Cinema Halls Reopening Guidelines: ಚಿತ್ರಮಂದಿರ ತೆರೆಯಲು ಮಾರ್ಗಸೂಚಿ ಪ್ರಕಟ​..!

Cinema Halls Reopening Guidelines: ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದ್ದು, ಮಲ್ಟಿಪ್ಲೆಕ್ಸ್​ ಹಾಗೂ ಸಿಂಗಲ್​ ಸ್ಕ್ರೀನ್​ನ ಮಾಲೀಕರು ಚಿತ್ರ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಸಿನಿಮಾ ಪ್ರದರ್ಶನ ಮಾಡುವವರು ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ರೀತಿಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಈಗ ಸರ್ಕಾರ ಪ್ರಕಟಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಅಂದಾಜು ಆರು ತಿಂಗಳಿನಿಂದ ಸಿನಿಮಾ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಬಾಗಿಲು ಮುಚ್ಚಿವೆ. ಇತ್ತೀಚೆಗಷ್ಟೆ ಅನ್​ಲಾಕ್​ 5ನಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಹಸಿರು ನಿಶಾನೆ ತೋರಿದೆ.  ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುತ್ತಿದ್ದಂತೆಯೇ ಮಲ್ಪಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳ ಮಾಲೀಕರು ಖುಷಿಯಾಗಿದ್ದು, ಚಿತ್ರಮಂದಿರಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಇನ್ನು ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡಗಳು ಹಾಗೂ ನಿರ್ಮಾಪಕರು ಪ್ಲಾನ್​ ಮಾಡುತ್ತಿದ್ದಾರೆ. ಆದರೆ ಸಿನಿಮಾ ಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗೆ  ಸಿನಿಮಾ ನೋಡಲು ಅವಕಾಶ ಕಲ್ಪಿಸಿರುವ ಸರ್ಕಾರದ ನಿರ್ಧಾರದಿಂದ ಕೆಲ ನಿರ್ಮಾಪಕರು ಬೇಸರಗೊಂಡಿದ್ದಾರೆ. ಇದರಿಂದಾಗಿ ನಿರ್ಮಾಪಕರಿಗೆ ನಷ್ಟವಾಗಲಿದೆ ಎಂಧು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ್ದಂತೆ ಈಗ ಕೇಂದ್ರ  ಸರ್ಕಾರ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಪ್ರದರ್ಶನ ಕುರಿತಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದ್ದು, ಮಲ್ಟಿಪ್ಲೆಕ್ಸ್​ ಹಾಗೂ ಸಿಂಗಲ್​ ಸ್ಕ್ರೀನ್​ನ ಮಾಲೀಕರು ಚಿತ್ರ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಸಿನಿಮಾ ಪ್ರದರ್ಶನ ಮಾಡುವವರು ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ರೀತಿಯ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಈಗ ಸರ್ಕಾರ ಪ್ರಕಟಿಸಿದೆ.

Unlock 3 Movie Theaters will remained closed
ಚಿತ್ರಮಂದಿರ


ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಆಸನ ವ್ಯವಸ್ಥೆ ಶೇಕಡ 50ರಷ್ಟು ಮೀರುವಂತಿಲ್ಲ. ಪ್ರತಿ ಆಸನದ​​​ ನಡುವೆ ಸಾಮಾಜಿಕ ಅಂತರ​​​ ಇರಬೇಕು. ಮಾರ್ಕ್​ ಮಾಡಿದ ಸೀಟ್​​ಗಳಲ್ಲಿ ಮಾತ್ರ ಪ್ರೇಕ್ಷಕರು ಕೂರಬೇಕು. ಹ್ಯಾಂಡ್​​ ವಾಶ್, ಹ್ಯಾಂಡ್​​ ಸ್ಯಾನಿಟೈಸರ್​​​​ ಬಳಸಬೇಕು. ಚಿತ್ರಮಂದಿರಕ್ಕೆ ಬರುವ ಎಲ್ಲರಿಗೂ ಆರೋಗ್ಯ ಸೇತು ಆ್ಯಪ್​​ ಕಡ್ಡಾಯ. ಥರ್ಮಲ್​​​ ಸ್ಕ್ರೀನಿಂಗ್​​ ಇರಬೇಕು. ಕೋವಿಡ್​ ಲಕ್ಷಣ ಇಲ್ಲದವರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ತಮ್ಮ ವಿವಾಹದ ದಿನಾಂಕ ಪ್ರಕಟಿಸಿದ ಕಾಜಲ್​: ಮಗಧೀರ ಬೆಡಗಿಯನ್ನು ವರಿಸಲಿರುವ ವರ ಇವರೇ..!

ಅಷ್ಟೇಅಲ್ಲ, ಆನ್​​​ಲೈನ್​ ಟಿಕೆಟ್​ ಬುಕ್ಕಿಂಗ್​ಗೆ ಆದ್ಯತೆ ನೀಡಬೇಕು. ​​ಕ್ಯೂಗಳಲ್ಲಿ ನಿಲ್ಲುವ ಪ್ರೇಕ್ಷಕರ ನಡುವೆ 6 ಅಡಿ ಅಂತರ ಇರಬೇಕು. ಮಧ್ಯಂತರದಲ್ಲಿ ಪ್ರೇಕ್ಷಕರು ಓಡಾಡುವಂತಿಲ್ಲ. ಗುಂಪು ತಡೆಯಲು ಅಡ್ವಾನ್ಸ್ ಟಿಕೆಟ್​​​ ಬುಕ್ಕಿಂಗಿಗೆ ಅವಕಾಶ ಕೊಡಬೇಕು. ಪ್ಯಾಕ್​​ ಮಾಡಿದ ತಿಂಡಿ, ನೀರು ಬಳಕೆ ಮಾಡಬೇಕು. ಥಿಯೇಟರ್​​​ ಒಳಗೆ ಯಾವುದೇ ಆಹಾರ ಮಾರುವಂತಿಲ್ಲ. ಸಿಬ್ಬಂದಿಗೆ ಮಾಸ್ಕ್​​​​​​​​​​​, ಗ್ಲೌಸ್​​​​​​​, ಪಿಪಿಇ ಕಿಟ್​​​​​​, ಶೂ ಸೇರಿ ಡ್ರೆಸ್​​​ ಕೋಡ್​​​​ ಕಡ್ಡಾಯ. ಪ್ರತಿ ಪ್ರೇಕ್ಷಕರ ಕಾಂಟ್ಯಾಕ್ಟ್​​​​​​ ನಂಬರ್​​​ ದಾಖಲಿಸಬೇಕು. ಬಾಕ್ಸ್​​ ಆಫೀಸ್​​ನಲ್ಲಿ ಅಗತ್ಯ ಕೌಂಟರ್​​ಗಳ ವ್ಯವಸ್ಥೆ ಮಾಡಬೇಕು. ಎಸಿ ಆಧಾರಿತ ಚಿತ್ರಮಂದಿರಗಳಲ್ಲಿ 24-30 ಡಿಗ್ರಿ ಸೆ.ಉಷ್ಣಾಂಶವಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಕೋವಿಡ್​​ ನಿಯಮ ಪಾಲಿಸಬೇಕು. ಮಲ್ಟಿಪ್ಲೆಕ್ಸ್​​​ಗಳ ಬಹು ಸ್ಕ್ರೀನ್​​ಗಳ ಬದಲು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Happy Birthday Dhruva Sarja: ಚಿರು ಫೋಟೋ ನೋಡಿ ಭಾವುಕರಾದ ಧ್ರುವ ಸರ್ಜಾ: ಅಭಿಮಾನಿಗಳಲ್ಲಿ ಮನವಿ ಮಾಡಿದ ಆ್ಯಕ್ಷನ್​ ಪ್ರಿನ್ಸ್​..!

ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವವರು ಈ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಇನ್ನು ಕೋವಿಡ್​ ಲಾಕ್​ಡೌನ್​ ಆರಂಭವಾದಾಗ ರಿಲೀಸ್​ ಆಗಿದ್ದ ಕೆಲವು ಸಿನಿಮಾಗಳನ್ನು ರಿರಿಲೀಸ್ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಜೊತೆಗೆ ಹೊಸ ಸಿನಿಮಾಗಳಲ್ಲಿ ಕೆಲವು ತೆರೆಗೆ ಬರಲು ಸಜ್ಜಾಗಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ, ಸದ್ಯಕ್ಕೆ ರಿಲೀಸ್ ಆಗುತ್ತಿಲ್ಲ. ಅಂತಹ ಚಿತ್ರಗಳ ಪೈಕಿ ಸಲಗ ಚಿತ್ರವೂ ಇದೆ.

Film Theaters may reopen in AP and Telangana in august but conditions apply
ಸಾಂದರ್ಭಿಕ ಚಿತ್ರ


ಈ ಹಿಂದೆಯೇ ಸಲಗ ಚಿತ್ರದ ನಿರ್ಮಾಕ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವವರೆಗೂ ರಿಲೀಸ್​ ಮಾಡುವುದಿಲ್ಲ ಎಂದಿದ್ದರು. ಅಲ್ಲದೆ ಈ ಕುರಿತಾಗಿ ಇತರೆ ಸಿನಿಮಾ ನಿರ್ಮಾಪಕರ ಜೊತೆ ಸಭೆ ನಡೆಸುವುದಾಗಿಯೂ ಹೇಳಿದ್ದರು. ಈ ಹಿಂದೆ ಸಿನಿಮಾ ಮಂದಿರ ತೆರೆಯುತ್ತವೆ ಎಂದು ಕಾಯುತ್ತಿದ್ದ ಪಿವಿಆರ್​ ತಮ್ಮಲ್ಲಿ ಪಾಲಿಸಲಿರುವ ನಿಯಮ ಹಾಗೂ ತೆಗೆದುಕೊಂಡಿರುವ ಮುವ್ವೆಚ್ಚರಿಕೆಗಳ ಬಗ್ಗೆ ವಿಡಿಯೋವನ್ನೂ ರಿಲೀಸ್​ ಮಾಡಿತ್ತಯ.
Published by:Anitha E
First published: