Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ; ನೆರೆಯ ಆತಂಕ

ಕೆಲವು ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜೂನ್ 25ರವರೆಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ನದಿಗಳಲ್ಲೂ ನೀರು ತುಂಬಿ ಹರಿಯಲಾರಂಭಿಸಿದೆ.

ಭಾರೀ ಮಳೆ, ನೆರೆಯ ಆತಂಕ

ಭಾರೀ ಮಳೆ, ನೆರೆಯ ಆತಂಕ

  • Share this:
ಉತ್ತರ ಕನ್ನಡ (ಜೂ 21):  ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಜಿಲ್ಲೆಯ ಹಲವೆಡೆ ಸೋಮವಾರ  ರಾತ್ರಿಯಿಂದ ಸುರಿಯಲು ಆರಂಭಿಸಿದೆ. ಮಳೆ (Rain) ಕೊಂಚ ಕೂಡ ಬಿಡುವು ನೀಡದೆ  ಮಂಗಳವಾರದವರೆಗೂ ಸುರಿದ ಕಾರಣ ಹೆದ್ದಾರಿ (Highway) , ಪಟ್ಟಣದ ರಸ್ತೆಗಳಲ್ಲೆಲ್ಲಾ ನೀರು ತುಂಬಿ  ವಾಹನಗಳ (Vehicles)  ಸಂಚಾರಕ್ಕೆ  ಅಡಚಣೆಯಾಗಿದೆ. ಕೆಲವೆಡೆ ನೆರೆಯ‌ ಆತಂಕ ಜನರಲ್ಲಿ ಶುರುವಾಗಿದೆ. ಇನ್ನು 2 ದಿನಗಳ ಕಾಲ ಮಳೆ ಜೋರಾಗಲಿದೆ ಎಂದು ಹವಾಮಾನ‌ ಇಲಾಖೆ (Meteorology Department) ತಿಳಿಸಿದೆ.

ಭಾರೀ ಮಳೆಗೆ ತತ್ತರಿಸಿದ ಜನ 

ಭರ್ಜರಿ ಮಳೆಗೆ ಬೇಸತ್ತ ಜನ. ಕೆಲವೆಡೆ ತುಂಬಿ‌ ಹರಿದ‌ ಮಳೆ ನೀರು.
ಸೋಮವಾರದಿಂದ ಆರಂಭವಾಗಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಕರಾವಳಿಯಲ್ಲಿ  ಜನಜೀವನ ಅಸ್ತವ್ಯಸ್ತವಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಗಳಿಗೆ ತೆರಳಲು ಕೂಡ ಜನರಿಗೆ ಮಳೆ ಅಡ್ಡಿಪಡಿಸಿತು. ಕರಾವಳಿಯ ಭಟ್ಕಳ, ಅಂಕೋಲಾ, ಕಾರವಾರದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಗ್ರಾಮೀಣ ರಸ್ತೆಗಳಲ್ಲೆಲ್ಲ ನೀರು ತುಂಬಿ ಓಡಾಡಲಾಗದ ಪರಿಸ್ಥಿತಿ ಎದುರಾಗಿದೆ.

ಹಲವು ಮನೆಗಳಿಗೂ ನೀರು ನುಗ್ಗಿ ಅವಾಂತರ

ಶಾಲಾ- ಕಾಲೇಜುಗಳ ವಾಹನಗಳು ಓಡಾಡಲಾಗದೆ. ಉದ್ಯೋಗಕ್ಕೆ ತೆರಳುವವರಿಗೆ ತೆರಳಲಾಗದಂತಾಗಿದೆ. ಹಲವೆಡೆ ರಸ್ತೆಗಳಲ್ಲಿ ಸೊಂಟದವರೆಗೂ ನೀರು ನಿಂತಿದ್ದು, ಕೆಲವು ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜೂನ್ 25ರವರೆಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ನದಿಗಳಲ್ಲೂ ನೀರು ತುಂಬಿ ಹರಿಯಲಾರಂಭಿಸಿದೆ. ಹೀಗಾಗಿ ತೀರ ಪ್ರದೇಶದ ಜನತೆ ಎಚ್ಚರ ವಹಿಸಬೇಕಿದೆ.

ಇದನ್ನೂ ಓದಿ: Viral Marksheet: ಗಣಿತದಲ್ಲಿ ಬರೀ 36 ಅಂಕ! IAS ಆಫೀಸರ್ SSLC ಮಾರ್ಕ್​ ಕಾರ್ಡ್ ವೈರಲ್

ಮಳೆಯಿಂದ ನೆರೆಯ ಆತಂಕ

ಪ್ರವಾಸಿಗರಿಗೆ ಈಗಾಗಲೇ ಜಿಲ್ಲಾಡಳಿತ ಕರಾವಳಿಯ ಕಡಲತೀರಗಳಿಗೆ, ಜಲಪಾತಗಳಿಗೆ ಭೇಟಿ ನೀಡದಂತೆ ಸೂಚಿಸಿದೆ. ಮೋಡ ಕವಿದ ವಾತಾವರಣದ ಜೊತೆಗೆ ಇನ್ನೂ ಮುಂದುವರಿದಿರುವ ಮಳೆಯಿಂದಾಗಿ ಈ ಬಾರಿಯೂ ನೆರೆಯ ಆತಂಕ ಸೃಷ್ಟಿಯಾದಂತಾಗಿದೆ.

ಕಳೆದ ಬಾರಿಯ ನೆರೆಯ ಹಾನಿಯಿಂದ ಇನ್ನು ಸುಧಾರಿಸಿ ಕೊಳ್ಳದ ಜನ 

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಭಾರೀ ಸುರಿದ ಭಾರೀ ಮಳೆಗೆ ಗಂಗಾವಳಿ ನದಿ ಮತ್ತು ಕಾಳಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿತ್ತು. ಈ ಭಾರೀ ಆರಂಭದಲ್ಲೇ ಮಳೆಯ ಆರ್ಭಟ ಜೋರಾಗಿದೆ. ಕಳೆದ ನಾಲ್ಕೈದು ದಿನ ಶಾಂತವಾಗಿದ್ದ ವರುಣ ನಿನ್ನೆಯಿಂದ ಏಕಾಏಕಿಯಾಗಿ ತನ್ನ ಆರ್ಭಟ  ಶುರು ಮಾಡಿಕೊಂಡಿದ್ದಾನೆ. ಕೆಲವು ಕಡೆ ನೀರು ನಿಂತು ನೆರೆಯ ವಾತಾವರಣ ಸೃಷ್ಟಿಯಾಯಿತು. ಇನ್ನು ಕೆಲವೆಡೆ ಸಣ್ಣಪುಟ್ಟ ನದಿಗಳು ಉಕ್ಕಿ ಹರಿಯಲಾರಂಭಿಸಿದವು ಇದ್ರಿಂದ ನದಿ ತಟದ ಜನರಲ್ಲಿ ಮತ್ತೆ ನೆರೆಯ ಆತಂಕ ಶುರುವಾಗಿದೆ.

ಇದನ್ನೂ ಓದಿ: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ

ಯಾವುದೇ ದೊಡ್ಡ ಪ್ರಮಾಣದ ಮಳೆ ಸುರಿದರು ಕೂಡಾ ಭಯ ಪಡೆದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕಳೆದ ಎರಡು ವರ್ಷದಲ್ಲಿ ಉಂಟಾದ ಪ್ರವಾಹ ಕಂಗಾಲು ಮಾಡಿದೆ. ಈಗ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದರು ಭಯ ಪಡುವಂತಾ ವಾತಾವರಣ ಸೃಷ್ಟಿಯಾಗಿದೆ. ಕಳೆದ ಭಾರಿಯಲ್ಲಿ ನೋಡ ನೋಡುತ್ತಲೇ ಉಂಟಾ ಪ್ರವಾಹದಿಂದ ಇನ್ನು ಚೇತರಿಕೆ ಕಾಣದ ನದಿ ತಟದ ಕುಟುಂಬಗಳು ಇವತ್ತಿನ ಮಳೆಗೆ ಮತ್ತೆ ಭಯಪಟ್ಟಿದ್ದಾರೆ.
Published by:Pavana HS
First published: