Helava ಸಮುದಾಯದ ಮಕ್ಕಳನ್ನ ಶಾಲೆಗೆ ಕರೆ ತಂದ ಶಿಕ್ಷಕ; ಯಾರು ಈ ಹೆಳವರು? ಎಲ್ಲಿರ್ತಾರೆ?

ಗದಗ ಜಿಲ್ಲೆಯ ಹುಲಕೋಟಿಯ ಕೃಷ್ಣಾ ಕಾಲೋನಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ (School Headmaster) ಎ.ವಿ.ಪ್ರಭು ಎಂಬವರು ಹೆಳವ ಸಮುದಾಯ ಮಕ್ಕಳನ್ನು ಶಾಲೆಗೆ ಕರೆ ತಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಕರ್ನಾಟಕದಲ್ಲಿರುವ (North Karnataka) ಹೆಳವ ಸಮುದಾಯ (Helava Community) ಸದ್ಯ ಅಳಿವಿನಂಚಿನಲ್ಲಿದೆ. ಈ ಸಮುದಾಯದ ಜನರು ಒಂದು ಸ್ಥಳದಲ್ಲಿ ಶಾಶ್ವತವಾಗಿ ನೆಲೆಯೂರಲ್ಲ. ಹಾಗಾಗಿ ಈ ಸಮುದಾಯದ ಮಕ್ಕಳು (Children) ಶಾಲೆಯ ಮುಖ ಕಾಣುವುದೇ ಇಲ್ಲ. ಇದೀಗ ಗದಗ ಜಿಲ್ಲೆಯ ಹುಲಕೋಟಿಯ ಕೃಷ್ಣಾ ಕಾಲೋನಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ (School Headmaster) ಎ.ವಿ.ಪ್ರಭು ಎಂಬವರು ಹೆಳವ ಸಮುದಾಯ ಮಕ್ಕಳನ್ನು ಶಾಲೆಗೆ ಕರೆ ತಂದಿದ್ದಾರೆ. ಮುಖ್ಯೋಪಾದ್ಯಯರ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿರುವ ಸ್ಥಳೀಯ ಶಾಸಕ, ಮಾಜಿ ಸಚಿವ ಹೆಚ್ ಕೆ  ಪಾಟೀಲ್ (Former Minister HK Patil) ಮಕ್ಕಳಿಗ ಪುಸ್ತಕ, ಬಟ್ಟೆ ಇತ್ಯಾದಿ ವಸ್ತುಗಳನ್ನು ದಾನಿಗಳ ಸಹಾಯದಿಂದ  ವಿತರಿಸಿದ್ದಾರೆ. ಹುಲಕೋಟೆಯಲ್ಲಿ (Hulakote) ಹೆಳವ ಸಮುದಾಯದ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ.

ಮುಖ್ಯೋಪಾಧ್ಯಾಯರಾದ ಎ.ವಿ.ಪ್ರಭು ಅವರು ಕರೆತಂದ ಮಕ್ಕಳಿಗೆ ಶಾಸಕರು, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್‌, ಶಾಲಾ ಬ್ಯಾಗ್‌, ಶೂ, ಬೆಲ್ಟ್‌, ನೆಕ್‌ಟೈ ಸೇರಿದಂತೆ ಇತರೆ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ಒದಗಿಸುವ ವ್ಯವಸ್ಥೆ ಮಾಡಿದ್ದಾರೆ. ಎಸ್‌ಡಿಎಂಸಿ ಸದಸ್ಯರು ಹೊಸದಾಗಿ ಬಂದ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ.

ಶಾಲೆಗೆ 23 ಮಕ್ಕಳು ದಾಖಲು

ಈ ಕುರಿತು ಮಾತನಾಡಿರುವ ಹೆಚ್.ಕೆ.ಪಾಟೀಲ್, ಮುಖ್ಯೋಪಾದ್ಯಯ ಪ್ರಭು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಸದ್ಯ ಶಾಲೆಗೆ ಹೆಳವ ಸಮುದಾಯದ 23 ಮಕ್ಕಳು ದಾಖಲಾಗಿವೆ. ಶಾಲೆಯಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಕ್ಕಳು ಶಾಲೆಗೆ ದಾಖಲಾಗಿರೋದು ಸಂತೋಷದ ವಿಚಾರ ಎಂದು ಹೇಳಿದ್ದಾರೆ.

helava community children joins school hulakoti gadag mrq
ಹೆಳವ ಸಮುದಾಯದ ಜನರು


ಇದನ್ನೂ ಓದಿ: Bengaluru Lalbagh: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

ಹೆಳವ ಸಮುದಾಯ ಒಂದು ನಿರ್ದಿಷ್ಟ ಸ್ಥಳದಲ್ಲಿ ವಾಸವಾಗಿರಲ್ಲ. ಹಾಗಾಗಿ ಈ ಕುಟುಂಬಗಳಿಗೆ ರಹವಾಸಿ ಪ್ರಮಾಣ ಪತ್ರ ನೀಡಲಾಗಲ್ಲ. ಬದಲಾಗಿ ವಲಸೆ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ದಾಖಲೆ ನೀಡಿ ತಾವು ತೆರಳುವ ಊರುಗಳಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಬಹುದು. ವಲಸೆ ಕುಟುಂಬಗಳಿಗಾಗಿ ಈ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.

ಪೋಷಕರನ್ನ ಭೇಟಿಯಾದ ಮುಖ್ಯೋಪಾಧ್ಯಯರು

ಹುಲಕೋಟಿಯ ಕೃಷ್ಣಾ ಕಾಲೋನಿಯಲ್ಲಿ ಹೆಳವ ಸಮುದಾಯದವರು ಗುಡಿಸಲು ಹಾಕಿಕೊಂಡಿದ್ದಾರೆ. ಕೆಲ ಮಕ್ಕಳು ಗುಡಿಸಲಿನ ಮುಂದೆ ಆಟ ಆಡುತ್ತಿರೋದು ನನಗೆ ಕಾಣಿಸಿತು. ಮಕ್ಕಳನ್ನು ನೋಡಿ ಅವರ ಪೋಷಕರನ್ನು ಭೇಟಿಯಾಗಿ ಶಿಕ್ಷಣದ ಮಹತ್ವ ತಿಳಿಸಲಾಯ್ತು. ನಂತರ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂದಾದರು ಎಂದು ಮುಖ್ಯೋಪಾಧ್ಯಯ ಪ್ರಭು ಹೇಳುತ್ತಾರೆ.

helava community children joins school hulakoti gadag mrq
ಹೆಳವ ಸಮುದಾಯದವರ ಬಳಿಯಲ್ಲಿರುವ ದಾಖಲೆಗಳು


ಯಾರು ಈ ಹೆಳವರು?

ಈ ಸಮುದಾಯದವರು ಶತಮಾನಗಳಿಂದಲೂ ಕುಟುಂಬಗಳ ವಂಶಾವಳಿಗಳನ್ನು ನಿಯತಕಾಲಿಕವಾಗಿ ಕಾಪಾಡಿಕೊಂಡು ಬಂದಿದೆ. ಸಂಪ್ರದಾಯಿಕ ಪದ್ಧತಿಯಲ್ಲಿ ಕುಟುಂಬದ ವಂಶವಾಳಿ ಇವರ ಬಳಿಯಲ್ಲಿರುತ್ತದೆ. ಸದ್ಯ ಈ ಸಮುದಾಯ ಅಳಿವಂಚಿನಲ್ಲಿದ್ದು, ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಹೆಳವ ಸಮುದಾಯವನ್ನು ವಂಶಾವಳಿಕಾರರು ಎಂದು ಕರೆಯುತ್ತಾರೆ. ಇವರ ನಿರ್ಧಿಷ್ಟ ಕುಟುಂಬಗಳ ಇಡೀ ವಂಶಾವಳಿ ಇರುತ್ತದೆ. ಇವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆಯಾ ಗ್ರಾಮಗಳಲ್ಲಿರುವ ಕುಟುಂಬದವರನ್ನು ಭೇಟಿ ಮಾಡಿ, ವಂಶಾವಳಿಯನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾರೆ.

helava community children joins school hulakoti gadag mrq
ಹೆಳವ ಸಮುದಾಯದವರ ಬಳಿಯಲ್ಲಿರುವ ದಾಖಲೆಗಳು


ಗಾಯನದ ಮೂಲಕ ವಂಶವೃಕ್ಷ ಹೇಳ್ತಾರೆ

ಈ ವಂಶಾವಳಿಯನ್ನು ಕೆಲವರು ಗಾಯನದ ಮೂಲಕ ಹೇಳುತ್ತಾರೆ. ಇವರ ಹೇಳೋದನ್ನು ಕೇಳೋದು ಚೆಂದ. ಬಹುತೇಕ ದಾಖಲೆಗಳು ಮರಾಠಿ ಮಿಶ್ರಿತ ಹಿಂದಿ ಭಾಷೆಯಲ್ಲಿರುತ್ತವೆ. ಎಲ್ಲಾ ಮಾಹಿತಿಯನ್ನು ವಂಶವೃಕ್ಷ ರೂಪದಲ್ಲಿ ದಾಖಲಿಸಿಕೊಂಡಿರುತ್ತಾರೆ.

ಇವರ ಬಳಿಯಲ್ಲಿರೋ ದಾಖಲೆ ನ್ಯಾಯಾಲಯದಲ್ಲಿ ಮಾನ್ಯ

ಇನ್ನೂ ಕೆಲವರು ತಮ್ಮ ವಂಶಾವಳಿಯನ್ನು ದಾಖಲಿಸಲು ಹೆಳವರನ್ನು ಪತ್ತೆ ಮಾಡಿ ಕರೆಸಿಕೊಳ್ಳುತ್ತಾರೆ. ಇವರ ಬಳಿಯಲ್ಲಿರುವ ದಾಖಲೆಗಳನ್ನು ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ಮಾನ್ಯ ಮಾಡಿರುವ ಉದಾಹರಣೆಗಳಿವೆ. ಭೂವ್ಯಾಜ್ಯಕ್ಕೆ ಸಂಬಂಧ ಪ್ರಕರಣಗಳಿರೋ ಜನರು ವಂಶಾವಳಿಗಳಿಗಾಗಿ ಇವರ ದಾಖಲೆಗಳನ್ನು ಸಾಕ್ಷಿಯಾಗಿ ನೀಡುತ್ತಾರೆ.

helava community children joins school hulakoti gadag mrq
ಹೆಳವ ಸಮುದಾಯದ ಜನರು


ಇದನ್ನೂ ಓದಿ: Mandya Crime News: ವೇಶ್ಯೆಯ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್; ಬಯಲಾಯ್ತು ಮರ್ಡರ್ ಮಿಸ್ಟ್ರಿ

ಇವರ ಆದಾಯ ಏನು?

ಪ್ರತಿ ವರ್ಷಕ್ಕೊಮ್ಮೆ ಬರುವ ಈ ಹೆಳವ ಸಮುದಾಯ ವಂಶ ವೃಕ್ಷ ಹೇಳಿ ಆ ಕುಟುಂಬದಿಂದ ಹಣ ಪಡೆದುಕೊಳ್ಳುತ್ತಾರೆ.  ರೈತ ಕುಟುಂಬದವರಾಗಿದ್ರೆ ದವಸ ಧಾನ್ಯ, ಕೋಳಿ, ಮೇಕೆ, ಹಸುಗಳನ್ನು ಸಹ ನೀಡುತ್ತಾರೆ. ಕೆಲ ಹೆಳವರು ತಮ್ಮ ಜಾನುವಾರಗಳಿಗೆ ಬೇಕಾಗವ ಮೇವು ಸಹ ಸಂಗ್ರಹಿಸುತ್ತಾರೆ. ಇನ್ನು ಹಬ್ಬದ ವೇಳೆ ಆಗಮಿಸಿದ್ದರೆ ಹೊಸ ಬಟ್ಟೆ ಸಹ ಕೇಳಿ ಪಡೆದುಕೊಂಡು ಹೋಗುತ್ತಾರೆ.
Published by:Mahmadrafik K
First published: