Weed In Agricultural Land: ಅನ್ನದಾತನಿಗೆ ದರಿದ್ರಲಕ್ಷ್ಮಿ ಆದಳೇ ಈ ಧನಲಕ್ಷ್ಮೀ! ಯಾರಿವಳು ಇಲ್ಲಿದೆ ಸಂಪೂರ್ಣ ಮಾಹಿತಿ

ಕೃಷಿ ಭೂಮಿಯಲ್ಲಿ ದನಲಕ್ಷ್ಮೀ ಎಂಬ ವಿಚಿತ್ರ ಪ್ರಬೇಧದ ಸಸ್ಯವೊಂದು ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ಬೆಳೆಯುತ್ತಿದ್ದು. ಇದು ಬೆಳೆಗಳ ನಾಶಕ್ಕೆ ಕಾರಣವಾಗಿದೆ. ಮತ್ತು ಇದನ್ನು ನಾಶಗೊಳಿಸುವುದು ರೈತರಿಗೆ ಸವಾಲಿನಂತಾಗಿದೆ.

ಧನಲಕ್ಷ್ಮೀ ಸಸ್ಯ

ಧನಲಕ್ಷ್ಮೀ ಸಸ್ಯ

  • Share this:
ಆಧುನಿಕತೆಯಲ್ಲಿ ಎಷ್ಟೇ ಬದಲಾವಣೆಯಾದರು, ಯಾವುದೇ ರೀತಿಯಾದ ಹೊಸ ಹೊಸ ತಂತ್ರಜ್ಞಾನಗಳು (Technology) ಅಸ್ತಿತ್ವಕ್ಕೆ ಬಂದರೂ ಸಹ ಅನ್ನದಾತನ ಸ್ಥಾನವನ್ನು ಅವುಗಳಿಗೆ ಹೊಂದಲು ಸಾಧ್ಯವಿಲ್ಲ. ರೈತ ಹೊಲದಾಗ ಕಷ್ಟ ಪಟ್ಟು ದುಡಿದಾಗ ಮಾತ್ರ ದೇಶದ ಜನತೆ ಬದುಕಲು ಸಾಧ್ಯ. ಅದಕ್ಕೆ ರೈತನನ್ನು (Farmer) ದೇಶದ ಬೆನ್ನೆಲುಬು (Back Bone) ಎಂದು ಕರೆಯುತ್ತಾರೆ. ಇವನು ದೇಶದ ಅಭಿವೃದ್ಧಿಯ ರೂವಾರಿಯಾಗಿದ್ದಾನೆ. ಅವನು ಪ್ರತಿನಿತ್ಯ ಬಿಸಿಲು ಗಾಳಿ ಮಳೆಯೆನ್ನದೆ ಕಷ್ಟಪಟ್ಟು ದುಡಿಯುತ್ತಾನೆ. ಆದರೆ ಅವನ ಕಾಯಕ್ಕೆ ಕೆಲವೊಂದು ವಿಚಾರಗಳು ಅಡ್ಡಿಯಾಗುತ್ತದೆ. ಅಂತಹವುಗಳಲ್ಲಿ ಒಂದು ಬೆಳೆಯ ನಡುವೆ ಅನಗತ್ಯವಾದ ಕಳೆಗಳು ಬೆಳೆಯುವುದಾಗಿದೆ. ಇದೀಗ ಅಂತಹದೆ ಧನಲಕ್ಷ್ಮಿ (Dhanalakshmi) ಎನ್ನುವ ಕಳೆ (Weed) ಕೃಷಿ ಭೂಮಿಯಲ್ಲಿ (Agricultural Land) ಹರಡಿದ್ದು ಇದು ಯಾವುದೇ ರೀತಿಯಾದ ಉಪಯೋಗಕ್ಕೆ ಬಾರದೆ ಬೆಳೆಯನ್ನು ಹಾಳು ಮಾಡುತ್ತಿದೆ.

ಸಾಮಾನ್ಯವಾಗಿ ಕೃಷಿ ಭೂಮಿಯ ಸುತ್ತಲೂ ಅನೇಕ ರೀತಿಯಾದ ಸಸ್ಯಗಳು ಬೆಳೆಯುತ್ತದೆ. ಗರಿಕೆ, ಒಂದೆಲೆಗ, ನೆಲ ನೇರಳೆ ಹೀಗೆ ಇನ್ನಿತರ ಜಾತಿಯ ಸಸ್ಯಗಳು, ಹುಲ್ಲುಗಳು ಬೆಳೆಯುತ್ತದೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಒಂದೆಲೆಗ, ಕೆಸುವು, ನೆಲ ನೇರಳೆಯಂತಹ ಕೆಲವೊಂದು ಸಸ್ಯಗಳು ಆರೋಗ್ಯವರ್ಧಕಗಳಾಗಿರುತ್ತದೆ. ಇನ್ನೂ ಕೆಲವು ಜಾನುವಾರುಗಳ ಮೇವಿಗೆ ಉಪಯೋಗವಾಗುತ್ತದೆ. ಆದರೆ ಕೆಲವು ಸಸ್ಯಗಳು ಯಾವುದೇ ರೀತಿಯಾದ ಉಪಯೋಗಕ್ಕೆ ಬರುವುದಿಲ್ಲ.ಅಂತಹವುಗಳಲ್ಲಿ ಒಂದು ಧನಲಕ್ಷ್ಮೀ (Tridax)  ಸಸ್ಯ.

ಇದನ್ನೂ ಓದಿ: Business Idea: ಈ ಕೃಷಿಯಿಂದ 4 ತಿಂಗಳೊಳಗೆ 8 ಲಕ್ಷ ಆದಾಯಗಳಿಸಬಹುದು! ಲಕ್ಷಾಧಿಪತಿಗಳನ್ನಾಗಿಸುವ ಬೆಳೆ ಇದೇ ನೋಡಿ

ಕೃಷಿ ಭೂಮಿಯಲ್ಲಿ ಹರಡಿದ ಧನಲಕ್ಷ್ಮೀ ಸಸ್ಯ
ಕೃಷಿ ಭೂಮಿಯಲ್ಲಿ ಕೆಲವೊಂದು ಉಪಯೋಗಕ್ಕೆ ಬಾರದ ವಿಚಿತ್ರ ಸಸ್ಯ ಪ್ರಬೇಧಗಳು ಹುಟ್ಟಿಕೊಳ್ಳುತ್ತದೆ. ಅಂತಹ ಸಸ್ಯ ಜಾತಿಗಳಲ್ಲಿ ಒಂದು ಧನಲಕ್ಷ್ಮೀ. ಇದು ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯಲ್ಲಿ ಅಧಿಕವಾಗಿ ಬೆಳೆಯುತ್ತಿದ್ದು ಭೂಮಿಯ ತುಂಬ ಹರಡಿರುವ ಈ ಸಸ್ಯ ಬೆಳೆಯ ಬೆಳೆವಣೆಗೆಯನ್ನು ಕುಂಠಿತಗೊಳಿಸುತ್ತದೆ.

ಬಯಲು ನಾಡಿಗೆ ಕಾಲಿಟ್ಟ ಧನಲಕ್ಷ್ಮೀ
ಸಾಮಾನ್ಯವಾಗಿ ಈ ಸಸ್ಯಗಳು ಕರಾವಳಿಯ ಕೆಲವು ಭಾಗಗಳಲ್ಲಿ ಅಂದ್ರೆ ಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕೆಲವು ಪ್ರದೇಶಗಳ್ಲಿ ಮೊದಲು ಹೆಚ್ಚಾಗಿ ಕಂಡು ಬರುತ್ತಿತ್ತು. ಇದೀಗ ಈ ಸಸ್ಯ ಬಯಲು ನಾಡಿನ ಪ್ರದೇಶಗಳಿಗೂ ಹಬ್ಬಿದೆ. ಇದು ಬಲಿಷ್ಟವಾಗಿ ಬೆಳೇಯುವ ಮೂಲಕ ಇತರ ಬೆಳೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ.

ಈ ಸಸ್ಯ ಚೆನ್ನರಾಯಣಪಟ್ಟಣ ತಾಲೂಕಿನ ದಿಂಡಗೂರು, ಕಲ್ಕೆರೆ, ಜಂಬೂರು, ಕನುವನಘಟ್ಟ, ಉಳ್ಳಾವಳ್ಲಿ, ಮುದಿಬೆಟ್ಟಕಾವಲು ಸೇರಿದಂತೆ ಇಲ್ಲಿನ ಅನೇಕ ಗ್ರಾಮಗಳಲ್ಲಿ ಕಂಡು ಬಂದಿದೆ. ಈ ವಿಚಿತ್ರ ಕಳೆಯನ್ನು ಗಮನಿಸಿದ ರೈತರು ಇದರ ಬಗ್ಗೆ ಚಿಂತೆಗೆ ಒಳಾಗಾಗಿದ್ದಾರೆ. ಏಕೆಂದರೆ ಇದು ಅಲ್ಲಿನ ಹೊಲ,ಗದ್ದೆ, ತೋಟ ಸೇರಿದಂತೆ ಕೃಷಿ ಭೂಮಿಯ ತುಂಬ ಹರಡಿಕೊಂಡಿದ್ದು. ಇದು ಬೆಳೆಯ ನಾಶಕ್ಕೆ ಕಾರಣವಾಗುತ್ತಿದೆ.

ಕೃಷಿ ಭೂಮಿಯಲ್ಲಿ ಹರಡಿರುವ ಧನಲಕ್ಷ್ಮೀ ಸಸ್ಯ


ಜಾನುವಾರುಗಳ ಮೇವಿಗೂ ಉಪಯೋಗವಿಲ್ಲ
ಈ ಸಸ್ಯಗಳು ಬೆಳೆಗಳ ಬೆಳವಣಿಗೆಗೆ ಅಡ್ಡಿಯಾಗುವುದು ಮಾತ್ರವಲ್ಲದೆ ಯಾವುದೇ ರೀತಿಯಾದ ಉಪಯೋಗಗಳು ಇದರಿಂದ ಇಲ್ಲ. ದನಗಳು ಅಥವಾ ಇತರೆ ಯಾವುದೇ ಜಾನುವಾರುಗಳ ಮೇವಿಗೂ ಇದು ಬಳಕೆಯಾಗುವುದಿಲ್ಲ. ಇದು ಎಳೆತು ಇರುವಾಗ ಸಾಮಾನ್ಯವಾಗಿ ದನಗಳು ಇದನ್ನು ತಿನ್ನುತ್ತದೆ. ಆದರೆ ಬಲಿತ ನಂತರ ಈ ಸಸ್ಯದ ವಾಸನೆಯನ್ನೂ ಪಡೆಯಲು ಅವುಗಳು ಇಷ್ಟ ಪಡುವುದಿಲ್ಲ.

ಮತ್ತೆ ಮತ್ತೆ ಬೆಳೆಯುತ್ತದೆ ಈ ಸಸ್ಯ
ಅನಗತ್ಯವಾದ ಈ ಸಸ್ಯವನ್ನು ಕಿತ್ತೆಸೆದರೂ ಅದರ ಬೇರುಗಳು ಭೂಮಿಯಲ್ಲಿ ಆಳವಾಗಿ ಇರುವುದರಿಂದ ಮತ್ತೆ ಮತ್ತೆ ಬೆಳೆಯುತ್ತದೆ. ಕಳೆ ನಾಶ ಮದ್ಧನ್ನು ಸಿಂಪಡಿಸಿದರೂ ಇದು ನಾಶವಾಗುವುದಿಲ್ಲ. ಇದೀಗ ಇದನ್ನು ಕೃಷಿ ಭೂಮಿಯಿಂದ ತೆಗೆದುಹಾಕುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ದನಗಳು ಈ ಸಸ್ಯವನ್ನು ತಿಂದಾಗ ಅವುಗಳ ಹೊಟ್ಟೆಯೊಳಗೆ ಅದರ ಬೀಜಗಳು ಸೇರುತ್ತದೆ. ದನದ ಸೆಗಣಿಯನ್ನು ಕೃಷಿ ಭೂಮಿಗೆ ಹಾಕಿದಾಗ ಅದರಲ್ಲಿ ಬೀಜಗಳು ಮತ್ತೆ ಭೂಮಿಯಲ್ಲಿ ಚಿಗುರೊಡೆಯುತ್ತದೆ.

ಇದನ್ನೂ ಓದಿ: Farmers App: ರೈತರೇ, ಸಹಾಯಧನ ಪಡೆಯಲು ಈ ಆ್ಯಪ್​ನಲ್ಲಿ ಬೆಳೆ ಮಾಹಿತಿ ಸಲ್ಲಿಸಿ

ನಾನಾ ರೀತಿಯ ಹೆಸರುಗಳನ್ನು ಹೊಂದಿದೆ ಈ ಸಸ್ಯ
ಧನಲಕ್ಷೀ ಎಂದು ಕರೆಯುವ ಈ ಸಸ್ಯವನ್ನು ಬೇರೆ ಬೇರೆ ರೀತಿಯ ಹೆಸರುಗಳಿಂದ ಕರೆಯುತ್ತಾರೆ. ಕೆಲವೆಡೆ 'ಹಬ್ಬುಗೆ ಮಾಣಿ' ಎಂದರೆ ಇನ್ನೂ ಕೆಲವೆಡೆ 'ಹಳದಿ ಮುತ್ತಿನ ಸೊಪ್ಪು' ಎಂದು ಕರೆಯುತ್ತಾರೆ.
Published by:Nalini Suvarna
First published: