HD Kumaraswamy-Bommai: ಈ ಕಡೆ ಬಾ ಕುಮಾರಣ್ಣ! ಮಳೆ ಹಾನಿ ಪರಿಶೀಲನೆ ವೇಳೆ ಮುನಿಸು ಮರೆತು ಒಂದಾದ ಜನನಾಯಕರು!

ಸಿಎಂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ, ಸಚಿವರಿಂದ ರಾಮನಗರದಲ್ಲಿ ಮಳೆ ಹಾನಿ ಪರಿಶೀಲನೆ ವೇಳೆ ಎಲ್ಲಾ ಜನನಾಯಕರು ಮುನಿಸು ಮರೆತು ಒಂದಾದರು. ಈ ವೇಳೆ ಈ ಕಡೆ ಬಾ ಕುಮಾರಣ್ಣ ಎಂದು ಸಚಿವ ಅಶ್ವಥ್ ನಾರಾಯಣ ಕರೆದರು. ಪರಿಶೀಲನೆ ನಂತರ ಸಿಎಂ ಕಾರಿನಲ್ಲೇ ಎಲ್ಲಾ ನಾಯಕರು ಜೊತೆಯಾಗಿ ತೆರಳಿದರು.

ರಾಮನಗರದಲ್ಲಿ ಪ್ರವಾಹ

ರಾಮನಗರದಲ್ಲಿ ಪ್ರವಾಹ

  • Share this:
ಕಂಡುಕೇಳರಿಯದ ವರುಣಾರ್ಭಟಕ್ಕೆ ರೇಷ್ಮೆನಗರಿ ಸಾಕ್ಷಿಯಾಗಿದೆ. ಕುಂಭಧ್ರೋಣ ಮಹಾಮಳೆಗೆ ರೇಷ್ಮೆನಗರಿ ರಾಮನಗರ (Ramanagara)  ಅಕ್ಷರಶಃ ತತ್ತರಿಸಿ ಹೋಗಿದೆ. ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಜಲಪ್ರಳಯವಾಗಿದ್ದು (Heavy Rain) ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜನಜಾನುವಾರುಗಳಿಗೆ (Cattle) ಹಾನಿಯಾಗಿದೆ. ಭಾರಿ ಮಳೆಗೆ ಕೆರೆಕೋಡಿ ಒಡೆದು ನಗರದ ಜನವಸತಿ ಪ್ರದೇಶದಲ್ಲಿ ಭಾರಿ ಅವಾಂತರ (Problem) ಸೃಷ್ಠಿಯಾಗಿದೆ. ವಾಹನಗಳೆಲ್ಲಾ (Vehicle) ಸಂಪೂರ್ಣ ಜಲಮಯವಾಗಿದೆ. ರಸ್ತೆಯಲ್ಲಿದ್ದ ವಾಹನಗಳು ಮುಳುಗಿದೆ. ರಾಮನಗರ, ಚನ್ನಪಟ್ಟಣ ತಾಲೂಕುಗಳು ಅಕ್ಷರ ಸಹ ನೀರಿನಲ್ಲಿ ಮುಳುಗುವ ಹಂತ ತಲುಪಿವೆ. ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai), ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.

ರಾಮನಗರ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಬಯಲುಸೀಮೆ ಜಿಲ್ಲೆ ಮಾತ್ರವಲ್ಲದೇ, ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದರಿಂದ ಯಾವುದೇ ಕಾರಣಕ್ಕೂ ಅತಿವೃಷ್ಟಿಯಾಗುವುದೇ ಇಲ್ಲ ಎಂಬ ಜನರ ನಂಬಿಕೆಯನ್ನು ವರಣುದೇವ ಹುಸಿ ಮಾಡಿದ್ದಾನೆ. ಕಳೆದ 30ವರ್ಷಗಳಲ್ಲೇ ಹೆಚ್ಚು ಮಳೆದಿದ್ದ ರಾಮನಗರ ಇದೀಗ ವಾಡಿಕೆಗಿಂತ ಶೇ.700ರಷ್ಟು ಅಧಿಕ ಮಳೆ ದಾಖಲಾಗಿದೆ.

ಮುನಿಸು ಮರೆತು ಮಳೆಹಾನಿ ವೀಕ್ಷಣೆ
ಪ್ರವಾಹ ಪೀಡಿತ ರಾಮನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿಯವರಿಗೆ ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ್ ಸಾಥ್ ನೀಡಿದ್ರು. ಎಲ್ಲಾ ಮುನಿಸು ಮರೆತು ಜೊತೆಯಾಗಿ ಪರಿಸ್ಥಿತಿ ಅವಲೋಕಿಸಿದರು.

Heavy rains in Ramanagara Peoples lives are disrupted across the district vehicles submerged rain damage observed by CM Minister
ರಾಮನಗರದಲ್ಲಿ ಸಿಎಂ ಬೊಮ್ಮಾಯಿ ಮಳೆಹಾನಿ ವೀಕ್ಷಣೆ


ಇದನ್ನೂ ಓದಿ: ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಈ ಕಡೆ ಬಾ ಕುಮಾರಣ್ಣ ಎಂದ ಅಶ್ವಥ್ ನಾರಾಯಣ
ಸಿಎಂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ, ಸಚಿವರಿಂದ ಮಳೆ ಹಾನಿ ಪರಿಶೀಲನೆ ವೇಳೆ ಎಲ್ಲಾ ಜನನಾಯಕರು ಮುನಿಸು ಮರೆತು ಒಂದಾದರು. ಈ ವೇಳೆ ಈ ಕಡೆ ಬಾ ಕುಮಾರಣ್ಣ ಎಂದು ಸಚಿವ ಅಶ್ವಥ್ ನಾರಾಯಣ ಕರೆದರು. ಇನ್ನು ಕುಮಾರಸ್ವಾಮಿಯೇ ಬೊಮ್ಮಾಯಿಯವರಿಗೆ ಎಲ್ಲಾ ವಿವರಿಸಿದರು. ಭಕ್ಷಿಪುರದ ಮಳೆ ಹಾನಿ ಪರಿಶೀಲನೆ ನಂತರ ಸಿಎಂ ಕಾರಿನಲ್ಲೇ ಎಲ್ಲಾ ನಾಯಕರು ಜೊತೆಯಾಗಿ ತೆರಳಿದರು.

Heavy rains in Ramanagara Peoples lives are disrupted across the district vehicles submerged rain damage observed by CM Minister
ರಾಮನಗರದಲ್ಲಿ ಮಳೆಯಾರ್ಭಟ


ರಾಮನಗರದ ಬಹುತೇಕ ಕೆರೆಗಳು ಭರ್ತಿ
ಭಾರೀ ಮಳೆಯಿಂದ ರಾಮನಗರ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದೆ. ಹಲವು ಗ್ರಾಮಗಳಲ್ಲಿ ರೈತರ ಜಮೀನು ಹಾಗೂ ಮನೆಗಳಿಗೆ ಹಾನಿಯಾಗಿದೆ. ನಗರದಲ್ಲಿ ಪ್ರವಾಹಕ್ಕೆ ಸಾವಿರಾರು ಮನೆಗಳು ಮುಳುಗಡೆಯಾಗಿ ಜನರು ಸಂತ್ರಸ್ತರಾಗಿದ್ದಾರೆ.

ಕೆರೆಕೋಡಿ ಒಡೆದು ಅವಾಂತರ
ಭಕ್ಷಿಕೆರೆ ಕೋಡಿ ಒಡೆದ ಪರಿಣಾಮ ಟಿಪ್ಪು ನಗರ, ಅರ್ಕಾವತಿ ಬಡಾವಣೆ, ಗೌಸಿಯಾನಗರ ಸೇರಿ ಬಹುತೇಕ ವಸತಿ ಪ್ರದೇಶಗಳು ಜಲಾವೃತವಾಗಿವೆ. ಬೈಕ್, ಕಾರುಗಳು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಜನರನ್ನು ಎಸ್.ಡಿ.ಆರ್.ಎಫ್ ತಂಡ ಬೋಟ್ ಸಹಾಯದಿಂದ ಕಾಳಜಿ ಕೇಂದ್ರಕ್ಕೆ ಕಳುಹಿಸಿದೆ.

ರಸ್ತೆಯಲ್ಲಿ ಮುಳುಗಿ ನಿಂತ ವಾಹನಗಳು
ಮಹಾಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರುನಿಂತ ಪರಿಣಾಮ ಹಲವು ವಾಹನಗಳು ಮುಳುಗಡೆಯಾಗಿದ್ದು ಬೆಂಗಳೂರು-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಬೆಳೆ 259 ಹೆಕ್ಟೇರ್ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳು 221 ಹೆಕ್ಟೇರ್ ಹಾಳಾಗಿದೆ.

Heavy rains in Ramanagara Peoples lives are disrupted across the district vehicles submerged rain damage observed by CM Minister
ರಾಮನಗರದಲ್ಲಿ ಮಳೆ


ರಾಮನಗರದಲ್ಲಿ 7 ಕಾಳಜಿ ಕೇಂದ್ರ ತೆರೆಯಲಾಗಿದ್ದು, 925 ಮಂದಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ 102 ಕೆರೆ ಭರ್ತಿಯಾಗಿದ್ದು ಅದರಲ್ಲಿ 81 ಕೆರೆ ಕೋಡಿ ಒಡೆದಿದೆ. ಇನ್ನು 30 ಕೆರೆಗಳಲ್ಲಿ ಅಲ್ಪಮಟ್ಟಿನ ಬಿರುಕು ಕಾಣಿಸಿಕೊಂಡಿದೆ. ಬರೋಬ್ಬರಿ 178 ವಿದ್ಯುತ್ ಕಂಬಗಳು ಧರೆಗುರುಳಿದೆ.

ಇದನ್ನೂ ಓದಿ: ಉಕ್ಕಿ ಹರಿದ ಪಯಸ್ವಿನಿ ನದಿ, ಕೆರಯಂತಾದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ, ಈ ಭಾಗದ ಶಾಲೆಗಳಿಗೆ ರಜೆ

10 ಸಾವಿರ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ
ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣದಿಂದ ತಕ್ಷಣಕ್ಕೆ ಹಾನಿಗೊಳಗಾದ ಕುಟುಂಬಕ್ಕೆ ಸಿಎಂ ಬೊಮ್ಮಾಯಿ 10 ಸಾವಿರ ತಾತ್ಕಾಲಿಕ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಸರ್ಕಾರದಿಂದಲೇ ಒಂದು ತಿಂಗಳ ಪಡಿತರ ನೀಡುವುದಾಗಿ ತಿಳಿಸಿದ್ದಾರೆ. ಮಳೆಹಾನಿ ಸಂಪೂರ್ಣ ಸರ್ವೇ ಮಾಡಿ ವರದಿಯನ್ನು ಸರ್ಕಾರಕ್ಕೆ ತಿಳಿಸುವಂತೆ ಸೂಚಿಸಿದ್ದಾರೆ.

ವಾಹನ ಸವಾರರಿಗೆ ಕುಮಾರಸ್ವಾಮಿ ಮನವಿ
ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಅಂತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
Published by:Thara Kemmara
First published: