಅಥವಾ ಕತ್ತಿ ಸೋದರ ರಮೇಶ್ ಕತ್ತಿಗೆ ಕೊಡುವಂತೆ ಲಾಬಿ ನಡೆಸಲಾಗುತ್ತಿದೆ.
ಇದನ್ನೂ ಓದಿ: BS Yediyurappa: ಪಟ್ಟಿ ಬಿಡುಗಡೆ ಬಗ್ಗೆ ರಾಜಾಹುಲಿ ಶಾಕಿಂಗ್ ಹೇಳಿಕೆ; ಬಿಎಸ್ವೈ ಕಳುಹಿಸಿದ ಪರೋಕ್ಷ ಸಂದೇಶ ಏನು?
ಸವದತ್ತಿಯಲ್ಲಿ ಆನಂದ್ ಮಾಮನಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆನಂದ್ ಮಾಮನಿ ಪತ್ನಿ ರತ್ನಾ ಮಾಮನಿ ಅಥವಾ ಸೋದರ ಸಂಬಂಧಿ ವಿಶ್ವನಾಥ ಮಾಮನಿಗೆ ಟಿಕೆಟ್ ನೀಡಬೇಕು ಎಂದು ಲಾಬಿ ನಡೆಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ