HOME » NEWS » State » HEAVY RAINFALL AT VIJAYAPURA DISTRICT IN TWO DAYS AND RED ALERT ANNOUNCED MVSV LG

ವಿಜಯಪುರ ಸೇರಿ ಉ.ಕ.ದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆ; 2 ದಿನ ರೆಡ್ ಅಲರ್ಟ್ ಘೋಷಣೆ

ವಿಜಯಪುರ ಜಿಲ್ಲೆಯಲ್ಲಿ 64 ಮಿ ಮಿ ಯಿಂದ 204 ಮಿ ಮಿ ಮಳೆ ಸಾಧ್ಯತೆ ಇದೆ.  ಎಲ್ಲರೂ ಎಚ್ಚರದಿಂದ ಇರಬೇಕಾಗಿದೆ.  ಈಗಾಗಲೇ ಪ್ರಕೃತಿ ವಿಕೋಪ ನಿರ್ವಹಣೆ ತಂಡಗಳಿಗೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. 

news18-kannada
Updated:October 13, 2020, 3:08 PM IST
ವಿಜಯಪುರ ಸೇರಿ ಉ.ಕ.ದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆ; 2 ದಿನ ರೆಡ್ ಅಲರ್ಟ್ ಘೋಷಣೆ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ, (ಅ. 13): ಮುಂದಿನ 48 ಗಂಟೆಗಳಲ್ಲಿ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮಳೆಯ ಕುರಿತು ರೆಡ್ ಅಲರ್ಟ್ ಜಾರಿ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದ್ದಾರೆ. ವಿಜಯಪುರದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಈಗಷ್ಟೇ ಈ ಕುರಿತು ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ.  ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರಿನ ಹಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಅತೀ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.  ಎಲ್ಲಾ ತಹಸೀಲ್ದಾರ್ ಗಳಿಗೆ ಈ ಕುರಿತು ಪತ್ರದ ಮೂಲಕ ಸೂಚನೆ ನೀಡಲಾಗುತ್ತಿದೆ.  ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚಿಸಲಾಗಿದೆ.  ಮಾಧ್ಯಮಗಳ ಮೂಲಕ, ವಾಟ್ಸಾಪ್ ಸಂದೇಶಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗುತ್ತಿದೆ.  ಅಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲಿ ಡಂಗುರದ ಮೂಲಕವೂ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ 64 ಮಿ ಮಿ ಯಿಂದ 204 ಮಿ ಮಿ ಮಳೆ ಸಾಧ್ಯತೆ ಇದೆ.  ಎಲ್ಲರೂ ಎಚ್ಚರದಿಂದ ಇರಬೇಕಾಗಿದೆ.  ಈಗಾಗಲೇ ಪ್ರಕೃತಿ ವಿಕೋಪ ನಿರ್ವಹಣೆ ತಂಡಗಳಿಗೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಸೂಚನೆ ನೀಡಲಾಗಿದೆ.  ಪ್ರತಿದಿನ ಮಳೆ ಪ್ರಮಾಣ ಮತ್ತು ಮಳೆಯಿಂದಾದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು., ಬೆಳೆಹಾನಿ ಪ್ರಮಾಣದ ಕುರಿತು ಈಗ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದರು.

ಮಕ್ಕಳ ಸೇರ್ಪಡೆಗೆ ಗ್ರಾಮೀಣ ಶಾಲೆಯ ಹೊಸ ಪ್ರಯೋಗ; ರೈಲು ಬೋಗಿಯಾಯಿತು ತರಗತಿ ಕಟ್ಟಡ

ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿದು ಈರುಳ್ಳಿ, ತೊಗರಿ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ಹಾಳಾಗಿವೆ.  ಅಷ್ಟೇ ಅಲ್ಲ, ನೂರಾರು ಮನೆಗಳಿಗೆ ಹಾನಿ ಉಂಟಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ

ವಿಜಯಪುರ ನಗರ 21.2 ಮಿಮಿ, ಭೂತನಾಳ 43, ಹಿಟ್ನಳ್ಳಿ 20.6. ಮಮದಾಪುರ 18, ಬಬಲೇಸ್ವರ 37.2, ತಿಕೋಟಾ 34, ಕನ್ನೂರ 31.8, ಬಸವನ ಬಾಗೇವಾಡಿ 21, ಮನಗೂಳಿ 35, ಹೂವಿನ ಹಿಪ್ಪರಗಿ 25.8, ಆಲಮಟ್ಟಿ 30.3, ಅರೆಶಂಕರ 10.4, ಮಟ್ಟಿಹಾಳ 25, ತಾಳಿಕೋಟೆ 15.4, ಇಂಡಿ 14.5, ನಾದ ಬಿಕೆ 15.2, ಹೊರ್ತಿ 24.2, ಹಲಸಂಗಿ 16, ಚಡಚಣ 36, ಸಿಂದಗಿ 25, ಆಲಮೇಲ 25.5, ರಾಮನಳ್ಳಿ 36.2, ದೇವರ ಹಿಪ್ಪರಗಿ 20.2, ಕೊಂಡಗೂಳಿ 17.2, ಕಡ್ಲೆವಾಡ ಪಿಸಿಎಚ್ 15 ಮಿಮಿ ಮಳೆ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
Published by: Latha CG
First published: October 13, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories