HOME » NEWS » State » HERE IS DETAILS OF WHICH DISTRICT LOCKDOWN AND WHICH ONE UNLOCK IN KARNATAKA LG

Karnataka Lockdown: ಯಾವ ಜಿಲ್ಲೆ ಲಾಕ್? ಯಾವುದು ಅನ್ ಲಾಕ್?; ಇಲ್ಲಿದೆ ಮಾಹಿತಿ

ಚಿಕ್ಕಮಗಳೂರಿನಲ್ಲಿ ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಕೆಯಾಗುವ ಸಾಧ್ಯತೆ ಇದೆ. ಲಾಕ್​ಡೌನ್​ ಮುಂದುವರೆಸಲು ಚಿಕ್ಕಮಗಳೂರು ಜಿಲ್ಲಾಡಳಿತ ಅನುಮತಿ ಕೇಳಿದೆ. ಸಿಎಂ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕಾರಕ್ಕೆ ಬಿಟ್ಟಿದ್ದಾರೆ. 

news18-kannada
Updated:June 10, 2021, 3:11 PM IST
Karnataka Lockdown: ಯಾವ ಜಿಲ್ಲೆ ಲಾಕ್? ಯಾವುದು ಅನ್ ಲಾಕ್?; ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು(ಜೂ.10): ಇಂದು ಸಿಎಂ ಬಿ.ಎಸ್.​ಯಡಿಯೂರಪ್ಪ 8 ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಇಂದು ವಿಡಿಯೋ ಕಾನ್ಫೆರೆನ್ಸ್​ ನಡೆಸಿ ಲಾಕ್​ಡೌನ್​​ ಮುಂದುವರಿಕೆ ಹಾಗೂ ಅನ್​ಲಾಕ್ ಮಾಡುವ​ ಬಗ್ಗೆ ಚರ್ಚೆ ನಡೆಸಿದ್ದಾರೆ.  ಸಭೆಯಲ್ಲಿ ಲಾಕ್​ಡೌನ್​ ಮುಂದುವರಿಕೆಗೆ 8 ಜಿಲ್ಲೆಗಳ ಅಧಿಕಾರಿಗಳು, ಸಚಿವರು ಸಿಎಂಗೆ ಮನವಿ ಮಾಡಿದ್ದಾರೆ. ಇವಾಗ ಬೆಂಗಳೂರಿನಲ್ಲಿ ಕೊರೋನಾ ಕಡಿಮೆಯಾಗಿದೆ. ಆದರೆ ಈಗ ನಮ್ಮ ನಮ್ಮ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇದೆ. ಯಾಕೆಂದರೆ ಏಪ್ರಿಲ್, ಮೇ ತಿಂಗಳಿನಲ್ಲಿ ಜಿಲ್ಲೆಗಳಿಗೆ ಬಂದವರಿಂದ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಅದು ಕಡಿಮೆ ಯಾಗಬೇಕು ಈ ನಿಟ್ಟಿನಲ್ಲಿ ಲಾಕ್ ಡೌನ್ ಬೇಕು. ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್ ಬೇಕು ಎಂದು ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳ ಡಿಸಿಗಳು 2 ವಾರಗಳ ಲಾಕ್ ಡೌನ್ ಗೆ ಮನವಿ ಮಾಡಿದ್ದಾರೆ.  ಇನ್ನೂ ಕೆಲವರು ಒಂದು ವಾರಗಳ ಕಾಲ ಲಾಕ್ ಡೌನ್ ಗೆ ಮನವಿ ಮಾಡಿದ್ದಾರೆ. ಇನ್ನೂ ಕೆಲವರು ಲಾಕ್ ಡೌನ್ ಮಾಡಿ, ಆದರೆ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಡಿಸಿಗಳು ಹಾಗೂ ಸಚಿವರು ಸಿಎಂ ಗೆ ಮನವಿ ಮಾಡಿದ್ದಾರೆ. ಎಲ್ಲರಿಂದ ಅಭಿಪ್ರಾಯ ಪಡೆದು, ಈ ಬಗ್ಗೆ ಅಂತಿಮ ತೀರ್ಮಾನ ಮಾಡುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಹಾಗಾದ್ರೆ ಯಾವ್ಯಾವ ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ ಎಂಬುದನ್ನು ನೋಡುವುದಾದರೆ,  ಚಿಕ್ಕಮಗಳೂರು, ಬೆಳಗಾವಿ, ಮಂಡ್ಯ, ಹಾಸನ ಹೀಗೆ ಅನೇಕ ಜಿಲ್ಲೆಗಳು  ಲಾಕ್ ಡೌನ್ ಮುಂದುವರಿಕೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:Mumbai Building Collapse: ಮುಂಬೈನ ಮಲಾಡ್​​ನಲ್ಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ



ಲಾಕ್​ಡೌನ್​​​ ಮುಂದುವರಿಕೆಗೆ 8 ಜಿಲ್ಲಾಡಳಿತಗಳು ಮನವಿ ಮಾಡಿವೆ. ಈ ಬಗ್ಗೆ ಸಿಎಂ ಸಂಜೆಯ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯಲ್ಲಿ  8 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಬೇಕಾ..? ಅಥವಾ ಬೇಡ್ವಾ ಎಂಬುದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಸಭೆಯ ನಂತರ ಬಿಎಸ್​​ವೈ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಕಟ ಮಾಡಲಿದ್ದಾರೆ.

ಶಿವಮೊಗ್ಗದಲ್ಲಿ 1 ವಾರ ಲಾಕ್​ಡೌನ್​ ಮುಂದುವರಿಕೆ ಸಾಧ್ಯತೆ

ಶಿವಮೊಗ್ಗದಲ್ಲಿ ಮುಂದಿನ ಒಂದು ವಾರ ಕಾಲ ಲಾಕ್​​ಡೌನ್​​ ಮುಂದುವರೆಯುವ ಸಾಧ್ಯತೆ ಇದೆ.  ಆಯಾ ಜಿಲ್ಲೆಗಳ ಬಗ್ಗೆ ನೀವೇ ಯೋಚನೆ ಮಾಡಬೇಕು ಎಂದು ಸಿಎಂ ಬಿಎಸ್​ವೈ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹೇಳಿದ್ದಾರೆ. ನಾವು ಇಲ್ಲಿಂದ ಏನನ್ನು ಹೇಳಲು ಆಗೋದಿಲ್ಲ. ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಕೂತು ಇನ್ನೊಮ್ಮೆ ಚರ್ಚೆ ಮಾಡಿ.  ಎಲ್ಲರೂ ಸಹ ಸಲಹೆ ನೀಡಿದ್ದೀರಿ. ಲಾಕ್ ಡೌನ್ ಮಾಡಲು ಎಲ್ಲರೂ ಹೇಳುತ್ತಿರುವಿರಿ. .‌ ಇಂದು‌ ಸಂಜೆ ಈ ಬಗ್ಗೆ ತೀರ್ಮಾನ ಮಾಡ್ತೀನಿ.. ಅಧಿಕಾರಿಗಳ ಜೊತೆ ಕೂತು ಈ ಬಗ್ಗೆ ತೀರ್ಮಾನ ಮಾಡ್ತೀನಿ ಎಂದರು.ಇದನ್ನೂ ಓದಿ:Karnataka Lockdown: ಅನ್​ಲಾಕ್ ಬೇಡವೆಂದು ಸಿಎಂ ಸಭೆಯಲ್ಲಿ ಒತ್ತಾಯ; ಕರ್ನಾಟಕದ ಲಾಕ್​ಡೌನ್​ ಭವಿಷ್ಯ ಇಂದು ಸಂಜೆ ನಿರ್ಧಾರ

ಚಿಕ್ಕಮಗಳೂರಿನಲ್ಲಿ 1 ವಾರ ಲಾಕ್​ಡೌನ್​ ಮುಂದುವರಿಕೆ ಸಾಧ್ಯತೆ

ಚಿಕ್ಕಮಗಳೂರಿನಲ್ಲಿ ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಕೆಯಾಗುವ ಸಾಧ್ಯತೆ ಇದೆ. ಲಾಕ್​ಡೌನ್​ ಮುಂದುವರೆಸಲು ಚಿಕ್ಕಮಗಳೂರು ಜಿಲ್ಲಾಡಳಿತ ಅನುಮತಿ ಕೇಳಿದೆ. ಸಿಎಂ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕಾರಕ್ಕೆ ಬಿಟ್ಟಿದ್ದಾರೆ.  ಜಿಲ್ಲೆಯ ಪಾಸಿಟಿವ್ ರೇಟ್ ಹೆಚ್ಚಳದ ಬಗ್ಗೆ ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಯಂತ್ರಿಸುವಂತೆ ಜಿಲ್ಲಾಡಳಿತಕ್ಕೆ ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ.

ಹಾಸನದಲ್ಲಿ ಲಾಕ್​ಡೌನ್​ ಮುಂದುವರಿಕೆ ಸಾಧ್ಯತೆ

ಹಾಸನದಲ್ಲೂ ಲಾಕ್​ಡೌನ್​ ಮುಂದುವರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ತೆಗೆದುಕೊಂಡ ಕಟ್ಟುನಿಟ್ಟಿನ‌ ಕ್ರಮದಿಂದಾಗಿ ಸೋಂಕಿನ‌ ಪ್ರಮಾಣ ಕಡಿಮೆಯಾಗುತ್ತಾ ಹೋಗ್ತಿದೆ. ಮೈಸೂರು, ಶಿವಮೊಗ್ಗ, ಹಾಸನ, ತುಮಕೂರು, ಚಿಕ್ಕಮಗಳೂರು ‌ಜಿಲ್ಲೆಗಳಲ್ಲಿ‌ ಇನ್ನೂ ಕಂಟ್ರೋಲ್ ಗೆ ಬರಬೇಕಿದೆ.  ಎಂಟು ಜಿಲ್ಲೆಗಳಲ್ಲಿ‌‌ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವ ಸಲಹೆ ನೀಡಿದ್ದೀರಾ.  ಎಂಟು‌‌ ಜಿಲ್ಲೆಗಳಲ್ಲಿ‌ ಒಂದು‌ ವಾರ ಲಾಕ್ ಡೌನ್ ಮುಂದುವರೆಸೋಣ. ನಾನು ಕೂಡಾ ಸಹೋದ್ಯೋಗಿಗಳ ಜೊತೆ ಕೂತು ಚರ್ಚೆ ಮಾಡುತ್ತೇನೆ. ಎಲ್ಲಿ ಲಾಕ್ ಡೌನ್ ಮಾಡಬೇಕೆಂಬ ತೀರ್ಮಾನಕ್ಕೆ ನೀವು ಕೂಡಾ ಸಂಜೆಯೊಳಗೆ ಬನ್ನಿ. ಆಯಾ ಜಿಲ್ಲಾ ಅಧಿಕಾರಿಗಳಿಗೆ ಆಯಾ ಜಿಲ್ಲೆಯ ಪರಿಸ್ಥಿತಿ‌ ಗೊತ್ತಿರುತ್ತದೆ ಹಾಗಾಗಿ ನೀವು ಯಾವ ಕ್ರಮ ಕೈಗೊಂಡರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬನ್ನಿ ಎಂದು ಸಿಎಂ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಲಾಕ್​ಡೌನ್​ ಮುಂದುವರಿಕೆ ಸಾಧ್ಯತೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್​ಡೌನ್​ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಇನ್ನೂ ಒಂದು ವಾರ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಬಳಿ ಕೋರಿದ್ದಾರೆ. ರಾಜ್ಯದಲ್ಲಿ ಫ್ರೀಡೌನ್ ಆದ್ರು ಜಿಲ್ಲಾ ಮಟ್ಟದಲ್ಲಿ ಲಾಕ್ ಡೌನ್ ಬಗ್ಗೆ ಮನವಿ ಮಾಡಿದರು. ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆ ಬಿಗಿ ಕ್ರಮಕ್ಕೆ ಡಿಸಿ ಕೋರಿದರು.  ಮಂಗಳೂರು, ಬಂಟ್ವಾಳ ತಾಲೂಕು ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿಲ್ಲ. ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಇನ್ನೂ ಬಿಗಿ ಕ್ರಮ ಬೇಕು. ಜಿಲ್ಲೆ ಒಳಗೆ ಎಲ್ಲಾ ತಾಲೂಕು ಮಟ್ಟದಲ್ಲಿ ಬಿಗಿ ಕ್ರಮ ಅಗತ್ಯವಿದೆ ಅಂತ ಮಾಹಿತಿ ಇದೆ. ಸದ್ಯ ಜಿಲ್ಲೆಯಲ್ಲಿ 15% ಗಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದೆ.

ದ.ಕ ಜಿಲ್ಲೆ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಆಗುವ ಸಾಧ್ಯತೆ ಇದೆ.  ಜೂ.20ರವರೆಗೂ ದ.ಕ ಜಿಲ್ಲೆ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಕೆಲವೊಂದು ನಿರ್ಧಿಷ್ಟ ವಿಚಾರಗಳಿಗೆ ಸಡಿಲಿಕೆ ಮಾಡಿ ದ.ಕ ಜಿಲ್ಲೆ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ.  ಕೆಲ ಕೈಗಾರಿಕೆ ಸೇರಿ ಕೆಲವೊಂದು ನಿರ್ಬಂಧ ಸಡಿಲಿಸಿ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ.

ಯಾದಗಿರಿ ಜಿಲ್ಲೆಯಲ್ಲಿ ಒಂದು ವಾರ ಲಾಕ್​ಡೌನ್​

ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಮಾಡಿದ್ದಾರೆ.  ಯಾದಗಿರಿ ‌ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಮತ್ತೆ ಮೂರು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ 14 ರ ಬೆಳಿಗ್ಗೆ 6 ಗಂಟೆ ವರಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ.  ಹಾಲು, ಆಸ್ಪತ್ರೆ ಹಾಗೂ ತುರ್ತು ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಮದ್ಯಮಾರಾಟ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.
Youtube Video

ಮೈಸೂರಿನಲ್ಲಿ ಅನ್​ಲಾಕ್ ಸಾಧ್ಯತೆ

ಮೈಸೂರಿನಲ್ಲಿ ಇನ್ನು ಒಂದು ವಾರ ಮನೆ ಮನೆ ಸರ್ವೆ ಹಾಗೂ ಹಳ್ಳಿಗಳ ಕಡೆಗೆ ಡಾಕ್ಟರ್ ನಡಿಗೆ ಮುಂದುವರೆಯಲಿದೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಹೇಳಿದ್ದಾರೆ. ಮೈಸೂರಿನಲ್ಲಿ 82 ಬ್ಲಾಕ್ ಫಂಗಸ್‌ಗಳು ಇದೆ. ಇದರಲ್ಲಿ 10 ಡೆತ್ ಕೇಸ್‌ಗಳು. ಮೂರು ದಿನಕ್ಕಾಗುವಷ್ಟು ಔಷಧಿಗಳಿವೆ. ಪ್ರತಿ ದಿನ ಸೋಂಕು, ಬ್ಲಾಕ್ ಫಂಗಸ್ ಕಡಿಮೆ ಆಗ್ತಿದೆ. ದಿನೇ ದಿನೇ ಪಾಸಿಟಿವಿಟಿ ರೇಟ್ ಕಡಿಮೆ ಆಗ್ತಿದೆ. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಸೋಂಕು ಇಳಿಮುಖ ಆಗ್ತಿದೆ. ಈ ತಿಂಗಳ ಅಂತ್ಯಕ್ಕೆ ಬಹುತೇಕ ಸೋಂಕು ಕಡಿಮೆ ಆಗಲಿದೆ. ಆರ್‌ಟಿಪಿಸಿಆರ್ ಟೆಸ್ಟ್ ಕೂಡ ಡಬ್ಬಲ್ ಆಗಿದೆ ಎಂದು ಡಿಸಿ ಹೇಳಿದ್ದಾರೆ.
Published by: Latha CG
First published: June 10, 2021, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories