ಡ್ರಗ್ಸ್​ ಕೇಸ್​​: ಇಂಟರ್​​ನ್ಯಾಷನಲ್​​​​ ಪಾರ್ಟಿ ನಡೆಸುತ್ತಿದ್ದ ವಿರೇನ್​​ ಖನ್ನಾಗಿತ್ತು ಸಿನಿಮಾ ಸ್ಟಾರ್ಸ್​ ಲಿಂಕ್​​​

ಇನ್ನು ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗೆ ಮಾಡೆಲ್, ಮ್ಯೂಸಿಷಿಯನ್, ಡ್ಯಾನ್ಸರ್ ಹೀಗೆ ಯುವತಿಯರ ದಂಡೇ ಪಾರ್ಟಿಗೆ ಬರ್ತಿತ್ತು. ಆ ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಆಗುತ್ತೆ. ಪಾರ್ಟಿಗೆ ಬರೋ ಯುವತಿಯರು ಡ್ರಗ್ಸ್ ಸೇವನೆ ಮಾಡ್ತಾರೆ. ಆ ಪಾರ್ಟಿಗೆ ಹೋಗ್ಬೇಕಂದ್ರೆ ಬೇಕು ಲಕ್ಷ ಲಕ್ಷ ಹಣ ಬೇಕಿತ್ತು.

news18-kannada
Updated:September 9, 2020, 5:15 PM IST
ಡ್ರಗ್ಸ್​ ಕೇಸ್​​: ಇಂಟರ್​​ನ್ಯಾಷನಲ್​​​​ ಪಾರ್ಟಿ ನಡೆಸುತ್ತಿದ್ದ ವಿರೇನ್​​ ಖನ್ನಾಗಿತ್ತು ಸಿನಿಮಾ ಸ್ಟಾರ್ಸ್​ ಲಿಂಕ್​​​
ರಾಗಿಣಿ ದ್ವಿವೇದಿ, ವಿರೇನ್​ ಖನ್ನಾ
  • Share this:
ಬೆಂಗಳೂರು(ಸೆ.09): ಇಂಟರ್​​ನ್ಯಾಷನಲ್ ಈವೆಂಟ್ಸ್ ನಡೆಸುತ್ತಿದ್ದ ವಿರೇನ್ ಖನ್ನಾ ಸಾಮನ್ಯನಲ್ಲ. ವಿಚಾರಣೆ ಬೆಳಕಿಗೆ ಬಂತು ವಿರೇಶ್ ಖನ್ನನ ಅಸಲಿಯತ್ತು ಬಯಲಾಗಿದೆ. ಪಾರ್ಟಿ ಆಯೋಜಕನಾಗಿದ್ದ ವಿರೇನ್ ಖನ್ನ ಡಿಜೆಯಾಗಿದ್ದ. ಬೆಂಗಳೂರಿನ‌ ಕ್ಲೌಡ್ ನೈನ್ ಪಬ್​​ನಲ್ಲಿ ಕೆಲವು ತಿಂಗಳ ಹಿಂದೆ ಕೆಲಸ ಮಾಡ್ತಿದ್ದ. ಇದೇ ಸಂದರ್ಭದಲ್ಲಿ ಕ್ಲೌಡ್ ನೈನ್ ಮ್ಯಾನೇಜ್ ಮೆಂಟ್ ಜೊತೆ  ಕಿರಿಕ್‌ ಮಾಡ್ಕಂಡಿದ್ದ. ವಿರೇನ್ ಖನ್ನನ ನಡವಳಿಕೆಯನ್ನ ಮ್ಯಾನೇಜ್ ಮೆಂಟ್ ವಿರೋಧಿಸಿತ್ತು. ಆ ಪಬ್ ನಲ್ಲಿ ಪ್ರತಿಯೊಬ್ಬರನ್ನ ಸಹ ತಪಾಸಣೆ ನಡೆಸಲಾಗ್ತಿತ್ತು. ಮ್ಯಾನೇಜ್​​ಮೆಂಟ್ ಜೊತೆ ಗಲಾಟೆ ಮಾಡ್ಕಂಡ್ ಕೆಲಸ ಬಿಟ್ಟಿದ್ದ ವಿರೇನ್ ವಿಷಯ ಸಿಸಿಬಿ ವಿಚಾರಣೆ ವೇಳೆ  ಬೆಳಕಿಗೆ ಬಂದಿದೆ. ಫೈವ್ ಸ್ಟಾರ್ ಮತ್ತು ಸೆವೆನ್ ಸ್ಟಾರ್ ಹೋಟೆಲ್​​ನಲ್ಲಿ ಪಾರ್ಟಿ ಆಯೋಜನೆ ಮಾಡ್ತಿದ್ದ. ವಿದೇಶಿ ಯುವತಿಯರೇ ಹೆಚ್ಚು ಬರ್ತಿದ್ದು ಈ ಪಾರ್ಟಿಗೆ. ಪಾರ್ಟಿ ಆಯೋಜನೆ ಮಾಡ್ತಿದ್ದ ಸ್ಥಳದಲ್ಲಿ ಸದ್ಧಿಲ್ಲದೆ ಡ್ರಗ್ಸ್ ಸಪ್ಲೈ ಆಗ್ತಿದ್ದ ಆರೋಪವಿತ್ತು.

ಇನ್ನು ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗೆ ಮಾಡೆಲ್, ಮ್ಯೂಸಿಷಿಯನ್, ಡ್ಯಾನ್ಸರ್ ಹೀಗೆ ಯುವತಿಯರ ದಂಡೇ ಪಾರ್ಟಿಗೆ ಬರ್ತಿತ್ತು. ಆ ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಆಗುತ್ತೆ. ಪಾರ್ಟಿಗೆ ಬರೋ ಯುವತಿಯರು ಡ್ರಗ್ಸ್ ಸೇವನೆ ಮಾಡ್ತಾರೆ. ಆ ಪಾರ್ಟಿಗೆ ಹೋಗ್ಬೇಕಂದ್ರೆ ಬೇಕು ಲಕ್ಷ ಲಕ್ಷ ಹಣ ಬೇಕಿತ್ತು. ಲಕ್ಷ ಲಕ್ಷ ಹಣ ಕಟ್ಟಿದ್ರೆ ಸ್ವರ್ಗ ಲೋಕವನ್ನೇ ಧರೆಗಿಳಿಸ್ತಿದ್ದ ವಿರೇನ್ ಖನ್ನ ಈವೆಂಟ್ಸ್ ನಡೆಸ್ತಿದ್ದ.

ವಿರೇನ್ ಖನ್ನಾಗೆ ಇಂಟರ್ ನ್ಯಾಷನಲ್ ಲಿಂಕ್ ಇತ್ತು. ದೊಡ್ಡ ಮಟ್ಟದಲ್ಲಿ ರೆಸಾರ್ಟ್, ಫಾರ್ಮ್ ಹೌಸ್, ಪಂಚತಾರ ಹೋಟೆಲ್​​ನಲ್ಲಿ ನಡೆಸ್ತಿದ್ದ ಪಾರ್ಟಿಗೆ ಶ್ರೀಮಂತರ ಮಕ್ಕಳು ಬರ್ತಿದ್ರು. ರಾಜಕಾರಣಿ ಮಕ್ಕಳು , ಫಿಲ್ಮ್ ಇಂಡಸ್ಟ್ರಿ, ಶ್ರೀಮಂತರ ಮಕ್ಕಳು, ಉದ್ಯಮಿ ಮಕ್ಕಳು ಪಾರ್ಟಿಯಲ್ಲಿ ಭಾಗಿಯಾಗ್ತಿದ್ರು. ವಿರೇನ್ ಖನ್ನ ಪ್ಲಾಟ್ ಮೇಲೆ ರೇಡ್ ಮಾಡಿದಾಗ ಮೂರು ಸಿಗರೇಟ್ ಬಡ್ಸ್ ಸಿಕ್ಕಿದ್ದು , ಪರಿಶೀಲನೆ ನಡೆಸಲಾಗ್ತಿದೆ.

ಇದನ್ನೂ ಓದಿ: ಡ್ರಗ್ಸ್​​ ಕೇಸ್​​: ಸಿಕ್ಕಿ ಬೀಳುವ ಭಯದಿಂದ ಸಾಕ್ಷಿ ನಾಶ ಮಾಡಿದ್ರಾ ನಟಿ ಸಂಜನಾ?

ಸಿಗರೇಟ್​​​​ನಲ್ಲಿ ಗಾಂಜಾ ತುಂಬಿ ಸೇದಲಾಗ್ತಿತ್ತಾ ಎಂಬ ಶಂಕೆಯಿದೆ. ಸದ್ಯ ಮೂರು ಸಿಗರೇಟ್ ಬಡ್ಸ್​ನ ಎಫ್​​ಎಸ್​ಎಲ್​​ಗೆ ರವಾನಿಸಲಾಗಿದೆ. ಎಫ್​​ಎಸ್​ಎಲ್‌ ವರದಿ ಇಂದು ಸಂಜೆ ಬರುವ ಸಾಧ್ಯತೆ ಇದೆ. ಮನೆಯ ಕಾರಿಡಾರ್​​ನಲ್ಲಿ ಸಿಕ್ಕ ಮೂರು ಸಿಗರೇಟ್ ತುಂಡು ಸಿಕ್ಕಿದೆ ನಕಲಿ ಯೂನಿಫಾರ್ಮ್ ಸಹ ಪತ್ತೆಯಾಗಿದ್ದು, ಶೋಕಿಗಾಗಿ, ಪೋಟೋಶೂಟ್​ಗೆ ಪೊಲೀಸ್ ಯೂನಿಫಾರ್ಮ್ ಬಳಸ್ತಿದ್ದದ್ದು ಗೊತ್ತಾಗಿದೆ. ಮನೆಯಲ್ಲಿ ಸಾಕಷ್ಟು ಈವೆಂಟ್ಸ್ ದಾಖಲೆ ಮತ್ತು ಲ್ಯಾಟ್ ಟಾಪ್ ಸೀಜ್ ಮಾಡಲಾಗಿದೆ.
Published by: Ganesh Nachikethu
First published: September 9, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading