HOME » NEWS » State » HEBBALA POLICE ARREST TWO THIEVES WHO ROBBED HOME KMTV SESR

ಮನೆ ಕೀಯನ್ನು ಹೂವಿನ ಕುಂಡ, ಕಿಟಕಿ, ಗೋಡೆಯಲ್ಲಿ ಬಚ್ಚಿಡುತ್ತೀರಾ? ಹಾಗಾದ್ರೆ ಈ ಖದೀಮರ ಬಗ್ಗೆ ಇರಲಿ ಎಚ್ಚರ

ಮನೆ ಮುಂಭಾಗದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಗೋಡೆಯ ಮೇಲೆ ಕೀ ಪತ್ತೆಯಾಗಿದೆ. ನಂತರ ಕೀ ಮೂಲಕ ಬಾಗಿಲು ತೆರೆದು ಕಳ್ಳತನ ಮಾಡಿರುವುದಾಗಿ ಇವರು ಬಾಯಿಬಿಟ್ಟಿದ್ದಾರೆ. 

news18-kannada
Updated:February 24, 2021, 8:28 PM IST
ಮನೆ ಕೀಯನ್ನು ಹೂವಿನ ಕುಂಡ, ಕಿಟಕಿ, ಗೋಡೆಯಲ್ಲಿ ಬಚ್ಚಿಡುತ್ತೀರಾ? ಹಾಗಾದ್ರೆ ಈ ಖದೀಮರ ಬಗ್ಗೆ ಇರಲಿ ಎಚ್ಚರ
ಬಂಧಿತ ಆರೋಪಿಗಳೊಂದಿಗೆ ಹೆಬ್ಬಾಳ ಪೊಲೀಸರು
  • Share this:
ಕುಟುಂಬ ಸದಸ್ಯರಿಗೆ ಅನುಕೂಲವಾಗಲಿ ಎಂದು ಮನೆಯಿಂದ ಹೊರಹೋಗುವಾಗ ಮನೆ ಬೀಗದ ಕೀಯನ್ನು ಯಾರಿಗೂ ಕಾಣುವುದಿಲ್ಲ ಎಂದು ಗೋಡೆ ಮೇಲೆ, ಕಿಟಕಿ ಬಳಿ, ಹೂವಿನ ಕುಂಡದಲ್ಲಿ ಕೆಲವರು ಬಚ್ಚಿಡುತ್ತಾರೆ. ಇದರಿಂದ ಮನೆಯ ಇತರ ಸದಸ್ಯರಿಗೆ ತೊಂದರೆಯಾಗುವುದಿಲ್ಲ ಎಂಬ ಲೆಕ್ಕಾಚಾರ. ಅಷ್ಟೇ ಅಲ್ಲದೇ ಈ ರಹಸ್ಯ ತಾಣಗಳು ಮನೆಯವರಿಗೆ ಮಾತ್ರ  ತಿಳಿದಿರುತ್ತದೆ ಎಂಬ ಭಾವನೆ  ನಿಮಗಿದ್ದರೆ, ನೀವು ತಪ್ಪು ತಿಳಿದಿದ್ದೀರಾ. ಕಾರಣ ಅಂತಹ ಜಾಗಗಳನ್ನು ನೋಡಿ ಮನೆಗೆ ಕನ್ನ ಹಾಕುವ ಕಳ್ಳರ ಗ್ಯಾಂಗ್​ವೊಂದನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಸಾಮಾನ್ಯವಾಗಿ ಮನೆಗಳಲ್ಲಿ  ಬಳಸುವ ಇಂತಹ ರಹಸ್ಯ  ತಂತ್ರವನ್ನೇ ಬಂಡಾವಳ ಮಾಡಿಕೊಂಡ ಈ ಗ್ಯಾಂಗ್​ ಲಕ್ಷಾಂತರ ಹಣ ದೋಚಿದ್ದಾರೆ. 

ಸುನೀಲ್ ಮತ್ತು ಹೇಮಂತ್ ಬಂಧಿತ ಆರೋಪಿಗಳು. ನಗರದ ಹೆಬ್ಬಾಳ ನಿವಾಸಿಗಳಾದ ಇವರು ಮನೆ ಕಳ್ಳತನ ಮಾಡುವುದರಲ್ಲಿ ನಿಸ್ಸೀಮರಂತೆ. ಅದು ಯಾವ ಮಟ್ಟಿಗೆ ಎಂದರೆ ಹಾಕಿದ ಬೀಗ ಹಾಕಿದಂತೆ ಇದ್ದರೂ ಮನೆಯಲ್ಲಿದ್ದ ಚಿನ್ನಾಭರಣ, ಹಣಕಾಸು ಮಾತ್ರ ಮಂಗಮಾಯವಾಗಿರುತ್ತದೆ. ಒಮ್ಮೆ ಮನೆ ಮಾಲೀಕರು ಮನೆಯೆಲ್ಲಾ ಶೋಧ ನಡೆಸಿದರೂ ಕಳ್ಳರು ಹೇಗೆ ಮನೆಯೊಳಗೆ ಬಂದಿದ್ದಾರೆ ಎನ್ನುವುದೇ ಗೊತ್ತಾಗದಂತೆ  ಚಲಾಕಿತನ ತೋರಿಸುತ್ತಿದ್ದರಂತೆ.

ಈ ಇಬ್ಬರು ಹೆಬ್ಬಾಳ ವ್ಯಾಪ್ತಿಯ ಸೀತಪ್ಪ ಲೇಔಟ್ ನ ರಾಜೇಶ್ವರಿ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ರಾಜೇಶ್ವರಿ ಅವರು, ಮನೆ ಬೀಗ ಹಾಕಿವನ್ನು ಹೊರ ಹೋಗುವ ಮುನ್ನ ಮನೆಯ ಗೋಡೆ ಮೇಲೆ ಕೀ ಇಟ್ಟು ಹೋಗಿದ್ದರಂತೆ. ಪುನಃ ವಾಪಸ್ ಬಂದು ಮನೆಯಲ್ಲಿ ನೋಡುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತಂತೆ. ನಂತರ ರಾಜೇಶ್ವರಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ದೂರು ಪಡೆದು ಆರೋಪಿಗಳಿಗೆ ಬಲೆ ಬೀಸಿದ್ದು, ಬಂಧಿಸಿದ್ದಾರೆ. ಈ ಇಬ್ಬರು  ಹೆಬ್ಬಾಳದ ಪಿಳೇಕಮ್ಮ ದೇವಾಲಯದ ಬಳಿ ಕದ್ದ ವಸ್ತುಗಳ ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನು ಓದಿ: ಕೇಂದ್ರದ ‘ಹೈಡ್ರೋಜನ್‌ ಇಂಧನ ಮಿಷನ್’ನ ಸಾಧಕ-ಬಾಧಕಗಳೇನು? ಇಲ್ಲಿದೆ ವಿವರಣೆ

ರಾಜೇಶ್ವರಿ ಮನೆ ಬೀಗ ಹಾಕಿ ತೆರಳಿದ ನಂತರ ಮನೆ ಮುಂಭಾಗದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಗೋಡೆಯ ಮೇಲೆ ಕೀ ಪತ್ತೆಯಾಗಿದೆ. ನಂತರ ಕೀ ಮೂಲಕ ಬಾಗಿಲು ತೆರೆದು ಕಳ್ಳತನ ಮಾಡಿರುವುದಾಗಿ ಇವರು ಬಾಯಿಬಿಟ್ಟಿದ್ದಾರೆ.

ಆರೋಪಿ ಸುನೀಲ್ ಲಾರಿ ಚಾಲಕನಾಗಿದ್ದು ಕುಣಿಗಲ್ ನಲ್ಲಿನ ಕೊಲೆ ಪ್ರಕರಣದ ಅರೋಪಿಯಾಗಿದ್ದ ಎಂದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ‌‌‌. ಮತ್ತೊಬ್ಬ ಆರೋಪಿ ಹೇಮಂತ್ ಹೆಬ್ಬಾಳದ ಡಕಾಯಿತಿ ಕೇಸ್ ನಲ್ಲಿ ಆರೋಪಿಯಾಗಿದ್ದನಂತೆ. ಸದ್ಯ ಬಂಧಿತರಿಂದ 10 ಲಕ್ಷ ಮೌಲ್ಯದ 199 ಗ್ರಾಂ ಚಿನ್ನಾಭರಣವನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Published by: Seema R
First published: February 24, 2021, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories