Chikkamagaluru Rain: ಮಲೆನಾಡಲ್ಲಿ ಮುಂದುವರೆದ ಮಳೆಯ ರೌದ್ರನರ್ತನ, ವರುಣನ ಅಬ್ಬರಕ್ಕೆ ಮನೆ ಕುಸಿತ

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಶೃಂಗೇರಿ ತಾಲೂಕಿನ ಬೆಳಂದೂರು ಸಮೀಪದ ಗ್ರಾಮದ ಸಾಹಿತಿ ಗಣೇಶ್ ಹೆಗಡೆ ನಿವಾಸ ಕವಿ ಕುಟಿರ ಮನೆಯ ಮೇಲೆ ಗುಡ್ಡಕುಸಿದು ಬಾರೀ ಪ್ರಮಾಣದ ಅನಾಹುತ ಸಂಭವಿಸಿದೆ. ಮೂಡಿಗೆರೆ ತಾಲ್ಲೂಕು ಹೆಬ್ಬರಿಗೆ ಗ್ರಾಮದ ಲಲಿತ ಮಂಜುನಾಥ್ ಎಂಬುವರಿಗೆ ಸೇರಿದ ಮನೆ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿ ಗೋಡೆ ಕುಸಿದು ಬಿದ್ದಿದೆ.

ಮಳೆಯಿಂದ ಕುಸಿದು ಬಿದ್ದ ಮನೆ

ಮಳೆಯಿಂದ ಕುಸಿದು ಬಿದ್ದ ಮನೆ

  • Share this:
ಚಿಕ್ಕಮಗಳೂರು: ಮಲೆನಾಡು (Malenadu) ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು (Heavy Rain), ಶೃಂಗೇರಿ (Sringeri) ತಾಲೂಕಿನ ಬೆಳಂದೂರು ಸಮೀಪದ ಗ್ರಾಮದ ಸಾಹಿತಿ (Writer) ಗಣೇಶ್ ಹೆಗಡೆ ನಿವಾಸ ಕವಿ ಕುಟಿರ ಮನೆಯ (House) ಮೇಲೆ ಗುಡ್ಡಕುಸಿದು ಭಾರೀ ಪ್ರಮಾಣದ ಅನಾಹುತ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗಣೇಶ್ ಹೆಗಡೆಯವರ ಕವಿಕುಟಿರ ನಿವಾಸದ ಹಿಂಭಾಗದಲ್ಲಿ ಬಾರೀ ಪ್ರಮಾಣದಲ್ಲಿ ಧರೆಕುಸಿದು ಧರೆಯ ಮಣ್ಣು ಮತ್ತು ನೀರು (Water) ಮನೆಗೆ ನುಗ್ಗಿ ಅಪಾರ ಹಾನಿಯಾಗಿದೆ. ಮನೆ ಹಿಂಭಾಗದ ಧರೆ ಕುಸಿಯುವ ಭೀತಿ ಹಿನ್ನಲೆಯಲ್ಲಿ ಮೊದಲೇ ಮನೆ ಖಾಲಿ ಮಾಡಿದ್ದರಿಂದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

ಲೈಬ್ರರಿಯಲ್ಲಿದ್ದ ಪುಸ್ತಕಗಳು ಮಣ್ಣುಪಾಲು

ಗಣೇಶ್ ಹೆಗಡೆ ಅವರು ಆಗುಂಬೆ ಸಿರಿನೋಡ, ಸೌಭಾಗ್ಯ ವಂಚಿತೆ ಕಾದಂಬರಿ ಸೇರಿದಂತೆ ಅನೇಕ ಕೃತಿಗಳನ್ನು ಬರೆದಿದ್ದು, ಇವರ ಸಾಹಿತ್ಯ ಕೃಷಿಗೆ ಡಾಕ್ಟರೇಟ್ ಪದವಿ ದೊರೆತಿದೆ. ಮನೆ ಲೈಬ್ರೆರಿಯಲ್ಲಿದ್ದ ಅನೇಕ ಪುಸ್ತಕಗಳು ಹಾಗೂ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಮಣ್ಣು ಪಾಲಾಗಿದೆ. ಮನೆಯ ಒಳಗಡೆ ಮಣ್ಣು ಮತ್ತು ಕೆಸರು ನೀರು ಶೇಖರಣೆಗೊಂಡಿದ್ದು, ಪುಸ್ತಕಗಳನ್ನು ಹೊರತರಲು ಗಣೇಶ್ ಹೆಗಡೆ ಪರದಾಡುತ್ತಿದ್ದಾರೆ. ತಾವು ಬರೆದ ಅನೇಕ ಕಾದಂಬರಿಗಳು ಸೇರಿದಂತೆ ಅನೇಕ ಪುಸ್ತಕಗಳು ಮಣ್ಣು ಪಾಲಾ ಗಿದ್ದು, ಪುಸ್ತಕಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಮಳೆಯಿಂದಾಗಿ ಕುಸಿದು ಬಿದ್ದ ಮನೆ


ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶೃಂಗೇರಿ ನೇರಳೆಕೊಡಿಗೆ ಗ್ರಾಮದ ಬಳಿ ಶೃಂಗೇರಿ ಆಗುಂಬೆ ಸಂಪರ್ಕ ಕಲ್ಪಿಸುವ ರಾಜ್ಯ ಹೆ ದ್ದಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಮಳೆಯ ಅಬ್ಬರಕ್ಕೆ ರಸ್ತೆ 100 ಅಡಿಗಳಷ್ಟು ಕೊಚ್ಚಿ ಹೋಗಿದೆ. ಇದರಿಂದ ಶೃಂಗೇರಿ ಆಗುಂಬೆ ಸಂಪರ್ಕ ಕಡಿತಗೊಂಡಿದೆ. ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಮೂಡಿಗೆರೆ, ಕೊಪ್ಪ, ಶೃಂಗೇರಿ ಭಾಗದ ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ: CM Bommai: ಚಾರ್ಲಿಗೆ ಕಣ್ಣೀರು ಹಾಕುವ ತಾವು ಜನರ ಕಷ್ಟಕ್ಯಾಕೆ ಮರುಗುವುದಿಲ್ಲ? ಸಿಎಂಗೆ ಕಾಂಗ್ರೆಸ್ ಟಾಂಗ್

 ರಾತ್ರಿ ಇಡೀ ಸುರಿದ ಮಳೆ

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೂ ಭಾರೀ ಮಳೆಯಾಗಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲ್ಲೂಕು ಬಿಇಓಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದರು. ಮೂಡಿಗೆರೆ ತಾಲ್ಲೂಕು ಬಿಳ್ಳೂರು ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಪರದಾಡುವಂತಾಗಿತ್ತು.

ಮಳೆಯಿಂದಾಗಿ ಕುಸಿದ ರಸ್ತೆ


ರಸ್ತೆ ಸಮೀಪವೇ ಭೂ ಕುಸಿತ

ಮೂಡಿಗೆರೆ ತಾಲ್ಲೂಕು ದೇವರಮನೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಗುರುವಾರ ಒಂದೇ ದಿನ ೩೫೦ ಮಿ.ಮೀ.ಗಿಂತ ಅಧಿಕ ಮಳೆಯಾಗಿದೆ. ಬೈದುವಳ್ಳಿ ಗ್ರಾಮದ ರಸ್ತೆ ಮೇಲೆ ಮಳೆನೀರು ಹರಿದು ರಸ್ತೆಗೆ ಹಾನಿಯಾಗಿದೆ. ಕಳಸ ತಾಲ್ಲೂಕು ಬಲಿಗೆ ಗ್ರಾಮದ ಬಳಿ ರಸ್ತೆ ಸಮೀಪ ಭೂಕುಸಿತ ಉಂಟಾಗಿ ಬೃಹತ್ ಬಂಡೆ ಕಲ್ಲುಗಳು ಜಾರಿ ಬಿದ್ದಿದೆ. ಮೂಡಿಗೆರೆ ತಾಲ್ಲೂಕು ಹೆಬ್ಬರಿಗೆ ಗ್ರಾಮದ ಲಲಿತ ಮಂಜುನಾಥ್ ಎಂಬುವರಿಗೆ ಸೇರಿದ ಮನೆ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿ ಗೋಡೆ ಕುಸಿದು ಬಿದ್ದಿದೆ. ಭಾರೀ ಮಳೆಗೆ ಈ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಪಾಯದ ಮಟ್ಟ ತಲುಪಿದ ನದಿಗಳು

ಭಾರೀ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿ ಯುತ್ತಿವೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಕಳಸ ಭಾಗದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅಲ್ಲಲ್ಲಿ ಧರೆಕುಸಿದಿದೆ. ಭಾರೀ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಗಳು ಧರೆಗುರುಳಿ ವಿದ್ಯುತ್ ವ್ಯತ್ಯಾಯಗೊಂಡಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಮಳೆಯಿಂದಾಗಿ ಗುಡ್ಡ ಕುಸಿತ


ಬಯಲು ಸೀಮೆ ಭಾಗದಲ್ಲಿ ತಗ್ಗಿದ ಅಬ್ಬರ

ಇನ್ನೂ ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದ್ದು ಚಿಕ್ಕಮಗಳೂರು ಸುತ್ತಮುತ್ತ, ಕಡೂರು ತರೀಕೆರೆ ಭಾಗದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮೋಡ ಕವಿದ ವಾತವರಣ ಮುಂದೂವರೆದಿದ್ದು, ಮತ್ತೇ ಮಳೆಯಾಗುವ ಸಾದ್ಯತೆ ಇದೆ.

ಇದನ್ನೂ ಓದಿ: Karnataka Dams Water Level: ಕಾವೇರಿಯ ಅಬ್ಬರಕ್ಕೆ ತುಂಬುತ್ತಿದೆ KRS ಡ್ಯಾಂ: ಉಳಿದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು, ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಮಳೆಯಿಂದ ಬೇಸತ್ತಿರುವ ಜನರು ಮಳೆ ಕಡಿಮೆ ಯಾದರೇ ಸಾಕು ಎಂದು ಮುಗಿಲು ನೋಡುವಂತಾಗಿದ್ದು, ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ.
Published by:Annappa Achari
First published: