• Home
  • »
  • News
  • »
  • state
  • »
  • Karnataka Rains: ಕರುನಾಡಿಗೆ ವರುಣಾಘಾತ; ಮೂರು ದಿನ 6 ಜಿಲ್ಲೆಗಳಿಗೆ ಅಲರ್ಟ್; ಕರಾವಳಿಯ ಅದೊಂದು ಜಿಲ್ಲೆಯಲ್ಲಿ ಮಳೆ ಕ್ಷೀಣ!

Karnataka Rains: ಕರುನಾಡಿಗೆ ವರುಣಾಘಾತ; ಮೂರು ದಿನ 6 ಜಿಲ್ಲೆಗಳಿಗೆ ಅಲರ್ಟ್; ಕರಾವಳಿಯ ಅದೊಂದು ಜಿಲ್ಲೆಯಲ್ಲಿ ಮಳೆ ಕ್ಷೀಣ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ನಾಲ್ಕೂ ಭಾಗಗಳಲ್ಲಿ ಅಕ್ಟೋಬರ್ 1ರಿಂದ ಈವರೆಗೆ ಎಷ್ಟು ಮಳೆ ಆಗಿದೆ, ಸಾಮಾನ್ಯವಾಗಿ ಎಷ್ಟು ಮಳೆ ಆಗಬೇಕಿತ್ತು ಎಂಬುದರ ಮಾಹಿತಿ ಈ ಕೆಳಗಿನಂತಿದೆ.

  • News18 Kannada
  • Last Updated :
  • Karnataka, India
  • Share this:

ಅಕ್ಟೋಬರ್ ವೇಳೆಗೆ ಮುಂಗಾರು (Monsoon Rains) ಅಬ್ಬರ ಇಳಿಕೆಯಾಗುವ ಸಮಯ. ಆದರೆ ಈ ಬಾರಿ ಎಲ್ಲಾ ಊಹೆಗಳನ್ನು ಮೀರಿ ವರುಣರಾಯ ಕರುನಾಡಿನಲ್ಲಿ (Karnataka Rains) ಅಬ್ಬರಿಸುತ್ತಿದ್ದಾನೆ. ಜುಲೈ, ಆಗಸ್ಟ್​ನಲ್ಲಿ ಅಬ್ಬರಿಸಿದ್ದ ವರುಣದೇವ (Rainfall) ಒಂದು ಬ್ರೇಕ್ ತೆಗೆದುಕೊಂಡು ಮತ್ತೆ ಸುರಿಯುತ್ತಿದ್ದಾನೆ. ಆಕಾಶಕ್ಕೆ ರಂಧ್ರವೇ ಬಿದ್ದಂತೆ ಮಳೆಯಾಗುತ್ತಿದೆ. ಈ ವರ್ಷ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚು ವರ್ಷಧಾರೆ ಆಗುತ್ತಿರುವ ಕಾರಣ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ. ಕೆಲವು ಕೆರೆಗಳು ಎರಡೆರಡು ಭಾರೀ ಕೋಡಿ ಬಿದ್ದ ಪರಿಣಾಮ ಕೃಷಿ ಭೂಮಿಗಳು (Flood) ಜಲಾವೃತಗೊಳ್ಳುತ್ತಿವೆ. ರಾಜಧಾನಿ ಬೆಂಗಳೂರು(Bengaluru Rains) ಈ ಬಾರಿ ಭೀಕರ ಪ್ರವಾಹಕ್ಕೆ (Bengaluru Floods) ತುತ್ತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಕ್ಟೋಬರ್ ಮೊದಲ ವಾರದಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣ ಆಗುತ್ತಿದ್ದು, ನಿರಂತರ ಮಳೆಗೆ ಸಿಲಿಕಾನ್ ಸಿಟಿ ಜನರು ಹೈರಾಣು ಆಗಿದ್ದಾರೆ.


ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ರಾಜ್ಯಾದ್ಯಂತ 2-3 ದಿನ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ರಾಜಧಾನಿಯಲ್ಲಿ ಮುಂದಿನ ಎರಡ್ಮೂರು ದಿನ ಮಳೆಯಾಗಲಿದ್ದು, ಹಂತ ಹಂತವಾಗಿ ಚಳಿ ಪ್ರಮಾಣ ಸಹ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಅಕ್ಟೋಬರ್​ನಲ್ಲಿ ಎಷ್ಟು ಮಳೆಯಾಗಿದೆ?


ಕಳೆದ 16 ದಿನಗಳಲ್ಲಿ ಅಕ್ಟೋಬರ್ ಅಧಿಕ ಮಳೆಯನ್ನು ಕಂಡಿದ್ದು, ವರುಣನ ನರ್ತನ ಮುಂದುವರಿದಿದೆ. ಮಳೆ ಪ್ರಮಾಣ ಅಳೆಯಲು ರಾಜ್ಯವನ್ನ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಅಂತ 4 ಭಾಗಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕೂ ಭಾಗಗಳಲ್ಲಿ ಅಕ್ಟೋಬರ್ 1ರಿಂದ ಈವರೆಗೆ ಎಷ್ಟು ಮಳೆ ಆಗಿದೆ, ಸಾಮಾನ್ಯವಾಗಿ ಎಷ್ಟು ಮಳೆ ಆಗಬೇಕಿತ್ತು ಎಂಬುದರ ಮಾಹಿತಿ ಈ ಕೆಳಗಿನಂತಿದೆ.


Heavy rainfall in october next three days yellow alert mrq
ದಕ್ಷಿಣ ಒಳನಾಡು ಮಳೆ


ಅಕ್ಟೋಬರ್ ಮಳೆ ಅಬ್ಬರ


ದಕ್ಷಿಣ ಒಳನಾಡು


ಸಾಮಾನ್ಯ: 82 ಮಿಮೀ


ಪ್ರಸ್ತುತ: 156 ಮಿಮೀ


ಹೆಚ್ಚಳ: ಶೇ.91


ಉತ್ತರ ಒಳನಾಡು


ಸಾಮಾನ್ಯ: 72 ಮಿಮೀ


ಪ್ರಸ್ತುತ: 119 ಮಿಮೀ


ಹೆಚ್ಚಳ: ಶೇ.65


Heavy rainfall in october next three days yellow alert mrq
ಉತ್ತರ ಒಳನಾಡು ಮಳೆ


ಮಲೆನಾಡು


ಸಾಮಾನ್ಯ: 95 ಮಿಮೀ


ಪ್ರಸ್ತುತ: 112 ಮಿಮೀ


ಹೆಚ್ಚಳ: ಶೇ.18


ಕರಾವಳಿ ಭಾಗದ ಮಳೆ


ಸಾಮಾನ್ಯ: 121 ಮಿಮೀ


ಪ್ರಸ್ತುತ: 109 ಮಿಮೀ


ಕ್ಷೀಣ: ಶೇ. -9


Heavy rainfall in october next three days yellow alert mrq
ಕರ್ನಾಟಕ ಮಳೆ


ನಾಲ್ಕೂ ಭಾಗಗಳೂ ಸೇರಿ ಇಡೀ ಕರ್ನಾಟಕದ 31 ಜಿಲ್ಲೆಗಳಲ್ಲಿ ಸಾಮಾನ್ಯವಾಗಿ 83 ಮಿಮೀ ಮಳೆ ಆಗಬೇಕಿತ್ತು. 16 ದಿನಗಲ್ಲಿ ಶೇ.55ರಷ್ಟು ಮಳೆ ಹೆಚ್ಚಳವಾಗಿದೆ. ಒಟ್ಟು 128 ಮಿಮೀ ಮಳೆಯಾಗಿದೆ. ಇಡೀ ರಾಜ್ಯದಲ್ಲಿ ಅಕ್ಟೋಬರ್​ನಲ್ಲಿ ಭಾರೀ ಮಳೆ ಆಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ ಕರಾವಳಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಕರಾವಳಿಯಲ್ಲಿ ಮಳೆ ಕ್ಷೀಣ


ಉತ್ತರ ಮತ್ತು ದಕ್ಷಿಣಕ್ಕೆ ಹೋಲಿಸಿದರೆ ಕರಾವಳಿ, ಮಲೆನಾಡಲ್ಲಿ ಕ್ಷೀಣವಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕೇವಲ ಶೇ.18 ಹೆಚ್ಚು ಮಳೆಯಾಗಿದ್ದು, ಕರಾವಳಿಯಲ್ಲಿ ಸಾಮಾನ್ಯಕ್ಕಿಂತ ಶೇ.9ರಷ್ಟು ಇಳಿಮುಖವಾಗಿದೆ.


ಇದನ್ನೂ ಓದಿ:  Crime News: ಪ್ರೀತಿಸಿ ಮದ್ವೆಯಾದ ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ


ಕೊಪ್ಪಳ, ರಾಮನಗರದಲ್ಲಿ ಮುಂದುವರಿದ ಮಳೆ


ಕೊಪ್ಪಳ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಆಗಿದೆ. ಗ್ರಾಮದಲ್ಲಿ ಚರಂಡಿ


ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆ ಹೆಚ್ಚಾಗಿದ್ದು, ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ.. ಇದ್ರಿಂದ ಜನರು ಪರದಾಡುವಂತಾಗಿದೆ.


ರಾಮನಗರ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಕನಕಪುರದಲ್ಲಿ ಸತತ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಆಗಿದೆ. ಕನಕಪುರ ಸಂಗಮದ ಮುಖ್ಯರಸ್ತೆಗೆ ಮಳೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯ್ತು.


ಇದನ್ನೂ ಓದಿBengaluru Potholes: ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್​ನಿಂದ ಬಿದ್ದ ಮಹಿಳೆ ಮೇಲೆ ಹರಿದ ಬಸ್; ಚಿಕಿತ್ಸೆ ಫಲಕಾರಿಯಾಗದೇ ಸಾವು


ಚಾಮರಾಜನಗರದಲ್ಲಿ ವೃದ್ಧೆ ಸಾವು


ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಆಲತ್ತೂರು ಗ್ರಾಮದಲ್ಲಿ ಭಾರೀ ಮಳೆಗೆ ವೆಂಕಟಮ್ಮ ಎಂಬ ವೃದ್ದೆಗೆ ಸೇರಿದ ಮನೆ ಕುಸಿದಿದೆ. ಮನೆಯಲ್ಲಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ

Published by:Mahmadrafik K
First published: