Bengaluru Rains: ವರುಣಾರ್ಭಟದಲ್ಲಿ ಕೊಚ್ಚಿ ಹೋಗ್ತಿದೆ ‘ಬ್ರ್ಯಾಂಡ್ ಬೆಂಗಳೂರು’; ಲೇಔಟ್, ರಸ್ತೆಗಳು ಜಲಾವೃತ

ಈ ಮೊದಲೇ ಜಲಾವೃತಗೊಂಡಿದ್ದ ರೈನ್​​ಬೋ ಲೇಔಟ್​ನಲ್ಲಿದ್ದ ನೀರು ಮೂರು ಪಟ್ಟು ಹೆಚ್ಚಳವಾಗಿದೆ. 15 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ನೀರು ತೆರವುಗೊಳಿಸಲಾಗ್ತಿದೆ. ಬೋಟ್ ಮೂಲಕ ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ (Bengaluru Rains) ರಭಸದಲ್ಲಿ ಬೆಂಗಳೂರಿನ ಬ್ರ್ಯಾಂಡ್ ಕೊಚ್ಚಿ ಹೋಗ್ತಿದೆ. ಬೆಳ್ಳಂದೂರಿನ ರಸ್ತೆಗಳ (Bellanduru Roads) ಮೇಲೆ ಎರಡರಿಂದ ಮೂರು ಅಡಿಯಷ್ಟು ನೀರು ಹರಿಯುತ್ತಿರುವ ಪರಿಣಾಮ ವಾಹನಗಳ (Vehicles) ಓಡಾಟವೇ ಕಷ್ಟವಾಗಿದೆ. ಬೊಮ್ಮನಹಳ್ಳಿ ಭಾಗದಲ್ಲಿ ಐಟಿ-ಬಿಟಿ ಕಂಪನಿಗಳೇ  (IT BT Company) ಹೆಚ್ಚಾಗಿದ್ದು, ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ (Bengaluru Traffic) ಉಂಟಾಗಿದೆ. ಇತ್ತ ಬೆಳಗ್ಗೆ ಏರ್​​ಪೋರ್ಟ್​ಗೆ (Bengaluru Airport Road) ಸಂಪರ್ಕ ಕಲ್ಪಿಸುವ ಮೇಕ್ರಿ ಸರ್ಕಲ್ ಅಂಡರ್​​ಪಾಸ್ (Mekri Circle Underpass) ಸಹ ಜಲಾವೃತಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಯ್ತು.

ಎರಡು ದಿನಗಳ ಹಿಂದೆ ಸಿಎಂಗೆ ಪತ್ರ ಬರೆದಿದ್ದ ಐಟಿ ಬಿಟಿ ಉದ್ಯಮಿಗಳು, ಮಳೆ ಅವಾಂತರದಿಂದ ಉದ್ಯೋಗಿಗಳು ಕಚೇರಿಗೆ ಬರಲು ಕಷ್ಟ ಆಗ್ತಿದೆ. ನಮಗೆ ₹255 ಕೋಟಿ ಲಾಸ್ ಆಗಿದೆ ಎಂದು ಸಿಎಂಗೆ ಖಾರವಾಗಿ ಪತ್ರ ಬರೆದಿದ್ದರು.

300ಕ್ಕೂ ಅಧಿಕ ಮನೆಗಳು ಜಲಾವೃತ

ಸರ್ಜಾಪುರ ರಸ್ತೆಯ ರೈನ್​​ಬೋ ಲೇಔಟ್​ನಲ್ಲಿರುವ (Rainbow Lauout) ಸುಮಾರು ಮುನ್ನೂರು ಮನೆಗಳು ಜಲಾವೃತಗೊಂಡಿವೆ. ರೈನ್​​ಬೋ ಲೇಔಟ್ ದ್ವೀಪದಂತಾಗಿದ್ದು, ಮನೆ ಮುಂದೆ ಪಾರ್ಕ್​ ಮಾಡಿದ್ದ ಕಾರ್​ಗಳು ಜಲಾವೃತಗೊಂಡಿವೆ. ಆಲನಾಯಕನಹಳ್ಳಿ , ಸೋಲುಕೆರೆ, ಜುನ್ನಸಂದ್ರದಲ್ಲಿವೆ ಕೆರೆಯ ಕೋಡಿ ಒಡೆದ ಪರಿಣಾಮ ಲೇಔಟ್​​ಗೆ ನೀರು ನುಗ್ಗಿದೆ.

heavy rainfall in Several parts of Bengaluru mrq
ಬೆಂಗಳೂರು ಮಳೆ


ಈ ಮೊದಲೇ ಜಲಾವೃತಗೊಂಡಿದ್ದ ರೈನ್​​ಬೋ ಲೇಔಟ್​ನಲ್ಲಿದ್ದ ನೀರು ಮೂರು ಪಟ್ಟು ಹೆಚ್ಚಳವಾಗಿದೆ. 15 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ನೀರು ತೆರವುಗೊಳಿಸಲಾಗ್ತಿದೆ. ಬೋಟ್ ಮೂಲಕ ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ:  CM Bommai: ನನ್ನ ಹೊಗಳಿದ್ರೆ, ನಿನ್ನ ಶಿಷ್ಯರನ್ನು ಬಿಡ್ತೇನೆ ಅಂದ್ಕೋಬೇಡ: ಕಾಂಗ್ರೆಸ್ ಶಾಸಕನಿಗೆ ಸಿಎಂ ಟಾಂಗ್

ಮಹದೇವಪುರದಲ್ಲಿಯೂ ಭಾರೀ ಮಳೆ

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದಾಗಿ ಜ್ಯೋತಿಪುರ, ಹಂಚರಹಳ್ಳಿ ಸಂಪೂರ್ಣ ಜಲಾವೃತಗೊಂಡಿದೆ. ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿದೆ. ಹೊಲ ಗದ್ದೆಗಳು ಜಲಾವೃತಗೊಂಡಿದ್ದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಮುಸುಕಿನ ಜೋಳ, ಸೀಮೆ‌ ಹುಲ್ಲು, ಗುಲಾಬಿ ಹೂ ತೋಟ, ರಾಗಿ ಬೆಳೆ ನೀರಿನಲ್ಲಿ ನಿಂತಿದೆ. ರೇಷ್ಮೆ ಕಡ್ಡಿ ಮತ್ತು ತರಕಾರಿ ಬೆಳೆಗಳು ಮಳೆಯಿಂದಾಗಿ ಹಾನಿಗೆ ಒಳಗಾಗಿವೆ.

heavy rainfall in Several parts of Bengaluru mrq
ಬೆಂಗಳೂರು ಮಳೆ


ನೆಲಮಂಗಲದ ಲೇಔಟ್​​ಗಳು ಜಲಾವೃತ

ನೆಲಮಂಗಲದಲ್ಲಿ ರಾತ್ರಿ ಇಡೀ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿರುವ ಪರಿಣಾಮ ಅಮಾನಿ ಕೆರೆಯ ಕೋಡಿ ಬಿದ್ದಿದೆ. ಪರಿಣಾಮ ಕೆರೆ ಕೋಡಿ ಮಾರ್ಗದಲ್ಲಿನ ಲೇಔಟ್‌ಗಳಿಗೆ ಮಳೆ ನೀರು ನುಗ್ಗಿದೆ. ನೆಲಮಂಗಲದ ಎಂ‌.ಜಿ ರೋಡ್, ಬೈರವೇಶ್ವರ ಲೇಔಟ್, ಶೇಷು ಲೇಔಟ್, ಚನ್ನಪ್ಪ ಬಡಾವಣೆ, ಎಲೆತೋಟ, ಗಜಾರಿಯಾ ಲೇಔಟ್ ಜಲಾವೃತಗೊಂಡಿದ್ದು, ಮಳೆಯಿಂದಾಗಿ ನೆಲಮಂಗಲದಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಾಜರಹಳ್ಳಿ ಸರ್ಕಾರಿ ಶಾಲೆಯೊಳಗೆ ಮಳೆ ನೀರು ನುಗ್ಗಿದ್ದು, ಕಲಿಕಾ ಸಾಮಾಗ್ರಿಗಳು ನೀರಿನಲ್ಲಿ ತೇಲುತ್ತಿವೆ.

ನೀರನ್ನು ಮಿತವಾಗಿ ಬಳಸುವಂತೆ ಸೂಚನೆ

ಪ್ರತಿದಿನ ಟಿಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1450 MLD ನೀರು ಸರಬರಾಜು ಆಗುತ್ತಿತ್ತು. ಆದರೆ ನಿನ್ನೆ ರಾತ್ರಿ ಸೇರಿದಂತೆ 600 MLD ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 MLD ನೀರು ಸರಬರಾಜು ಸ್ಥಗಿತಗೊಂಡಿದೆ.  ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆಗಳಿವೆ. BWSSB ಯಿಂದ ಅಧಿಕೃತ ಸೂಚನೆ ಬರುವವರೆಗೆ ಮಿತವಾಗಿ ನೀರು ಬಳಕೆಗೆ ಮನವಿ ಮಾಡಲಾಗಿದೆ.

heavy rainfall in Several parts of Bengaluru mrq
ಬೆಂಗಳೂರು ಮಳೆ


ಇದನ್ನೂ ಓದಿ:  Bengaluru Rains: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ;  ತಗ್ಗು ಪ್ರದೇಶಗಳು ಜಲಾವೃತ, ಜನರ ಪರದಾಟ; ಕೆರೆಯಂತಾದ ಮೆಜೆಸ್ಟಿಕ್ ಬಸ್ ನಿಲ್ದಾಣ

BWSSB ಅಧ್ಯಕ್ಷ, ಇಂಜಿನಿಯರ್ ಇನ್ ಚೀಫ್, ಚೀಫ್ ಇಂಜಿನಿಯರ್ ಗಳು ಮಂಡ್ಯಕ್ಕೆ ತೆರಳಿದ್ದು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ BWSSB ಚೀಫ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ
Published by:Mahmadrafik K
First published: