Turkey Earthquake: ಟರ್ಕಿಯಲ್ಲಿ ಸಿಲುಕಿರೋ ಕನ್ನಡಿಗರಿಗಾಗಿ ಹೆಲ್ಪ್​​ಲೈನ್ ಆರಂಭ

ಟರ್ಕಿ ಭೂಕಂಪ

ಟರ್ಕಿ ಭೂಕಂಪ

ಇಲ್ಲಿನ ಜನರು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರೆ, ನಮ್ಮ ಸರ್ಕಾರವು ಅವರನ್ನು ತಲುಪಲು ಪ್ರಯತ್ನಿಸುತ್ತದೆ. ಅಗತ್ಯವಿದ್ರೆ ಅಲ್ಲಿರುವ ಜನರು ಭಾರತಕ್ಕೆ ಕರೆತರಲು ಎಲ್ಲಾ ಅಗತ್ಯ ಸಹಾಯವನ್ನು ಸರ್ಕಾರ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • Share this:

ಬೆಂಗಳೂರು: ಟರ್ಕಿಯಲ್ಲಿ ಭೀಕರ ಭೂಕಂಪನ (Turkey Eartquake) ಉಂಟಾಗಿದ್ದು, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಭೂಕಂಪನದಿಂದ ತತ್ತರಿಸಿರುವ ಟರ್ಕಿಗೆ ಭಾರತ (India) ಸಹಾಯದ ಹಸ್ತ ಚಾಚಿದ್ದು, ಆಹಾರ ಸಾಮಗ್ರಿ, ಔಷಧಿ ಸೇರಿದಂತೆ ಮೂಲಭೂತ ಅವಶ್ಯಕ ವಸ್ತುಗಳನ್ನು ರವಾನಿಸಿದೆ. ಭೂಕಂಪನ ಉಂಟಾದ ಸ್ಥಳದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಸರ್ಕಾರ ಮುಂದಾಗಿದೆ. ಅದೇ ರೀತಿ ಕರ್ನಾಟಕ ಸರ್ಕಾರ (Karnataka Government) ಸಹ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿ ಆರಂಭಿಸಿದ್ದು, 080-22340676 ಸಂಖ್ಯೆಯನ್ನು ನೀಡಿದೆ.


ಭಾರತದ ರಾಯಭಾರಿ ಕಚೇರಿ ಜೊತೆಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಟರ್ಕಿಯಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ನೆರವು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಕನ್ನಡಿಗರ ಮಾಹಿತಿ ಸಂಗ್ರಹ


ಸಹಾಯವಾಣಿ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ಭೂಕಂಪ ಪೀಡಿತ ಟರ್ಕಿಯಲ್ಲಿ ಸಿಲುಕಿರುವ ರಾಜ್ಯದ ಜನರ ನೆರವಿಗೆ ಸರ್ಕಾರ ಬರಲಿದೆ. ಅಲ್ಲಿನ ಕನ್ನಡಿಗರ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ. ಸಹಾಯವಾಣಿಯನ್ನು ಸಹ ಆರಂಭಿಸಲಾಗುವುದು ಎಂದು ಹೇಳಿದ್ದರು.


ಟರ್ಕಿ ಭೂಕಂಪ


ಭಾರತಕ್ಕೆ ಕರೆತರಲು ಎಲ್ಲಾ ಅಗತ್ಯ ಸಹಾಯ


ಇಲ್ಲಿನ ಜನರು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರೆ, ನಮ್ಮ ಸರ್ಕಾರವು ಅವರನ್ನು ತಲುಪಲು ಪ್ರಯತ್ನಿಸುತ್ತದೆ. ಅಗತ್ಯವಿದ್ರೆ ಅಲ್ಲಿರುವ ಜನರು ಭಾರತಕ್ಕೆ ಕರೆತರಲು ಎಲ್ಲಾ ಅಗತ್ಯ ಸಹಾಯವನ್ನು ಸರ್ಕಾರ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.


ಎರಡು ತುಂಡಾದ ಟರ್ಕಿಯ ಏರ್‌ಪೋರ್ಟ್‌ ರನ್‌ವೇ!


ಪ್ರಬಲ ಭೂಕಂಪದ ಅಟ್ಟಹಾಸಕ್ಕೆ ಟರ್ಕಿ ಮತ್ತು ಸಿರಿಯಾ (Turkey Earthquake) ಅಕ್ಷರಶಃ ತತ್ತರಿಸಿ ಹೋಗಿದೆ. ಭೂಕಂಪದ ತೀವ್ರತೆಗೆ (Earthquake) ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.


ಲಕ್ಷಾಂತರ ಮನೆಗಳು, ಕಟ್ಟಡಗಳು (Buildings) ಧರಾಶಾಹಿಯಾಗಿವೆ. ಮೂಕ ಪ್ರಾಣಿಗಳು (Animals) ಬದುಕಿಗಾಗಿ ವೇದನೆ ಪಡುತ್ತಿದೆ. ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ಕೋಟ್ಯಂತರ ಜನರು ಸಾಕಪ್ಪಾ ಸಾಕು ಅನ್ನೋ ಹಾಗೆ ಭೀತಿಯಿಂದಲೇ ಬದುಕುತ್ತಿದ್ದಾರೆ.




ನಾಲ್ಕು ಸಾವಿರಕ್ಕೂ ಅಧಿಕ ಜನರ ಸಾವು


ಹೌದು.. ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಮೂರು ಪ್ರಬಲ ಭೂಕಂಪಗಳಿಂದ ಜನ ಜೀವನವೇ ಅಲ್ಲೋಲ ಕಲ್ಲೋಲವಾಗಿದ್ದು, ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟು ಮಾಡಿರೋದು ಮಾತ್ರವಲ್ಲದೇ ಇಲ್ಲಿಯವರೆಗೆ ಹತ್ತಿರತ್ತಿರ ಸುಮಾರು 4000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.


7.8 ತೀವ್ರತೆಯ ಪ್ರಬಲ ಭೂಕಂಪದ ನಂತರ ಡಜನ್‌ಗಟ್ಟಲೆ ಅವಘಡಗಳು ಸಂಭವಿಸಿದ್ದು, ಇದರ ತೀವ್ರತೆ ಎಷ್ಟಿತ್ತೆಂದರೆ ಟರ್ಕಿಯ ಹಟಾಯ್‌ ಪ್ರಾಂತ್ಯದಲ್ಲಿ ಇರುವ ವಿಮಾನ ನಿಲ್ದಾಣದಲ್ಲಿನ ಏಕೈಕ ರನ್‌ವೇ (Airport Runway) ಕೂಡ ಒಡೆದು ಇಬ್ಭಾಗವಾಗಿದೆ.


turkey earthquake india to send ndrf team, medical team for rescue
ಟರ್ಕಿಯಲ್ಲಿ ಭೂಕಂಪ


ಟರ್ಕಿಯ ಹಟಾಯ್ ಪ್ರಾಂತ್ಯದಲ್ಲಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣದಲ್ಲಿ ಇರುವ ಏಕೈಕ ರನ್‌ವೇ ಕೂಡ ಭೂಕಂಪದ ಅಬ್ಬರಕ್ಕೆ ಒಡೆದು ಹೋಗಿದ್ದು, ರನ್‌ವೇ ಎರಡು ಭಾಗವಾಗಿ ಹೋಗಿರುವುದರಿಂದ ಬಳಸಲು ಅಸಾಧ್ಯ ಎನ್ನುವಷ್ಟರ ಮಟ್ಟಿದೆ ಹಾಳಾಗಿದೆ.


ಇದನ್ನೂ ಓದಿ:  Turkey Earthquake: ಭೂಕಂಪಕ್ಕೆ ಇಸ್ಲಾಮಿಕ್ ಸ್ಟೇಟ್‌ನ 'ಪ್ರವೇಶ ದ್ವಾರ' ಧ್ವಂಸ!


ಅತಿದೊಡ್ಡ ಭೂಕಂಪ


ಸೋಮವಾರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪವು ದಶಕದಲ್ಲೇ ಸಂಭವಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪವಾಗಿದೆ ಎಂದು ಟರ್ಕಿ ದೇಶದ ಅಧ್ಯಕ್ಷರು ತಿಳಿಸಿದ್ದು, ಭೂಕಂಪ ಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಈ ಭೂಕಂಪ ಟರ್ಕಿಯಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳ ಪೈಕಿ ಅತಿ ದೊಡ್ಡದಾಗಿದೆ

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು