Landslide: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆ, ದತ್ತಪೀಠ ರಸ್ತೆ ಕುಸಿತ; ಆತಂಕದಲ್ಲಿ ಕಾಫಿನಾಡಿಗರು

ಗಾಡಿ ಟರ್ನ್ ಆಗಿ ಹತ್ತಿರ ಬರುವವರೆಗೂ ರಸ್ತೆ ಕುಸಿದಿರುವುದು ಗೊತ್ತಾಗಲ್ಲ. ಅಷ್ಟೆ ಅಲ್ಲದೇ ಹೊರಜಿಲ್ಲೆ-ರಾಜ್ಯದ ಪ್ರವಾಸಿಗರಿಗೆ ಈ ಮಾರ್ಗದ ಪರಿಚಯ ಇರುವುದಿಲ್ಲ. ಏನಾದರೂ ಅನಾಹುತವಾದರೆ ಪರಿಣಾಮ ದೊಡ್ಡದ್ದಾಗಿರುತ್ತೆ.

ಭೂ ಕುಸಿತ

ಭೂ ಕುಸಿತ

  • Share this:
ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರಿನಲ್ಲಿನ (Chikkamagaluru) ಇನ್ನು ಪೂರ್ಣ ಪ್ರಮಾಣದಲ್ಲಿ ಮಳೆಗಾಲ (Rain Season) ಆರಂಭವೇ ಆಗಿಲ್ಲ. ಈಗಲೇ, ಆಗಾಗ್ಗೆ-ಅಲ್ಲಲ್ಲೇ ಸುರಿಯುವ ಮಳೆಗೆ ರಸ್ತೆಗಳು ಕುಸಿಯುತ್ತಿದ್ದು (Landslide) ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಸುರಿದ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ (Dattapeetha Route) ಅರ್ಧ ರಸ್ತೆಯೇ ಕುಸಿದು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತಪೀಠದ ಮಾರ್ಗದಲ್ಲಿ ರಸ್ತೆ ಕುಸಿತವಾಗಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಮುಳ್ಳಯ್ಯನಗಿರಿ, ದತ್ತಪೀಠದ ಸುತ್ತಮುತ್ತ ಸುರಿದ ಭಾರೀ ಮಳೆಯಿಂದ (Heavy Rain) ದತ್ತಪೀಠದ ಮುಖ್ಯರಸ್ತೆಯೇ ಅರ್ಧಕ್ಕೆ ಕಟ್ ಆಗಿ ಬಿದ್ದಿದೆ. ಸುಮಾರು 40-50 ಅಡಿ ರಸ್ತೆಯ ಕೆಳಭಾಗದ ಮಣ್ಣು ಸಂಪೂರ್ಣ ಕಳಚಿ ಬಿದ್ದಿದ್ದು ಮತ್ತೆ ದುರಸ್ಥಿ ಕಷ್ಟಸಾಧ್ಯ ಎಂಬಂತಹಾ ಸ್ಥಿತಿಯಲ್ಲಿದೆ.

ರಸ್ತೆ ಕಟ್ ಆಗಿರುವ ಬದಿಯ ಕೆಳಭಾಗದಲ್ಲಿ ಸಾವಿರಾರು ಅಡಿ ಪ್ರಪಾತವಿದೆ. ಅಲ್ಲಿಗೆ ಹೋಗಿ ಜೆಸಿಬಿಯಲ್ಲಿ ಕೆಲಸ ಮಾಡೋದು ಕೂಡ ಕಷ್ಟ. ಭೂಮಿಯ ಕೆಳಭಾಗದಿಂದ ಬಂದೋಬಸ್ತ್ ಮಾಡಿ ರಸ್ತೆ ದುರಸ್ಥಿ ಮಾಡುವುದನ್ನ ಅಸಾಧ್ಯ ಎಂದೇ ಹೇಳಬಹುದು.

ಕುಸಿಯುತ್ತಿರುವ ಮಣ್ಣು

ಆ ಮಟ್ಟಕ್ಕೆ ರಸ್ತೆ ಕಟ್ ಆಗಿ ಬಿದ್ದಿದೆ. ದತ್ತಪೀಠಕ್ಕೆ ಇರೋದು ಇದೊಂದೇ ಮಾರ್ಗ. ಈ ಮಾರ್ಗ ಬಿಟ್ಟಿರೆ ಬೇರೆ ಯಾವುದೇ ದಾರಿ ಇಲ್ಲ. ನಿತ್ಯ ರಾಜ್ಯ ಹಾಗೂ ಹೊರರಾಜ್ಯದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ರಸ್ತೆಯ ಕೆಳಭಾಗದಲ್ಲಿ ಮಣ್ಣು ಉದುರುವುದು ಇನ್ನೂ ನಿಂತಿಲ್ಲ.

Heavy rainfall Landslide in Dattapeetha Route Chikkamagaluru vctv mrq
ಭೂ ಕುಸಿತ


ಇದನ್ನೂ ಓದಿ:  Kodagu: ಪ್ರೀತಿಯಿಂದ ಬೆಳೆದಿದ್ದ ಶಿಬಿರವನ್ನು 400 ಕಿಲೋ ಮೀಟರ್ ದೂರದಿಂದ ಹುಡುಕಿ ಬಂದ ಕುಶ ಆನೆ 

ಕೂಡಲೇ ಸರ್ಕಾರ ಈ ರಸ್ತೆಯ ದುರಸ್ಥಿಗೆ ಕ್ರಮಕೈಗೊಳ್ಳದಿದ್ದರೆ ಬಹುಶಃ ಈ ರಸ್ತೆ ಸಂಪೂರ್ಣ ಕುಸಿತವಾಗಿ ಬಿದ್ದರೂ ಆಶ್ಚರ್ಯವಿಲ್ಲ. ಆದರೆ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ದತ್ತಪೀಠಕ್ಕೆ ರಸ್ತೆಯೇ ಇರೋದಿಲ್ಲ.

ವೇಗವಾಗಿ ಬಂದ್ರೆ ಅಪಾಯ ಕಟ್ಟಿಟ್ಟಬುತ್ತಿ

ದತ್ತಪೀಠಕ್ಕೆ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ಬರುತ್ತಾರೆ. ವೀಕೆಂಡ್‍ನಲ್ಲಿ ಸಾವಿರಾರು. ಅವರಲ್ಲಿ ಕೇರಳ, ಆಂಧ್ರ, ತಮಿಳುನಾಡಿ ಗಾಡಿಗಳೇ ಹೆಚ್ಚು. ಈಗ ಕುಸಿದಿರುವ ಜಾಗ ಹೋಗಿ-ಬರುವ ಎರಡೂ ಮಾರ್ಗದಲ್ಲೂ ಟರ್ನ್ ಇರುವಂತದ್ದು. ಹಾಗಾಗಿ, ಹೋಗಿ-ಬರುವ ವಾಹನಗಳು ಟರ್ನ್ ‍ನಲ್ಲಿ ಹಾರನ್ ಮಾಡಿಕೊಂಡು ವೇಗವಾಗಿ ಬಂದರೆ ಅಪಾಯ ಕಟ್ಟಿಟ್ಟಬುತ್ತಿ.

Heavy rainfall Landslide in Dattapeetha Route Chikkamagaluru vctv mrq
ಭೂ ಕುಸಿತ


ಗಾಡಿ ಟರ್ನ್ ಆಗಿ ಹತ್ತಿರ ಬರುವವರೆಗೂ ರಸ್ತೆ ಕುಸಿದಿರುವುದು ಗೊತ್ತಾಗಲ್ಲ. ಅಷ್ಟೆ ಅಲ್ಲದೇ ಹೊರಜಿಲ್ಲೆ-ರಾಜ್ಯದ ಪ್ರವಾಸಿಗರಿಗೆ ಈ ಮಾರ್ಗದ ಪರಿಚಯ ಇರುವುದಿಲ್ಲ. ಏನಾದರೂ ಅನಾಹುತವಾದರೆ ಪರಿಣಾಮ ದೊಡ್ಡದ್ದಾಗಿರುತ್ತೆ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ರಸ್ತೆಯ ದುರಸ್ಥಿ ಮಾಡಬೇಕಾದ ಅನಿವಾರ್ಯತೆ ಬಹಳಷ್ಟಿದೆ.

ಸ್ಥಳೀಯರಲ್ಲಿ ಆತಂಕ

ಜಿಲ್ಲೆಯಲ್ಲಿ ಇನ್ನೂ ಪೂರ್ಣಪ್ರಮಾಣದ ಮಳೆಗಾಲವೇ ಆರಂಭವಾಗಿಲ್ಲ. ಆಗಾಗ್ಗೆ ಸುರಿಯುವ ಸಾಧಾರಣ ಮಳೆಗೆ ರಸ್ತೆ ಬಂದ್ ಆಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಎರಡ್ಮೂರು ವರ್ಷಗಳಿಂದ ಭಾರೀ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದೆ. ಈ ಮಳೆಗಾಲದಲ್ಲಿ ಇನ್ನು ಯಾವ-ಯಾವ ಅನಾಹುತ ಸಂಭವಿಸುತ್ತೋ ಎಂದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

Heavy rainfall Landslide in Dattapeetha Route Chikkamagaluru vctv mrq
ಭೂ ಕುಸಿತ


ಅಪಾಯ ಸ್ಥಳಗಳ ಗುರುತು

ಒಟ್ಟಾರೆ, ಈ ವರ್ಷವೂ ಹೆಚ್ಚು ಮಳೆ ಇದೆ ಎಂದು ಈಗಾಗಲೇ ಜಿಲ್ಲಾಡಳಿತ ಜಿಪಿಆರ್‍ ಎಸ್, ಸ್ಯಾಟಲೈಟ್ ಹಾಗೂ ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಅಪಾಯದ ಗ್ರಾಮ, ಅಪಾಯದ ಸ್ಥಳಗಳನ್ನ ಗುರುತಿಸಲಾಗಿದೆ.

ಇದನ್ನೂ ಓದಿ:  Puttur: ಪುತ್ತೂರಿನಲ್ಲೊಂದು ಅವೈಜ್ಞಾನಿಕ ರೈಲ್ವೇ ಮೇಲ್ಸೇತುವೆ; ಎಚ್ಚರ ತಪ್ಪಿದ್ರೆ 50 ಅಡಿ ಆಳಕ್ಕೆ ಬೀಳ್ತೀರಿ

108 ಅಪಾಯದ ಸ್ಥಳವನ್ನ ಗುರಿತಿಸಿರೋ ಜಿಲ್ಲಾಡಳಿತ ಮಳೆಗಾಲವನ್ನ ಫೇಸ್ ಮಾಡೋದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ, ಪೂರ್ಣ ಪ್ರಮಾಣದ ಮಳೆಗಾಲ ಆರಂಭವಾಗುವ ಮುನ್ನವೇ ಸಾಧಾರಣ ಮಳೆಗೆ ರಸ್ತೆಗಳು ಕುಸಿಯುತ್ತಿರುವುದ ಕಂಡು ಜಿಲ್ಲೆಯ ಜನ ಈ ವರ್ಷದ ಮಳೆಗಾಲ ಹೇಗಿರುತ್ತೋ ಎಂದು ಚಿಂತಾಕ್ರಾಂತರಾಗಿದ್ದಾರೆ.
Published by:Mahmadrafik K
First published: