ಬೆಂಟ್ಲಿ ಕಾರು ಅಪಘಾತ ಪ್ರಕರಣ: ನಲಪಾಡ್​ ಪುಂಡಾಟ​ ಬಯಲಾಗಿದ್ದು ಹೇಗೆ ಗೊತ್ತಾ?; ಇಲ್ಲಿದೆ ರೋಚಕ ಕತೆ

ಇತ್ತೀಚೆಗೆ ನಗರದ ಮೇಖ್ರಿ ಸರ್ಕಲ್​ ಬಳಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈಗ ಈ ಪ್ರಕರಣದಲ್ಲಿ ನಲಪಾಡ್​ ಆರೋಪಿ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ? ಈ ಸ್ಟೋರಿ ಓದಿ.

ನಲಪಾಡ್​

ನಲಪಾಡ್​

  • Share this:
ಬೆಂಗಳೂರು (ಫೆ.12): ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮೊಹಮ್ಮದ್ ನಲಪಾಡ್ ಚಲಿಸುತ್ತಿದ್ದ ಕಾರು ಇತ್ತೀಚೆಗೆ ಅಪಘಾತವಾಗಿತ್ತು. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದುದು ನಲಪಾಡ್​ ಅಲ್ಲ ನಾನು ಎಂದು ಅಂಗರಕ್ಷಕ ಬಾಲು ಠಾಣೆಯಲ್ಲಿ ಒಪ್ಪಿಕೊಂಡಿದ್ದರು. ಹೀಗಿದ್ದರೂ ಅಸಲಿ ವಿಚಾರ ಏನೆಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅದು ಹೇಗೆ ಎನ್ನುವ ಆಸಕ್ತಿಕರ ವಿಚಾರ ಇಲ್ಲಿದೆ.

ಇತ್ತೀಚೆಗೆ ನಗರದ ಮೇಖ್ರಿ ಸರ್ಕಲ್​ ಬಳಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಇದು ನಲ್​ಪಾಡ್​​ಗೆ ಸೇರಿದ ಕಾರು ಎನ್ನುವುದನ್ನು ಪೊಲೀಸರು  ಪತ್ತೆ ಹಚ್ಚಿದ್ದರು. “ಕಾರನ್ನು ನಲ​ಪಾಡ್​ ಚಲಾಯಿಸುತ್ತಿರಲಿಲ್ಲ. ಅಪಘಾತದ ವೇಳೆ ಕಾರು ಡ್ರೈವ್​ ಮಾಡಿದ್ದು ನಾನು,” ಎಂದು ನಲ್​ಪಾಡ್​ ಬಾಡಿಗಾರ್ಡ್​​ ಬಾಲು ಠಾಣೆಗೆ ಹಾಜರಾಗಿದ್ದ.

ಇದು ಸಹಜವಾಗಿಯೇ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಕಾರು ಚಾಲನೆ ವೇಳೆ ಕುಡಿದಿದ್ದೀರಾ? ಕಾರನ್ನು ಅಷ್ಟು ವೇಗವಾಗಿ ಚಲಾಯಿಸಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಬಾಲುಗೆ ಕೇಳಿದ್ದರು. ಆದರೆ, ಅವರು ಇದಕ್ಕೆ ಸಮರ್ಪಕ ಉತ್ತರ ನೀಡಿರಲಿಲ್ಲ. ಇದು ಸಹಜವಾಗಿಯೇ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು.

ಇದನ್ನೂ ಓದಿ: ಮತ್ತೆ ಹ್ಯಾರಿಸ್ ಮಗ ನಲಪಾಡ್​ನ ಪುಂಡಾಟ; ಮತ್ತಿನಲ್ಲಿ ಕಾರ್ ಅಪಘಾತ

ನಂತರ ಬಾಲು ಅವರನ್ನು ಬೆಂಟ್ಲಿ ಕಾರ್ ಬಳಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಕೀ ಕೊಟ್ಟು ಕಾರನ್ನು ಚಾಲನೆ ಮಾಡುವಂತೆ ಸೂಚಿಸಿದ್ದರು. ಈ ವೇಳೆ ಬಾಲುಗೆ ದಿಗಿಲಾಗಿತ್ತು. ಅಸಲಿ ವಿಚಾರ ಏನೆಂದರೆ, ಬಾಲುಗೆ ಕಾರು ಸ್ಟಾರ್ಟ್​ ಮಾಡುವುದು ಹೇಗೆ ಎನ್ನುವುದೆ ಗೊತ್ತಿರಲಿಲ್ಲ. ಹೀಗಾಗಿಕಾರು ಚಾಲನೆ ಮಾಡುತ್ತಿದ್ದದ್ದು ಬಾಲು ಅಲ್ಲ ಎನ್ನುವುದು ಖಚಿತವಾಗಿತ್ತು. ಈ ಮೂಲಕ  ಮೊಹಮ್ಮದ್ ನಲಪಾಡ್ ಬೆಂಟ್ಲಿ ಕಾರು ಚಾಲನೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಗನ್ ಮ್ಯಾನ್ ಬಾಲುರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
First published: