HOME » NEWS » State » HERE IS A STORY OF AN INSPIRING BODY BUILDER MANOJ MUKUNDA FROM BANGALORE HTV AE

ಆಸ್ಟ್ರೇಲಿಯಾದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ವಜ್ರಕಾಯ ಮನೋಜ್ ಮುಕುಂದ..!

ಕ್ಷಯ ರೋಗದ ಜತೆಗೆ ಇತರೆ ಆರೋಗ್ಯ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಬೆಂಗಳೂರಿನ ಹುಡುಗ ಈಗ ಖ್ಯಾತ ಬಾಡಿ ಬಿಲ್ಡರ್​. ಕೇವಲ 45 ಕೆಜಿ ತೂಕವಿದ್ದ ಮನೋಜ್​ ಕುಟುಂಬದವರ ಸಹಕಾರ ಹಾಗೂ ಪೋತ್ಸಾಹದಿಂದ ಆಸ್ಟೇಲಿಯಾಗೆ ಹೋಗಿ ಅಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸುವಷ್ಟು ಬೆಳೆದಿದ್ದಾರೆ. ಇಲ್ಲಿದೆ ಸಾಕಷ್ಟು ಮಂದಿಗೆ ಪ್ರೇರಣೆಯಾಗುವ ಯುವಕನ ಕತೆ.

news18-kannada
Updated:February 17, 2021, 3:59 PM IST
ಆಸ್ಟ್ರೇಲಿಯಾದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ವಜ್ರಕಾಯ ಮನೋಜ್ ಮುಕುಂದ..!
ಮನೋಜ್​ ಮುಕುಂದ
  • Share this:
ಬಾಡಿ ಬಿಲ್ಡಿಂಗ್‍ನಲ್ಲಿ ಹೆಚ್ಚು ಸದ್ದು ಮಾಡಿರುವ ಭಾರತೀಯರು ವಿರಳ. ಆದರೆ ಕನ್ನಡದ ಹುಡುಗನೊಬ್ಬ ದೂರದ ಆಸ್ಟ್ರೇಲಿಯಾಗೆ ತೆರಳಿ, ಅಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆ ವಜ್ರಕಾಯನ ಹೆಸರು ಮನೋಜ್ ಮುಕುಂದ. ಹೌದು, ಮೂಲತಃ ಬೆಂಗಳೂರಿನ ಮನೋಜ್ ಮುಕುಂದ, 2012ರಲ್ಲಿ ಉನ್ನತ ಶಿಕ್ಷಣ ಪಡೆದು ನಂತರ ಇಲ್ಲಿಯೇ ಕೆಲ ತಿಂಗಳ ಕಾಲ ಕೆಲಸ ಮಾಡಿದರಂತೆ. ಆದರೆ ಮೊದಲಿಂದಲೂ ಬಾಡಿ ಬಿಲ್ಡಿಂಗ್ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದ ಕಾರಣ, ಅದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಅನ್ನೋ ಗಟ್ಟಿ ಮನಸ್ಸು ಮಾಡಿದ್ದಾರೆ. ಆ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಡಿ ಬಿಲ್ಡಿಂಗ್ ಹಾಗೂ ಡಯಟ್ ಸಂಬಂಧಿಸಿದ ಹಲವಾರು ಕೋರ್ಸ್‍ಗಳಿರುವ ಬಗ್ಗೆ ಮಾಹಿತಿ ಪಡೆದು, ಅಲ್ಲಿಗೆ ಹೋದರಂತೆ ಮನೋಜ್. 

`ನನಗೆ ಟಿಬಿ ಇತ್ತು, ಜತೆಗೆ ಇತರೆ ಆರೋಗ್ಯ ಸಮಸ್ಯೆಯಿಂದಾಗಿ ಕೇವಲ 45 ಕೆಜಿ ತೂಕವಿದ್ದೆ. ಅಣ್ಣ, ಅಪ್ಪ, ಅಮ್ಮ ಎಲ್ಲರೂ ತುಂಬ ಪೋತ್ಸಾಹ ನೀಡಿದರು. 12ನೇ ವಯಸ್ಸಿನಿಂದಲೇ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರೂ, ಕ್ರಮೇಣ ಬಾಡಿ ಬಿಲ್ಡಿಂಗ್‍ನತ್ತ ಹೆಚ್ಚು ಗಮನ ಹರಿಸತೊಡಗಿದೆ. ನನಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿ ಆಸ್ಟ್ರೇಲಿಯಾಗೆ ಹೊರಟೆ' ಎನ್ನುತ್ತಾರೆ ಮನೋಜ್.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


ಆಸ್ಟ್ರೇಲಿಯಾದಲ್ಲಿ ವರ್ಕೌಟ್, ಡಯಟ್‍ಗೆ ಸಂಬಂಧಿಸಿದ ಹಲವು ಕೋರ್ಸ್‍ಗಳನ್ನು ಮುಗಿಸಿಕೊಂಡು ಭಾರತಕ್ಕೆ ವಾಪಸ್ಸಾದ ಮನೋಜ್, ಇಲ್ಲೂ ಸೆಮಿನಾರ್ ನಡೆಸಿದರು. ಆ ಮೂಲಕ ತಾವು ಅಲ್ಲಿ ಗಳಿಸಿದ್ದ ವಿದ್ಯೆಯನ್ನು ಇಲ್ಲೂ ಹಂಚುವ ಕೆಲಸ ಮಾಡಿದರು. ಅದಕ್ಕೆ ಕಾರಣ ದಕ್ಷಿಣ ಭಾರತದಲ್ಲಿ ಹೆಚ್ಚು ಮಂದಿ ಬಾಡಿ ಬಿಲ್ಡಿಂಗ್‍ನಲ್ಲಿ ಸುದ್ದಿ ಮಾಡದೇ ಇರುವುದು.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


ಹೀಗಾಗಿಯೇ ಮುಂದೆ ಬೆಂಗಳೂರಿಗೆ ವಾಪಸ್ಸಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತರಬೇತಿ ನೀಡಬೇಕು, ಆ ಮೂಲಕ ವಿಶ್ವ ಭೂಪಟದಲ್ಲಿ ತಮ್ಮಂತೆಯೇ ಹಲವಾರು ಭಾರತೀಯರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಆಸೆ ಮನೋಜ್ ಅವರದು.
Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


ಆಸ್ಟ್ರೇಲಿಯಾದಲ್ಲಿ ಕೇವಲ ಕೋರ್ಸ್‍ಗಳನ್ನು ಮಾತ್ರ ಮಾಡಿಲ್ಲ, ಬದಲಾಗಿ ಮನೋಜ್ ಅವರು ಕಳೆದ ನಾಲ್ಕು ವರ್ಷಗಳಲ್ಲಿ 9 ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲೂ ಪಾಲ್ಗೊಂಡು, ಎಲ್ಲದರಲ್ಲೂ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ನಡೆದ ಆಸ್ಟ್ರೇಲಿಯಾ  ನ್ಯಾಷನಲ್ ಚಾಂಪಿಯನ್‍ ಶಿಪ್ 2020 ಕಿರೀಟವನ್ನೂ ಮನೋಜ್ ಮುಡಿಗೇರಿಸಿಕೊಂಡಿದ್ದಾರೆ.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


`ಕೊರೋನಾದಿಂದಾಗಿ 100 ದಿನಗಳ ಕಾಲ ಆಸ್ಟ್ರೇಲಿಯಾದಲ್ಲೂ ಲಾಕ್‍ಡೌನ್ ಘೋಷಿಸಲಾಗಿತ್ತು. ಹೀಗಾಗಿ ಜಿಮ್‍ಗಳೂ ಬಂದ್ ಆಗಿದ್ದವು. ಆದರೆ ನಾನು ಮನೆಯಲ್ಲಿಯೇ ವರ್ಕೌಟ್ ಮಾಡುತ್ತಿದ್ದೆ. ಪ್ರತಿದಿನ 15ರಿಂದ 20 ಕಿಲೋಮೀಟರ್ ವಾಕ್ ಮಾಡುತ್ತಿದ್ದೆ.  ಹೀಗೆ ಲಾಕ್‍ಡೌನ್ ನಡುವೆಯೂ ಫಿಟ್ ಆಗಿದ್ದು, ನವೆಂಬರ್​ನಲ್ಲಿ ಲಾಕ್‍ಡೌನ್ ಅನ್ನು ತೆಗೆಯಲಾಯಿತು. ಬಳಿಕ ಡಿಸೆಂಬರ್​ನಲ್ಲಿ ಚಾಂಪಿಯನ್‍ಶಿಪ್ ನಡೆಯಿತು' ಎಂದು ಕೊರೋನಾ ಸಮಯದಲ್ಲೂ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ ಮನೋಜ್.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


ಇಂಜುರಿ ಇಲ್ಲದೇ ವರ್ಕೌಟ್ ಹೇಗೆ ಮಾಡುವುದು, ಡಯಟ್ ಹೇಗಿರಬೇಕು, ಎಷ್ಟು ನೀರು ಕುಡಿಯಬೇಕು, ಒಬ್ಬರಿಗೆ ಸೊಂಟದ ಭಾಗ ದೊಡ್ಡದಾಗಿರುತ್ತೆ ಮತ್ತೊಬ್ಬರಿಗೆ ಮತ್ತೊಂದು ಸಮಸ್ಯೆ ಇರುತ್ತೆ, ಹೀಗೆ ಬೇರೆ ಬೇರೆ ಸಮಸ್ಯೆಗಳಿರುವವರಿಗೆ ಹೇಗೆ ವರ್ಕೌಟ್ ರೂಟೀನ್ ಇರಬೇಕು, ಎಲ್ಲದರ ಹಿಂದೆಯೂ ವಿಜ್ಞಾನವಿರುತ್ತೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಮನೋಜ್ ನೀಡುತ್ತಾರೆ.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


`ಬಯೋಪ್ರಾಕ್ಟೀಷನಿಸ್ಟ್, ನ್ಯೂಟ್ರಿಷನಲಿಸ್ಟ್ ಕೋರ್ಸ್‍ಗಳನ್ನು ನಾನು ಕೇವಲ ಓದಿಲ್ಲ, ಬದಲಾಗಿ ನನ್ನ ಮೇಲೇ ಪ್ರಯೋಗ ಮಾಡಿಕೊಂಡಿದ್ದೇನೆ, ಅದರಲ್ಲಿ ಯಶಸ್ಸು ಕಂಡಿದ್ದೇನೆ. ಸಾಧಿಸಲೇಬೇಕು ಅಂತ ಮನಸ್ಸು ಮಾಡಿಕೊಂಡರೆ ಎಂತಹ ಪರಿಸ್ಥಿತಿಯಲ್ಲೂ ಕನಸನ್ನು ನನಸು ಮಾಡಿಕೊಳ್ಳಬಹುದು. ಪ್ರತಿ ಬಾರಿ ಬಿದ್ದಾಗಲೂ ಏಳಬೇಕು, ಯಾರೂ ಮಾಡಲಾಗದ ಕೆಲಸಗಳನ್ನು ನಾನು ಮಾಡಬೇಕು, ಯಾರೂ ನಡೆಯದ ದಾರಿಯಲ್ಲಿ ನಾನು ನಡೆಯಬೇಕು ಆಗಲೇ ಏನಾದರೂ ಸಾಧಿಸಲು ಸಾಧ್ಯ..' ಎಂದು ಹೇಳಿಕೊಳ್ಳುತ್ತಾರೆ ಮನೋಜ್ ಮುಕುಂದ.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


`ಭಾರತದಲ್ಲಿ ಸಾಮಾನ್ಯವಾಗಿ ಅನ್ನ ಮಾಡಿದ ಬಳಿಕ ತಾಸುಗಟ್ಟಲೆ ಹೊರಗಡೆ ಇಡಲಾಗುತ್ತದೆ. ಆದರೆ ಅನ್ನ ಸಿದ್ದಪಡಿಸಿ 20 ನಿಮಿಷಗಳಲ್ಲೇ ನೂರಾರು ಪಟ್ಟು ಪ್ಯಾಥೋಜೆನ್ಸ್ ಹೆಚ್ಚಾಗುತ್ತವೆ, ಇನ್ನು 3 ತಾಸುಗಳಲ್ಲಿ ಬರೋಬ್ಬರಿ 50 ಸಾವಿರಕ್ಕೂ ಅಧಿಕ ಪ್ಯಾಥೊಜೆನ್ಸ್ ಹೆಚ್ಚಾಗುತ್ತವೆ. ಅದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಅದು ಇದು ಅಂತ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಚಪಾತಿ ಆರೋಗ್ಯಕ್ಕೆ ಒಳ್ಳೆಯದು ಅಂತ ಹೆಚ್ಚು ಚಪಾತಿ ತಿನ್ನುತ್ತೇವೆ. ಅಷ್ಟು ಚಪಾತಿ ಹಿಟ್ಟು ನಮಗೆ ಅಷ್ಟೊಂದು ಪ್ರೋಟೀನ್ ಕೊಡುತ್ತಾ? ಅಂತ ಯೋಚನೆ ಮಾಡಬೇಕು. ಗುಡ್ ಫ್ಯಾಟ್ಸ್, ಪ್ರೋಟೀನ್, ಯಾವ ದೇಹಕ್ಕೆ ಎಷ್ಟು ಬೇಕು, ಹೇಗೆ ಸೇವಿಸಬೇಕು ಎಂಬುದರ ಪರಿಣಿತಿ ಪಡೆದಿದ್ದೇನೆ. ದೇಹದ ಆರೋಗ್ಯ ಮಾತ್ರವಲ್ಲ ಮನಸ್ಸಿನ ಆರೋಗ್ಯವೂ ಅಷ್ಟೇ ಮುಖ್ಯ' ಎಂದು ಉತ್ತಮ ಆರೋಗ್ಯಕ್ಕಾಗಿ ಹಲವರಲ್ಲಿರುವ ತಪ್ಪು ಮಾಹಿತಿಯನ್ನು ಒಂದೊಂದಾಗಿ ತಿಳಿಸುತ್ತಾರೆ ಮನೋಜ್ ಮುಕುಂದ.

Body Builder, Manoj Mukunda, Manoj Mukund, Singapore, Karnataka, ಬಾಡಿ ಬಿಲ್ಡರ್​, ಮನೋಜ್​ ಮುಕುಂದ, ಬಾಡಿ ಬಿಲ್ಡರ್​ ಮನೋಜ್​ ಮುಕುಂದ
ಮನೋಜ್​ ಮುಕುಂದ


ಇನ್ನು ಮನೋಜ್ ಅವರಿಗೆ ಈ ವರ್ಷವೂ ಕೆಲ ಸ್ಪರ್ಧೆಗಳಿವೆಯಂತೆ. ಮೇ ತಿಂಗಳಲ್ಲಿ ನ್ಯೂಜಿಲೆಂಡ್‍ನಲ್ಲಿ ಒಂದು ಸ್ಪರ್ಧೆಯಿದ್ದು, ಇನ್ನೂ ಕೆಲ ಸರ್ಟಿಫಿಕೇಷನ್ ಕೋರ್ಸ್‍ಗಳೂ ಬಾಕಿಯಿವೆಯಂತೆ. ಆ ಬಳಿಕ ಮತ್ತೆ ಭಾರತಕ್ಕೆ ವಾಪಸ್ಸಾಗಿ ಜನರಿಗೆ ಹೊಸ ಮಾದರಿಯ ಮಾಹಿತಿಯುಕ್ತ ಹಾಗೂ ಮಾನಸಿಕ, ದೈಹಿಕ ಆರೋಗ್ಯಯುಕ್ತ ಮಾದರಿ ಜೀವನವನ್ನು ಹೇಳಿಕೊಡುವ ಪ್ಲ್ಯಾನ್ ಅವರದು.
Published by: Anitha E
First published: February 17, 2021, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories