ಕೊರೋನಾ ಮತ್ತು ನೆರೆಗೆ ನಲುಗಿದ ಕೊಡಗು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಹಾಯಹಸ್ತ

ಸಂಕಷ್ಟಕ್ಕೆ ಸಿಲುಕಿರುವ ಕೆಲ ಕುಟುಂಬಗಳಿಗೆ ಕೊಡಗಿನ ವಿಶಾಲ್ ಶಿವಪ್ಪ ಮತ್ತವರ ತಂದೆ ವಿನೋದ್ ಶಿವಪ್ಪ ಸಹಾಯಹಸ್ತ ಚಾಚಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡಿದ್ದಾರೆ.

news18-kannada
Updated:August 12, 2020, 11:34 AM IST
ಕೊರೋನಾ ಮತ್ತು ನೆರೆಗೆ ನಲುಗಿದ ಕೊಡಗು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಹಾಯಹಸ್ತ
ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡಿರುವುದು
  • Share this:
ಬೆಂಗಳೂರು(ಆ.12): ಒಂದೆಡೆ ಕೊರೋನಾ ಅಟ್ಟಹಾಸ, ಮತ್ತೊಂದೆಡೆ ನೆರೆ, ಈ ಎರಡೂ ಸಮಸ್ಯೆಗಳಿಂದಲೂ ಕೊಡಗು ಜಿಲ್ಲೆ ನಲುಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಮಳೆ ಹಾಗೂ ನೆರೆಯಿಂದಲೂ ಸಮಸ್ಯೆಗಳು ಹೆಚ್ಚುತ್ತಿವೆ. ಹೀಗಾಗಿ ಕೊಡಗು ಜಿಲ್ಲೆಯ ಜನತೆಗೆ ದಿಕ್ಕೇ ತೋಚದಂತಾಗಿದೆ. ಇದುವರೆಗೆ 742 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 11 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಕೆಲ ಕುಟುಂಬಗಳಿಗೆ ಕೊಡಗಿನ ವಿಶಾಲ್ ಶಿವಪ್ಪ ಮತ್ತವರ ತಂದೆ ವಿನೋದ್ ಶಿವಪ್ಪ ಸಹಾಯಹಸ್ತ ಚಾಚಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ನೀಡಿದ್ದಾರೆ. ಕೆಲ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪ್ರತಿದಿನ 5 ರಿಂದ 10 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಹೋಗುವಂತಹ ಪರಿಸ್ಥಿತಿ ಇತ್ತು. ಹಾಗೇ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೂ ಸಹ ಪ್ರತಿದಿನ ಹತ್ತಾರು ಕಿಲೋಮೀರ್ ಕಾಲ್ನಡಿಗೆಯಲ್ಲೇ ತೋಟಗಳಿಗೆ ತೆರಳಬೇಕಿತ್ತು. ಅಂತಹ ಕೆಲ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರನ್ನು ಗುರುತಿಸಿದ ವಿನೋದ್ ಶಿವಪ್ಪ ಹಾಗೂ ವಿಶಾಲ್ ಶಿವಪ್ಪ ಇಂದು ಸೈಕಲ್ ವಿತರಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ: ಇಡೀ ದಿನ ಕ್ಯೂ ನಿಂತರೂ ಒಬ್ಬ ರೈತನಿಗೆ ಎರಡೇ ಚೀಲ

ಹಾಗಂತ ಇವರು ಈ ರೀತಿ ಸಹಾಯ ಹಸ್ತ ಚಾಚುತ್ತಿರುವುದು ಇದೇ ಮೊದಲೇನಲ್ಲ. ವಿನೋದ್ ಶಿವಪ್ಪ ಅವರ ತಂದೆ ಬೆಟ್ಟಗೇರಿ ಎಸ್ಟೇಟ್​​​ನ ಮಾಲೀಕರಾದ ದಿವಂಗತ ದೊಡ್ಡಮನೆ ಶಿವಪ್ಪ ಅವರ ಕಾಲದಿಂದಲೂ ಹೀಗೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಹೆಸರಾಂತ ಕಾಫಿ ಪ್ಲ್ಯಾಂಟರ್​ ಆದ ದೊಡ್ಡಮನೆ ಶಿವಪ್ಪ ಅವರು ಫುಟ್ಬಾಲ್ ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದರು. ಹೀಗಾಗಿಯೇ ಕಳೆದ 24 ವರ್ಷಗಳಿಂದ ಡಿ. ಶಿವಪ್ಪ ಮೆಮೋರಿಯಲ್ ಸ್ಟೇಟ್ ಲೆವೆಲ್ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಮೆಂಟ್ಅನ್ನು ಆಯೋಜಿಸಲಾಗುತ್ತಿದೆ.

ರಾಜ್ಯಾದ್ಯಂತ 20ಕ್ಕೂ ಹೆಚ್ಚು ತಂಡಗಳು ಕೊಡಗಿನಲ್ಲಿ ನಡೆಯುವ ಈ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತವೆ. ಆದರೆ ಈ ವರ್ಷ ಕೊರೋನಾದಿಂದಾಗಿ ಪಂದ್ಯಾವಳಿ ತಡವಾಗಿದೆ. ಅದರ ನಡುವೆಯೇ ಈ ನೆರೆ ಸಮಸ್ಯೆ ಕೂಡ ಉಂಟಾಗಿರುವುದು ಕೊಡಗು ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡಿದೆ. ಅಜ್ಜ ಡಿ. ಶಿವಪ್ಪ ಕಾಲದಿಂದಲೂ ಸಮಾಜಮುಖಿ ಕೆಲಸಗಳಿಂದಲೇ ಹೆಸರುವಾಸಿಯಾಗಿರುವ ಈ ಕುಟುಂಬ ಈಗ ಅದೇ ಕೆಲಸಗಳನ್ನು ಮುಂದುವರಿಸಿದೆ. ಮುಂದೆಯೂ ಇದೇ ರೀತಿ ಜನರಿಗೆ ನೆರವಾಗುವ ಭರವಸೆ ವಿಶಾಲ್ ಶಿವಪ್ಪ ಅವರದು. ಅದೇನೇ ಇರಲಿ, ಕಷ್ಟಕಾಲದಲ್ಲಿ ಜನರಿಗೆ ನೆರವಾಗುವ ಮೂಲಕ ಎಲ್ಲರಿಗೂ ಈ ಕುಟುಂಬ ಮಾದರಿಯಾಗಿರುವುದಂತೂ ನಿಜ.
Published by: Latha CG
First published: August 12, 2020, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading