Gold Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ-ಪ್ರಮುಖ ನಗರಗಳ ಇಂದಿನ ದರ ಹೀಗಿದೆ

Gold And Silver Price: ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold Rate on October 14 2021: ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಭಾರತದಲ್ಲಿ ನಿನ್ನೆ 90 ರೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು 260 ರೂ ಏರಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ(Bengaluru) ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 10 ಗ್ರಾಂ ಚಿನ್ನಕ್ಕೆ 260 ರೂಪಾಯಿ ಹೆಚ್ಚಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,030 ರೂ. ಇತ್ತು. ಇಂದು ಅದೇ ಚಿನ್ನಕ್ಕೆ 46,290 ರೂಪಾಯಿ ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,030 ರೂ. ಇತ್ತು. ಇಂದು 47,290 ರೂಪಾಯಿಗೆ ಏರಿಕೆಯಾಗಿದೆ.  

ಬೆಂಗಳೂರಿನಲ್ಲಿ ಚಿನ್ನ ಬೆಲೆ ಎಷ್ಟಿದೆ?:

ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 48,160 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 44,150 ರೂ.ಇದೆ. ಹಾಗೆಯೇ ಮೈಸೂರು ಹಾಗೂ ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 48,480 ರೂ.ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತೈಲ ಬೆಲೆ ಸ್ಥಿರ, ಜಿಲ್ಲೆಗಳಲ್ಲಿ ಏರಿಳಿತ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ ವಿವರ!

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಇಂದಿನ ಬೆಳ್ಳಿ ದರ:

ಕಳೆದ 2 ದಿನಗಳಿಂದ ಬೆಳ್ಳಿ ದರ (Silver Rate) ಗಣನೀಯವಾಗಿ ಇಳಿಕೆಯಾಗಿತ್ತು. ಆದರೆ ಇಂದು ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 100 ರೂಪಾಯಿ ಹೆಚ್ಚಾಗಿತ್ತು, ಆದರೆ ಇಂದು 300ರೂ ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 61,800 ರೂ. ಇತ್ತು. ಇಂದು 1 ಕೆಜಿ ಬೆಳ್ಳಿಗೆ 62,100 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ ಇಂದು 62,100 ರೂ. ಇದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 65,800 ರೂ. ಆಸುಪಾಸಿನಲ್ಲಿದೆ.

 ಬೆಂಗಳೂರು ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುವಾಗ, ಬ್ರಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.

ಕೊರೋನಾ ವೈರಸ್ ಹೆಚ್ಚಾದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಲಾಕ್ಡೌನ್ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಚಿನ್ನ ಖರೀದಿಯ ವಿಚಾರದಲ್ಲಿ ಜಿಎಸ್ಟಿ ಅಥವಾ ಸೇವಾ ತೆರಿಗೆ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: RIL​ನ ಗ್ರೀನ್​ ಹೈಡ್ರೋಜನ್ ಗುರಿಗೆ ಕೈ ಜೋಡಿಸಿದ ಡೆನ್ಮಾರ್ಕ್‌ನ ಸ್ಟೈಸ್‌ಡಾಲ್‌

ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು
Published by:Sandhya M
First published: